ಆ್ಯಪ್ನಗರ

ಬೆನೆಟ್‌ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣ ಉದ್ಘಾಟಿಸಿದ ಗೋಪಿಚಂದ್‌

ಟಿಎನ್‌ಎನ್‌ ಹೊಸದಿಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌ ಮತ್ತು ಮಾಜಿ ಅಲ್‌ ಇಂಗ್ಲೆಂಡ್‌ ಚಾಂಪಿಯನ್‌ ಪುಲ್ಲೇಲ ಗೋಪಿಚಂದ್‌, ಗ್ರೇಟರ್‌ ನೊಯ್ಡಾ ಕ್ಯಾಂಪಸ್‌ನಲ್ಲಿ ...

TNN 16 Jan 2018, 11:02 am

ಹೊಸದಿಲ್ಲಿ : ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌ ಮತ್ತು ಮಾಜಿ ಅಲ್‌ ಇಂಗ್ಲೆಂಡ್‌ ಚಾಂಪಿಯನ್‌ ಪುಲ್ಲೇಲ ಗೋಪಿಚಂದ್‌, ಗ್ರೇಟರ್‌ ನೊಯ್ಡಾ ಕ್ಯಾಂಪಸ್‌ನಲ್ಲಿ ನಿರ್ಮಾಣವಾಗಿರುವ ಬೆನೆಟ್‌ ವಿಶ್ವವಿದ್ಯಾಲಯದ ನೂತನ ಕ್ರೀಡಾ ಸಂಕೀರ್ಣವನ್ನು ಸೋಮವಾರ ಉದ್ಘಾಟಿಸಿದರು.

Vijaya Karnataka Web p gopichand inaugurates bennett university sports complex
ಬೆನೆಟ್‌ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣ ಉದ್ಘಾಟಿಸಿದ ಗೋಪಿಚಂದ್‌


ದ್ರೋಣಾಚಾರ್ಯ, ಅರ್ಜುನ ಹಾಗೂ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಗೋಪಿಚಂದ್‌, ಕೋಚ್‌ ಆಗಿಯೇ ದೇಶವನ್ನು ಪ್ರಬಲ ಬ್ಯಾಡ್ಮಿಂಟನ್‌ ದೇಶವಾಗಿ ರೂಪಿಸುವಲ್ಲಿ ಏಕಾಂಗಿಯಾಗಿ ಶ್ರಮಿಸುತ್ತಿದ್ದಾರೆ. ಗೋಪಿಚಂದ್‌ ಅವರಡಿ ತರಬೇತಿ ಪಡೆಯುತ್ತಿರುವ ಪ್ರಸ್ತುತ ವಿಶ್ವದ 3ನೇ ರಾರ‍ಯಂಕ್‌ನಲ್ಲಿರುವ ಹಾಗೂ 2017ರಲ್ಲಿ ನಾಲ್ಕು ಸೂಪರ್‌ ಸೀರೀಸ್‌ ಕಿರೀಟ ಗೆದ್ದಿರುವ ಕೆ.ಶ್ರೀಕಾಂತ್‌, ವಿಶ್ವದ 3ನೇ ರ‍್ಯಾಂಕ್‌ನ ಹಾಗೂ ಒಲಿಂಪಿಕ್‌ ಮತ್ತು ವಿಶ್ವಚಾಂಪಿಯನ್‌ ಪದಕ ವಿಜೇತೆ ಪಿ.ವಿ. ಸಿಂಧೂ, ವಿಶ್ವದ 10ನೇ ರ‍್ಯಾಂಕ್‌ನಲ್ಲಿರುವ ಹಾಗೂ ಲಂಡನ್‌ ಒಲಿಂಪಿಕ್ಸ್‌ ಪದಕ ವಿಜೇತ ಸೈನಾ ನೆಹ್ವಾಲ್‌ ಸೇರಿದಂತೆ ದೇಶದ ಅಗ್ರಮಾನ್ಯ ಆಟಗಾರರು ಗೋಪಿಚಂದ್‌ ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.


ಬೆನೆಟ್‌ ವಿಶ್ವವಿದ್ಯಾಲಯದ ನೂತನ ಕ್ರೀಡಾ ಸಂಕೀರ್ಣವು ಮೂರು ಸ್ಕ್ವಾಷ್‌ ಕೋರ್ಟ್‌, ತಲಾ ಒಂದು ಬ್ಯಾಡ್ಮಿಂಟನ್‌ ಮತ್ತು ಟೆನಿಸ್‌ ಕೋರ್ಟ್‌, ಈಜು ಕೋಳ, ಜಿಮ್ನಾಷಿಯಂ, ಒಳಾಂಗಣ ಕ್ರೀಡಾಂಗಣ ಹಾಗೂ ಬಹುಪಯೋಗಿ ಅರೇನಾವನ್ನು ಒಳಗೊಂಡಿದೆ. ಇದಲ್ಲದೆ ಬಾಸ್ಕೆಟ್‌ಬಾಲ್‌, ಫುಟ್ಬಾಲ್‌ ಮತ್ತು ವಾಲಿಬಾಲ್‌ ಆಟದ ಮೈದಾನಗಳು ಸಹ ಈ ಅರೇನಾದಲ್ಲಿವೆ. ಮುಂಬರುವ ವರ್ಷಗಳಲ್ಲಿ ಕ್ರಿಕೆಟ್‌ ಮತ್ತು ಕಬಡ್ಡಿ ಮೈದಾನ ಹಾಗೂ ತರಬೇತಿ ಪಿಚ್‌ಗಳನ್ನು ಅಳವಡಿಸುವುದಾಗಿ ಬೆನ್ನಟ್‌ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಗೋಪಿಚಂದ್‌,''ಅನೇಕ ಕ್ರೀಡಾ ಸೌಲಭ್ಯಗಳನ್ನೊಳಗೊಂಡ ಇಂಥ ಸಂಕೀರ್ಣ ವೀಕ್ಷಿಸುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ದೇಶದ ಕೆಲವೇ ಕೆಲವು ಮಂದಿ ಇಂತಹ ಸುಂದರ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. ಇಂತಹ ಅದ್ಭುತ ಯೋಜನೆಗೆ ಶ್ರಮಿಸಿದ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು,'' ಎಂದು ಹೇಳಿದ್ದಾರೆ.



2016ರಲ್ಲಿ ಸ್ಥಾಪನೆಯಾದ ಬೆನೆಟ್‌ ವಿಶ್ವವಿದ್ಯಾಲಯ ದೇಶದ ಮುಂಚೂಣಿ ಸಾಂಸ್ಥಿಕ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಎಂಬಿಎ, ಬಿ.ಟೆಕ್‌ ಮತ್ತು ಪಿಎಚ್‌.ಡಿ ಪ್ರೋಗ್ರಾಂಗಳನ್ನೊಳಗೊಂಡಿರುವ ಈ ಶೈಕ್ಷ ಣಿಕ ವಿಶ್ವವಿದ್ಯಾಲಯ, ವಿಶ್ವದ ಬ್ಯಾಬ್ಸನ್‌ ಕಾಲೇಜ್‌, ಜಾರ್ಜಿಯಾ ಟೆಕ್‌ ಮತ್ತು ಇಡಿಎಕ್ಸ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಾಂಸ್ಥಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಒಳಗೊಂಡಿದೆ. ಆಧುನಿಕ ಸೌಲಭ್ಯಗಳನ್ನೊಳಗೊಂಡು 36 ಎಕೆರೆ ಕ್ಯಾಂಪಸ್‌ ಹೊಂದಿರುವ ವಿಶ್ವವಿದ್ಯಾಲಯದಲ್ಲಿ ಸುಮಾರು 13 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌