ಆ್ಯಪ್ನಗರ

ಪಾಸ್‌ಪೋರ್ಟ್‌ ಕಳೆದುಕೊಂಡ ಕಶ್ಯಪ್‌

ಸುಷ್ಮಾ ಸ್ವರಾಜ್‌ ಅವರ ನೆರವು ಕೋರಿದ ಕಶ್ಯಪ್

Vijaya Karnataka 14 Oct 2018, 3:40 pm
ಹೊಸದಿಲ್ಲಿ: ಭಾರತದ ಪುರುಷರ ಸಿಂಗಲ್ಸ್‌ ಷಟ್ಲರ್‌ ಪರುಪಳ್ಳಿ ಕಶ್ಯಪ್‌ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಪಾಸ್‌ಪೋರ್ಟ್‌ ಕಳೆದುಕೊಂಡಿದ್ದು, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರ ನೆರವು ಕೋರಿದ್ದಾರೆ.
Vijaya Karnataka Web p-kasyap


2014ರ ಗ್ಲಾಸ್ಗೊ ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಕಶ್ಯಪ್‌ ಡೆನ್ಮಾರ್ಕ್‌ ಓಪನ್‌ನಲ್ಲಿ ಆಡಲು ತೆರಳುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಆಮಸ್ಟರ್‌ಡ್ಯಾಮ್‌ನಲ್ಲಿ ಪಾಸ್‌ಪೋರ್ಟ್‌ ಕಳೆದುಹೋಗಿತ್ತು. ಸದ್ಯ ಅಲ್ಲೇ ಉಳಿದುಕೊಂಡಿರುವ ಅವರು ಭಾನುವಾರ ಒಡೆನ್ಸ್‌ (ಟೂರ್ನಿ ನಡೆಯುವ ಸ್ಥಳ) ತಲುಪಲೇಬೇಕಿದ್ದು ನೆರವಿಗಾಗಿ ಸುಷ್ಮಾ ಸ್ವರಾಜ್‌ಗೆ ಟ್ವೀಟ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರ ಹೆಸರುಗಳನ್ನೂ ಟ್ಯಾಗ್‌ ಮಾಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌