ಆ್ಯಪ್ನಗರ

5ನೇ ಸ್ಥಾನಕ್ಕೆ ಕುಸಿದ ಸಿಂಧೂ

ಪಿಟಿಐ ಹೊಸದಿಲ್ಲಿ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೇರಿದ ಜೀವನ ಶ್ರೇಷ್ಠ ಸಾಧನೆ ತೋರಿದ್ದ ಪಿವಿ...

Vijaya Karnataka Web 14 Apr 2017, 4:00 am

ಹೊಸದಿಲ್ಲಿ : ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೇರಿದ ಜೀವನ ಶ್ರೇಷ್ಠ ಸಾಧನೆ ತೋರಿದ್ದ ಪಿ.ವಿ.ಸಿಂಧೂ ಬ್ಯಾಡ್ಮಿಂಟನ್‌ ವಿಶ್ವ ಫೆಡರೇಷನ್‌ (ಬಿಡಬ್ಲ್ಯುಎಫ್‌) ನೂತನವಾಗಿ ಗುರುವಾರ ಬಿಡುಗಡೆ ಮಾಡಿದ ಮಹಿಳಾ ಸಿಂಗಲ್ಸ್‌ ರಾರ‍ಯಂಕಿಂಗ್‌ನಲ್ಲಿ ಮೂರು ಸ್ಥಾನ ಕುಸಿತದೊಂದಿಗೆ 5ನೇ ಸ್ಥಾನಕ್ಕೆ ಜಾರಿದ್ದಾರೆ.

ಕಳೆದ ವಾರ ಮಲೇಷ್ಯಾ ಓಪನ್‌ ಸೂಪರ್‌ ಸೀರೀಸ್‌ನಲ್ಲಿ ಸಿಂಧೂ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದು, ರಾರ‍ಯಂಕಿಂಗ್‌ ಕುಸಿತಕ್ಕೆ ಕಾರಣವಾಗಿದೆ. ಇದೇ ಟೂರ್ನಿಯಲ್ಲಿ ಸೈನಾ ನೆಹ್ವಾಲ್‌ ಆರಂಭಿಕ ಸುತ್ತಿನಲ್ಲೇ ಹೊರಬಿದ್ದರೂ ಒಂಬತ್ತನೆ ಸ್ಥಾನದಲ್ಲೇ ಅಬಾಧಿತರಾಗಿದ್ದಾರೆ. ತೈವಾನ್‌ನ ತಾಯ್‌ ಟ್ಜು ಯಿಂಗ್‌ ಮೊದಲ ಸ್ಥಾನ ಗಳಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಜಯ್‌ ಜಯರಾಮ್‌ 14ನೇ ಸ್ಧಾನ ಹೊಂದಿದ್ದು ಭಾರತೀಯರ ಪೈಕಿ ಅತ್ಯಧಿಕ ರಾರ‍ಯಂಕ್‌ ಹೊಂದಿದ ಆಟಗಾರ ಎ

Vijaya Karnataka Web p v shindu loses of three places bwf ranking
5ನೇ ಸ್ಥಾನಕ್ಕೆ ಕುಸಿದ ಸಿಂಧೂ

ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌