ಆ್ಯಪ್ನಗರ

ಆಡ್ವಾನಿಗೆ 17ನೇ ವಿಶ್ವ ಕಿರೀಟದ ಮುಕುಟ

ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ ಪಿಟಿಐ ದೋಹಾ ಭಾರತದ ಸ್ನೂಕರ್‌ ಮತ್ತು ಬಿಲಿಯರ್ಡ್ಸ್ ತಾರೆ ಪಂಕಜ್‌ ಆಡ್ವಾಣಿ ಇಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ...

TNN 12 Nov 2017, 10:02 pm

ದೋಹಾ: ಭಾರತದ ಸ್ನೂಕರ್‌ ಮತ್ತು ಬಿಲಿಯರ್ಡ್ಸ್ ತಾರೆ ಪಂಕಜ್‌ ಆಡ್ವಾಣಿ ಇಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ನ ಮೈಕ್‌ ರಸ್ಸೆಲ್‌ ವಿರುದ್ಧ ಗೆದ್ದು ತಮ್ಮ 17ನೇ ವಿಶ್ವ ಕಿರೀಟ ಗೆದ್ದ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಬೆಂಗಳೂರಿನ ಪಂಕಜ್‌ ಆಡ್ವಾಣಿ 6-2(0-155, 150-128, 92-151, 151-0, 151-6, 151-0, 150-58, 150-21) ಫ್ರೇಮ್‌ಗಳಿಂದ ರಸೆಲ್‌ ಅವರನ್ನು ಮಣಿಸಿ ಕಳೆದ ವರ್ಷ ಬೆಂಗಳೂರಿನಲ್ಲಿ ಜಯಿಸಿದ್ದ 150ವರೆಗೆ ಮಾದರಿ ಕಿರೀಟವನ್ನು ಉಳಿಸಿಕೊಂಡಿದ್ದಾರೆ.

ತಮ್ಮ ಅತ್ಯುತ್ತಮ 11 ಫೈನಲ್‌ಗಳಲ್ಲಿ ಒಂದಾದ ಫೈನಲ್‌ನಲ್ಲಿ ಭಾರತೀಯ ಆಟಗಾರ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡರು. ಸ್ಥಿರ ಆಟ ಪ್ರದರ್ಶಿಸಿದ ಇಂಗ್ಲೆಂಡ ಆಟಗಾರ ಮೊದಲ ಫ್ರೇಮ್‌ನಲ್ಲಿ ಬ್ರೇಕ್‌ ನೀಡದೆ 155 ಅಂಕ ಕಲೆಹಾಕುವ ಮೂಲಕ ಅಚ್ಚರಿ ಮೂಡಿಸಿದರು.

ಆದರೆ ಮುಂದಿನ ಫ್ರೇಮ್‌ನಲ್ಲಿ ಎಚ್ಚೆತ್ತುಕೊಂಡ ಆಡ್ವಾಣಿ ತಿರುಗೇಟು ನೀಡಿದರು. ಇದರ ನಡುವೆಯೂ ಆತಂಕಗೊಳ್ಳದ ರಸೆಲ್‌ ಹೋರಾಟ ತೋರಿದರಾದರೂ ಪಂಕಜ್‌ ಅವರ ಅನುಭವದ ಎದುರು ಮಂಕಾದರು. ತೃತೀಯ ಫ್ರೇಮ್‌ನಲ್ಲಿ ಮತ್ತೆ ಸೋಲುಂಡ ವಿಶ್ವ ಚಾಂಪಿಯನ್‌ ಪಂಕಜ್‌, ನಾಲ್ಕನೇ ಫ್ರೇಮ್‌ನಿಂದ ನಿಖರ ಗುರಿ ಕಾಯ್ದುಕೊಳ್ಳುವ ಮೂಲಕ ಏಕಪಕ್ಷೀಯ ಪ್ರದರ್ಶನ ತೋರಿದರು.

ಈ ಪ್ರಶಸ್ತಿ ಜಯಿಸುವುದರೊಂದಿಗೆ ಆಡ್ವಾಣಿ, ಭಾರತೀಯರ ಪೈಕಿ ಗರಿಷ್ಠ ವಿಶ್ವ ಕಿರೀಟಗಳನ್ನು ಗೆದ್ದು ಆಟಗಾರ ಎನಿಸಿದ್ದಾರೆ. ಫೈನಲ್‌ಗೂ ಮುನ್ನ ಆಡ್ವಾಣಿ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದವರೇ ಆದ ರುಪೇಶ್‌ ಶಾ ವಿರುದ್ಧ 5-2 ಫ್ರೇಮ್‌ನಲ್ಲಿ ಗೆದ್ದರೆ, ರಸೆಲ್‌ ಮತ್ತೊಂದು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಎದುರು 5-1 ಫ್ರೇಮ್‌ಗಳಿಂದ ಗೆದ್ದು ಫೈನಲ್‌ಗೆ ಮುನ್ನಡೆದಿದ್ದರು.

ಇದೀಗ ಆಡ್ವಾಣಿ ಸೋಮವಾರ ಆರಂಭವಾಗಲಿರುವ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಲಾಂಗ್‌ಅಪ್‌ ಮಾದರಿಯಲ್ಲಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.

ಆಡ್ವಾಣಿ ಗೆದ್ದ ವಿಶ್ವ ಕಿರೀಟಗಳು

ವಿಶ್ವ ಕಿರೀಟಗಳು

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌(ಪಾಯಿಂಟ್ಸ್‌ ಮಾದರಿ -4)

2016, 2014, 2008, 2005

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌(ಟೈಮ್‌ ಮಾದರಿ-7)

2015, 2014, 2012, 2009, 2008, 2007, 2005

ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌(2015, 2003)

ಐಬಿಎಸ್‌ಎಫ್‌ ವಿಶ್ವ ಸಿಕ್ಸ್‌ ರೆಡ್‌ ಸ್ನೂಕರ್‌ ಚಾಂಪಿಯನ್‌ (2015, 2014)

ದಿ ವಿಶ್ವ ಟೀಮ್‌ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ (2014)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌