ಆ್ಯಪ್ನಗರ

ISL ಮತ್ತೊಮ್ಮೆ ಫೈನಲ್; ಬೆಂಗಳೂರಿಗೆ ಚೊಚ್ಚಲ ಕಿರೀಟ ಗುರಿ

ಭಾನುವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವು ಗೋವಾ ಎಫ್‌ಸಿ ಸವಾಲನ್ನು ಎದುರಿಸಲಿದೆ. ಇತ್ತಂಡಗಳು ಚೊಚ್ಚಲ ಕಿರೀಟ ಎದುರು ನೋಡುತ್ತಿದೆ.

Vijaya Karnataka Web 17 Mar 2019, 2:22 pm
ಮುಂಬಯಿ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿರುವ ಬೆಂಗಳೂರು ಎಫ್‌ಸಿ, ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದೆ.
Vijaya Karnataka Web bfc


2018ನೇ ಸಾಲಿನಲ್ಲಿ ಬೆಂಗಳೂರು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿತ್ತು. ಇದೀಗ ಸುನಿಲ್ ಛೆತ್ರಿ ಮುಂದಾಳತ್ವದಲ್ಲಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿದ್ದು, ಇತಿಹಾಸದ ಹೊಸ್ತಿಲಲ್ಲಿದೆ.

ಭಾನುವಾರ ನಡೆಯಲಿರುವ ರೋಚಕ ಫೈನಲ್‌ನಲ್ಲಿ ಗೋವಾ ಎಫ್‌ಸಿ ಸವಾಲನ್ನು ಬಿಎಫ್‌ಸಿ ಎದುರಿಸಲಿದೆ. 2015ನೇ ಸಾಲಿನಲ್ಲಿ ಗೋವಾ ಪ್ರಶಸ್ತಿಯನ್ನು ಗೆದ್ದಿತ್ತು.

ಇಲ್ಲಿ ಗಮನಾರ್ಹ ಅಂಶವೆಂದರೆ ಇತ್ತಂಡಗಳು ಫೈನಲ್‌ನಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧವೇ ಸೋಲು ಅನುಭವಿಸಿತ್ತು. ಆದರೆ ಈ ಬಾರಿ ಇತ್ತಂಡಗಳಲ್ಲಿ ಯಾವುದಾದರೂ ಒಂದು ತಂಡ ಚೊಚ್ಚಲ ಕಿರೀಟ ಧರಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ನಾಯಕ ಛೆತ್ರಿ ಜತೆಗೆ ವೆನೆಜುವೆಲಾ ಆಟಗಾರ ಮಿಕು ಹಾಗೂ ಉದಾಂತ ಸಿಂಗ್ ಬೆಂಗಳೂರು ಪಾಲಿಗೆ ನೆಚ್ಚಿನ ಆಟಗಾರರಾಗಿದ್ದಾರೆ. ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ನಿರ್ವಹಣೆ ಸಹ ನಿರ್ಣಾಯಕವೆನಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌