ಮುಂಬಯಿ-ಕೋಲ್ಕೊತಾ ಪಂದ್ಯ ನೀರಸ ಡ್ರಾ
ರಕ್ಷಣಾತ್ಮಕ ಆಟದ ಮೊರೆಹೋದ ಮುಂಬಯಿ ಸಿಟಿ ಎಫ್ಸಿ ತಂಡ ಇಂಡಿಯನ್ ಸೂಪರ್ ಲೀಗ್ನ 5ನೇ ಆವೃತ್ತಿಯ 38ನೇ ಪಂದ್ಯದಲ್ಲಿ ಪ್ರವಾಸಿ ಅಟ್ಲೆಟಿಕೊ ಡಿ'ಕೋಲ್ಕೊತಾ ವಿರುದ್ಧ ಗೋಲ್ ರಹಿತ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತು.
Agencies 25 Nov 2018, 5:00 am
ಮುಂಬಯಿ: ರಕ್ಷಣಾತ್ಮಕ ಆಟದ ಮೊರೆಹೋದ ಮುಂಬಯಿ ಸಿಟಿ ಎಫ್ಸಿ ತಂಡ ಇಂಡಿಯನ್ ಸೂಪರ್ ಲೀಗ್ನ 5ನೇ ಆವೃತ್ತಿಯ 38ನೇ ಪಂದ್ಯದಲ್ಲಿ ಪ್ರವಾಸಿ ಅಟ್ಲೆಟಿಕೊ ಡಿ'ಕೋಲ್ಕೊತಾ ವಿರುದ್ಧ ಗೋಲ್ ರಹಿತ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತು.
ಮುಂಬಯಿ ಫುಟ್ಬಾಲ್ ಅರೆನಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕೊತಾ ತಂಡ ಹೆಚ್ಚು ಆಕ್ರಮಣಕಾರಿ ಆಟವಾಡಿ ಗೋಲ್ ಗಳಿಸುವ ಅವಕಾಶಗಳನ್ನು ಸೃಷ್ಟಿಸಿತ್ತು. ಈ ಮೂಲಕ ಒಟ್ಟಾರೆ 4 ಬಾರಿ ಚೆಂಡನ್ನು ಗುರಿಯತ್ತ ಕಳುಹಿಸಿತಾದರೂ ಅದೃಷ್ಟ ಕೋಲ್ಕೊತಾ ತಂಡಕ್ಕೆ ಒಲಿಯಲಿಲ್ಲ. ಅಲ್ಲದೆ 14 ಬಾರಿ ಕಾರ್ನರ್ ಕಿಕ್ ಲಭ್ಯವಾದರೂ ಗೆಲುವಿಗೆ ಬೇಕಿದ್ಧ ಏಕೈಕ ಗೋಲ್ ಗಿಟ್ಟಿಸಲು ಮಾಜಿ ಚಾಂಪಿಯನ್ಸ್ ಕೋಲ್ಕೊತಾಗೆ ಸಾಧ್ಯವಾಗಲಿಲ್ಲ.