ಆ್ಯಪ್ನಗರ

ಆಡ್ವಾಣಿ ಮುಡಿಗೆ 21ನೇ ಕಿರೀಟ

ಕ್ಯೂ ಸ್ಪೋರ್ಟ್ಸ್ ದಿಗ್ಗಜ ಭಾರತದ ಪಂಕಜ್‌ ಆಡ್ವಾಣಿ ಭಾನುವಾರ ಇಲ್ಲಿ ನಡೆದ ಐಬಿಎಸ್‌ಎಫ್‌ ವರ್ಲ್ಡ್‌ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ (ದೀರ್ಘ ಮತ್ತು ಕಿರು ಮಾದರಿ ಸ್ಪರ್ಧೆ) 4ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Agencies 19 Nov 2018, 5:00 am
ಯಾಂಗನ್‌ (ಮ್ಯಾನ್ಮಾರ್‌): ಕ್ಯೂ ಸ್ಪೋರ್ಟ್ಸ್ ದಿಗ್ಗಜ ಭಾರತದ ಪಂಕಜ್‌ ಆಡ್ವಾಣಿ ಭಾನುವಾರ ಇಲ್ಲಿ ನಡೆದ ಐಬಿಎಸ್‌ಎಫ್‌ ವರ್ಲ್ಡ್‌ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ (ದೀರ್ಘ ಮತ್ತು ಕಿರು ಮಾದರಿ ಸ್ಪರ್ಧೆ) 4ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.
Vijaya Karnataka Web pankaj wins grand double extends world title tally to 21
ಆಡ್ವಾಣಿ ಮುಡಿಗೆ 21ನೇ ಕಿರೀಟ


ಇದರೊಂದಿಗೆ ಬೆಂಗಳೂರು ತರುಣನ ವಿಶ್ವ ಪ್ರಶಸ್ತಿಗಳ ಸಂಖ್ಯೆ 21ಕ್ಕೇರಿದೆ. ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನವರೇ ಆದ ಬಿ.ಭಾಸ್ಕರ್‌ ಬೆಳ್ಳಿ ಪದಕ ಗೆದ್ದಿದ್ದಾರೆ.

ಕಳೆದ ವರ್ಷ ಬಿಲಿಯರ್ಡ್ಸ್ ಕಿರು ಮಾದರಿಯಲ್ಲಿ ಪ್ರಶಸ್ತಿ ಮುಡಿಗೇರಿಸಿದ್ದ ಪಂಕಜ್‌ ದೀರ್ಘ ಮಾದರಿಯಲ್ಲಿ ಕಂಚಿಗೆ ಸಮಾಧಾನ ಪಟ್ಟುಕೊಂಡಿದ್ದರು. ಅದಾದ ಬಳಿಕ ಸ್ನೂಕರ್‌ನಲ್ಲೂ ಮೇರು ಸಾಧನೆ ಮಾಡಿದ್ದರು.

ಜಾಗತಿಕ ಮಟ್ಟದಲ್ಲಿ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಎರಡನ್ನೂ ಆಡುವ ಹಾಗೂ ಎರಡರಲ್ಲೂ ನಿರಂತರವಾಗಿ ಪ್ರಶಸ್ತಿ ಗೆಲ್ಲುತ್ತಿರುವ ಜಗತ್ತಿನ ಏಕಮೇವ ಆಟಗಾರ ಎನಿಸಿಕೊಂಡಿದ್ದಾರೆ ಪಂಕಜ್‌.

ಈ ವರ್ಷವೊಂದರಲ್ಲೇ ಪಂಕಜ್‌ 3 ವಿಶ್ವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌