ಆ್ಯಪ್ನಗರ

ಸಿರಿಂಜ್‌ ಪತ್ತೆ ಸಂಕಷ್ಟದಲ್ಲಿ ಭಾರತೀಯ ಸ್ಪರ್ಧೆಗಳು

ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಸಿರಿಂಜ್‌ ಬಳಕೆ ನಿಷೇಧ ನೀತಿಯನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಭಾರತದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಪರ್ಧಿಗಳು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಆದರೆ ಭಾರತ ಯಾವುದೇ ಡೋಪಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂಬ ಬಲವಾದ ನಂಬಿಕೆ ಹೊಂದಿದೆ.

Agencies 3 Apr 2018, 5:00 am
ಕಾಮನ್‌ವೆಲ್ತ್‌ ಕ್ರೀಡಾಕೂಟ: ಸದ್ಯ ಡೋಪಿಂಗ್‌ ಅಪಮಾನ ಇಲ್ಲ
Vijaya Karnataka Web no dope shame but needles could land indians in trouble at cwg
ಸಿರಿಂಜ್‌ ಪತ್ತೆ ಸಂಕಷ್ಟದಲ್ಲಿ ಭಾರತೀಯ ಸ್ಪರ್ಧೆಗಳು

ಗೋಲ್ಡ್‌ ಕೋಸ್ಟ್‌

ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಸಿರಿಂಜ್‌ ಬಳಕೆ ನಿಷೇಧ ನೀತಿಯನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಭಾರತದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಪರ್ಧಿಗಳು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಆದರೆ ಭಾರತ ಯಾವುದೇ ಡೋಪಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂಬ ಬಲವಾದ ನಂಬಿಕೆ ಹೊಂದಿದೆ.

ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡೇವಿಡ್‌ ಗ್ರೆವೆಂಬೆರ್ಗ್‌, ಭಾರತೀಯ ಸ್ಪರ್ಧಿಗಳಿದ್ದ ಕೊಠಡಿಯಲ್ಲಿ ಸಿರಿಂಜ್‌ ಪತ್ತೆ ವಿಷಯಕ್ಕೆ ಸಂಬಂಧಿಸಿದಂತೆ ಸಿಜಿಎಫ್‌(ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌) ಪ್ರಾಥಮಿಕ ತನಿಖೆ ಆರಂಭಿಸಿದೆ. ಆದರೆ ಭಾರತವನ್ನು ಗುರಿಯಾಗಿಸಿಕೊಂಡು ತನಿಖೆ ಆರಂಭಿಸಿಲ್ಲ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಭಾರತೀಯ ಬಾಕ್ಸರ್‌ಗಳು ಸಿಲುಕಿರುವ ಬಗ್ಗೆ ಉಹಾಪೋಹಾಗಳು ಗರಿಗೆದರುತ್ತಿರುವ ಕುರಿತು ಕಾಮನ್‌ವೆಲ್ತ್‌ ಗೇಮ್ಸ್‌ ಜತೆಗೆ ಸಿಜಿಎಫ್‌ ಮಾತುಕತೆ ನಡೆಸಿದೆ. ಏಪ್ರಿಲ್‌ 4ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಏ.5ರಂದು ಕ್ರೀಡಾಕೂಟ ಆರಂಭವಾಗಲಿದೆ.

ಈ ಮಧ್ಯೆ,''ಸೋಮವಾರ ನಮ್ಮ ವೈದ್ಯಕೀಯ ಆಯೋಗ ಜತೆ ಸಭೆಯಲ್ಲಿ ತೊಡಗಿಸಿಕೊಳ್ಳುವಂತೆ ಸಿಜಿಎ ಕರೆ ನೀಡಿದೆ, '' ಎಂದು ಗ್ರೆವೆಂಬೆರ್ಗ್‌ ತಿಳಿಸಿದ್ದಾರೆ. ಭಾರತೀಯ ಸ್ಪರ್ಧಿಗಳು ಈ ಘಟನೆಯಲ್ಲಿ ಯಾವುದೇ ರೀತಿಯ ತಪ್ಪೆಸಗಿಲ್ಲ ಎನ್ನಲಾಗಿದೆ.

ಕ್ರೀಡಾ ಗ್ರಾಮದ ಒಂದೇ ಸೂರಿನಡಿ ತಂಗಿದ್ದ ಇತರ ತಂಡಗಳನ್ನೊಳಗೊಂಡ ಕೊಠಡಿಯಲ್ಲಿ ಈ ಸಿರಿಂಜ್‌ಗಳು ಪತ್ತೆಯಾಗಿದ್ದವು. ಈ ಕುರಿತು ಸೋಮವಾರ ಖಚಿತಪಡಿಸಿರುವ ಉನ್ನತಾಧಿಕಾರಿಯೊಬ್ಬರು, ಭಾರತೀಯರಿದ್ದ ಕೊಠಡಿಯಲ್ಲಿ ಸಿರಿಂಜ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಅವರು ಯಾವುದೇ ರೀತಿಯ ಡೋಪಿಂಗ್‌ ಉಲ್ಲಂಘನೆ ಮಾಡಿರುವುದನ್ನು ನಿರಾಕರಿಸಿದ್ದಾರೆ.

''ಅಲ್ಲಿ ಯಾವುದೇ ರೀತಿಯ ಡೋಪಿಂಗ್‌ ಉಲ್ಲಂಘನೆಯಾಗಿಲ್ಲ. ಏಕೆಂದರೆ ಸಿರಿಂಜ್‌ಗಳನ್ನು ಬಹು ವಿಟಾಮಿನ್‌ ಚುಚ್ಚು ಮದ್ದುವಾಗಿ ಬಳಸಿಕೊಳ್ಳಲಾಗಿದೆ. ಬಾಕ್ಸರ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಅವರು ಯಾವುದೇ ಡೋಪಿಂಗ್‌ಉಲ್ಲಂಘನೆ ಮಾಡಿಲ್ಲ,'' ಎಂದು ಭಾರತ ತಂಡದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ, ಸಿಜಿಎಫ್‌ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡುತ್ತಿದ್ದೇವೆ,'' ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌