ಆ್ಯಪ್ನಗರ

ನಾನು ಯಾರಿಗೂ ಏನನ್ನು ಸಾಬೀತುಮಾಡಬೇಕಿಲ್ಲ: ಪೇಸ್

ಡೇವಿಸ್ ಕಪ್‌ಗಾಗಿನ ಭಾರತ ತಂಡದಿಂದ ಹಿರಿಯ ಅನುಭವಿ ಡಬಲ್ಸ್ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರನ್ನು ಕಡೆಗಣಿಸಿರಬಹುದು. ಆದರೆ ಪೇಸ್ ಮಾತ್ರ ಹಿಂಜರಿಯುವ ಯಾವುದೇ ಯೋಚನೆಯಲ್ಲಿಲ್ಲ. ಬದಲಾಗಿ ತನ್ನ ವೃತ್ತಿಜೀವನದ ಈ ಹಂತದಲ್ಲಿ ಯಾರಿಗೂ ಸಾಬೀತುಪಡಿಸಲು ಏನೂ ಇಲ್ಲ ಎಂದು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 15 Sep 2017, 12:07 pm
ಕೋಲ್ಕತ್ತಾ: ಡೇವಿಸ್ ಕಪ್‌ಗಾಗಿನ ಭಾರತ ತಂಡದಿಂದ ಹಿರಿಯ ಅನುಭವಿ ಡಬಲ್ಸ್ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರನ್ನು ಕಡೆಗಣಿಸಿರಬಹುದು. ಆದರೆ ಪೇಸ್ ಮಾತ್ರ ಹಿಂಜರಿಯುವ ಯಾವುದೇ ಯೋಚನೆಯಲ್ಲಿಲ್ಲ. ಬದಲಾಗಿ ತನ್ನ ವೃತ್ತಿಜೀವನದ ಈ ಹಂತದಲ್ಲಿ ಯಾರಿಗೂ ಸಾಬೀತುಪಡಿಸಲು ಏನೂ ಇಲ್ಲ ಎಂದು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.
Vijaya Karnataka Web ive nothing to prove my career speaks for itself paes
ನಾನು ಯಾರಿಗೂ ಏನನ್ನು ಸಾಬೀತುಮಾಡಬೇಕಿಲ್ಲ: ಪೇಸ್


1990ನೇ ಇಸವಿಯಲ್ಲಿ ತಮ್ಮ 16ನೇ ಹರೆಯದಲ್ಲೇ ಪೇಸ್ ಚೊಚ್ಚಲ ಬಾರಿಗೆ ಡೇವಿಸ್‌ ಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲದೆ ಡೇವಿಸ್ ಕಪ್ ಡಬಲ್ಸ್‌ನಲ್ಲಿ ದಾಖಲೆಯ 42 ಬಾರಿ ಗೆಲುವು ದಾಖಲಿಸಿದ ದಾಖಲೆಯೂ ಅವರ ಹೆಸರಲ್ಲಿದೆ.

ಪೇಸ್ ಅವರನ್ನು ಭಾರತ ತಂಡದ ಆಡದ ನಾಯಕನಾಗಿರುವ ಮಹೇಶ್ ಭೂಪತಿ ಹೊರದಬ್ಬಿದ್ದರು. ಆದರೂ ಇಲ್ಲಿಗೆ ಟೆನಿಸ್ ವೃತಿ ಜೀವನ ಕೊನೆಗೊಳಿಸಲು 44ರ ಹರೆಯದ ಪೇಸ್ ಬಯಸುತ್ತಿಲ್ಲ.

ನಾನೇನು ಸಾಬೀತುಮಾಡಬೇಕಾಗಿರುವುದು ಏನು ಇಲ್ಲ. ನನ್ನ ವೃತ್ತಿ ಜೀವನವೇ ಎಲ್ಲವನ್ನು ಹೇಳುತ್ತದೆ. ಈ ಹಂತದಲ್ಲೂ ಟೆನಿಸ್ ಆಡುತ್ತಿದ್ದೇನೆ ಯಾಕೆಂದರೆ ಟೆನಿಸ್ ಕ್ರೀಡೆಯನ್ನು ನಾನು ಪ್ರೀತಿಸುತ್ತಿದ್ದೇನೆ ಎಂದರು.

ದೇಶಕ್ಕಾಗಿ ಆಡಿದಾಗ ನನ್ನ ಶ್ರೇಷ್ಠ ಪ್ರದರ್ಶನವನ್ನೇ ನೀಡಿದ್ದೇನೆ. ದೇಶಕ್ಕಾಗಿ ಆಡುವಾಗ ಬಹಳ ಸಂತೋಷ ಹಾಗೂ ಹೆಮ್ಮೆಯನ್ನು ನೀಡಿದೆ. ಗ್ರ್ಯಾನ್‌ಸ್ಲಾಮ್‌ನಲ್ಲೂ ವೈಯಕ್ತಿಕವಾಗಿ ಆಡುವಾಗಲೂ ಕೂಡಾ ನನ್ನ ಧ್ವಜಕ್ಕಾಗಿ ಆಡುವ ಭಾವನೆಯುಂಟಾಗಿದೆ ಎಂದರು.

ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಬಾವುಟ ಎತ್ತರದಲ್ಲಿ ಹಾರಬೇಕೆಂಬ ಭಾವನೆ ನನ್ನದಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌