ಆ್ಯಪ್ನಗರ

ಮುಂಬಯಿ ಸಿಟಿಗೆ ಭರ್ಜರಿ ಜಯ

ದ್ವಿತೀಯಾರ್ಧದಲ್ಲಿ ಅಮೋಘ ಪ್ರದರ್ಶನವಿತ್ತ ಮುಂಬಯಿ ಸಿಟಿ ಎಫ್‌ಸಿ ಐಎಸ್‌ಎಲ್‌ 5ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

Agencies 4 Dec 2018, 5:00 am
ಹೊಸದಿಲ್ಲಿ : ದ್ವಿತೀಯಾರ್ಧದಲ್ಲಿ ಅಮೋಘ ಪ್ರದರ್ಶನವಿತ್ತ ಮುಂಬಯಿ ಸಿಟಿ ಎಫ್‌ಸಿ ಐಎಸ್‌ಎಲ್‌ 5ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
Vijaya Karnataka Web mumbai floor delhi with second half blitz
ಮುಂಬಯಿ ಸಿಟಿಗೆ ಭರ್ಜರಿ ಜಯ


ಇಲ್ಲಿನ ಜವಾಹರ್‌ಲಾಲ್‌ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬಯಿ ತಂಡ 4-2 ಗೋಲ್‌ಗಳಿಂದ ಡೆಲ್ಲಿಗೆ ಸೋಲುಣಿಸಿತು. ಆತಿಥೇಯ ಡೆಲ್ಲಿ ಪರ ಲಾಲ್‌ಲಿಯಾನ್ಜುಲಾ ಚಾಂಗ್ಟೆ (3ನೇ ನಿ.) ಮತ್ತು ಗಿಯಾನ್ನಿ (64ನೇ ನಿ.) ತಲಾ ಒಂದು ಗೋಲ್‌ ಗಳಿಸಿದರೆ, ಪ್ರವಾಸಿ ಮುಂಬಯಿ ಪರ ರಫೇಲ್‌ ಬಾಸ್ಟೋಸ್‌ (49ನೇ ನಿ. ಪೆನಾಲ್ಟಿ), ಮಾರ್ಟಿ ಕ್ರೆಸ್ಪಿ (61ನೇ ನಿ. ಉಡುಗೊರೆಯ ಗೋಲ್‌), ರಾಯ್ನೀರ್‌ ಫರ್ನಾಡಿಸ್‌(69ನೇ ನಿ.) ಮತ್ತು ಪಾಲೊ ಮಚಾಡೊ(80ನೇ ನಿ.) ತಲಾ ಒಂದು ಗೋಲ್‌ ದಾಖಲಿಸಿದರು.

ಪ್ರಥಮಾರ್ಧಕ್ಕೆ 0-1ರಲ್ಲಿ ಹಿನ್ನಡೆ ಅನುಭವಿಸಿದ್ದ ಮುಂಬಯಿ ಸಿಟಿ ಎಫ್‌ಸಿ, ದ್ವಿತೀಯಾರ್ಧದಲ್ಲಿ ನಾಲ್ಕು ಗೋಲ್‌ ಗಳಿಸಿ ತನ್ನ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು. ಒಂದು ಹಂತದಲ್ಲಿ ಇತ್ತಂಡಗಳು 2-2ರಲ್ಲಿ ಸಮಬಲದ ಹೋರಾಟ ನೀಡಿದರೂ ಅಂತಿಮವಾಗಿ ಮುಂಬಯಿ ಪಾರಮ್ಯ ಮೆರೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌