ಆ್ಯಪ್ನಗರ

ಜೊಕೊವಿಚ್‌ ವಿಂಬಲ್ಡನ್‌ ಚಾಂಪಿಯನ್‌; 12ನೇ ಶ್ರೇಯಾಂಕ ಆಟಗಾರನಿಗೆ 13ನೇ ಗ್ರ್ಯಾಂಡ್‌ಸ್ಲಾಮ್‌

ನೇರ ಸೆಟ್‌ಗಳಲ್ಲಿ ಶರಣಾದ ಕೆವಿನ್‌ ಆಂಡರ್‌ಸನ್‌

Vijaya Karnataka Web 15 Jul 2018, 9:17 pm
ಲಂಡನ್‌: ಅತ್ಯಂತ ಶಿಸ್ತುಬದ್ಧ ಹಾಗೂ ಆಕ್ರಮಣಾಕಾರಿ ಆಟ ಪ್ರದರ್ಶಿಸಿದ ಸರ್ಬಿಯಾ ಹುಲಿ ನೋವಾಕ್‌ ಜೋಕೊವಿಚ್‌, ಕೆವಿನ್‌ ಆಂಡರ್‌ಸನ್‌ ವಿರುದ್ಧ ಜಯಗಳಿಸಿ ಪ್ರಸಕ್ತ ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು.
Vijaya Karnataka Web ನೋವಾಕ್‌ ಜೊಕೊವಿಚ್‌
ನೋವಾಕ್‌ ಜೊಕೊವಿಚ್‌


ವಿಂಬಲ್ಡನ್‌ ಸೆಂಟರ್‌ಕೋರ್ಟ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ನೋವಾಕ್‌ ಜೊಕೊವಿಚ್‌, ದಕ್ಷಿಣ ಆಫ್ರಿಕಾದ ಕೆವಿನ್‌ ಆಂಡರ್‌ಸನ್‌ ವಿರುದ್ಧ 6-2, 6-2, 7-6 (7-3) ನೇರ ಸೆಟ್‌ಗಳಲ್ಲಿ ಜಯಗಳಿಸಿದರು.

ಇದರೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ 12ನೇ ಶ್ರೇಯಾಂಕದ ಆಟಗಾರನಾಗಿ ಕಣಕ್ಕಿಳಿದಿದ್ದ ನೋವಾಕ್‌ ಜೊಕೊವಿಚ್‌ 13ನೇ ಬಾರಿಗೆ ಗ್ರ್ಯಾಂಡ್‌ ಸ್ಲಾಮ್‌ ಟ್ರೋಫಿ ಗೆದ್ದುಕೊಂಡರು.

ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ನೋವಾಕ್‌ ಜೊಕೊವಿಚ್‌ ಯಾವ ಕ್ಷಣದಲ್ಲಿಯೂ ಎದುರಾಳಿ ಚೇತರಿಸಿಕೊಳ್ಳಲು ಬಿಡಲಿಲ್ಲ. ತಮ್ಮ ಶಕ್ತಿಯುತ ಸರ್ವ್‌, ಬ್ಯಾಕ್‌ ಹ್ಯಾಂಡ್‌, ಫೋರ್‌ ಹ್ಯಾಂಡ್‌ಗಳಿಂದ ಕೆವಿನ್‌ ಆಂಡರ್‌ಸನ್‌ರನ್ನು ಕೋರ್ಟ್‌ನುದ್ದಕ್ಕೂ ಓಡಾಡಿಸಿದರು.

ತಮ್ಮ ಅನುಭವನನ್ನೆಲ್ಲ ಧಾರೆ ಎರೆದ ನೋವಾಕ್‌ ಜೊಕೊವಿಚ್‌ ನಿರೀಕ್ಷೆಯಂತೆ ನಾಲ್ಕನೇ ಬಾರಿಗೆ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌