ಆ್ಯಪ್ನಗರ

3 ಹೆಂಡ್ತಿಯರ ಹೊರೆತಾಗಿಯೂ ಸಂಬಂಧ ಇತ್ತು, ಎಷ್ಟು ಮಕ್ಕಳಿದ್ದಾರೆ ಎಂದು ಗೊತ್ತಿಲ್ಲ: ಫುಟ್ಬಾಲ್‌ ದಂತಕತೆ ಪೀಲೆ

ಬ್ರೆಜಿಲ್‌ನ ಪುಟ್ಬಾಲ್‌ ದಂತಕತೆ ಪೀಲೆ ತಮ್ಮ ವೈಯಕ್ತಿಕ, ಸಾಂಸರಿಕ ಜೀವನದ ಗುಟ್ಟುಗಳನ್ನೆಲ್ಲಾ ಹೇಳಿಕೊಂಡಿದ್ದಾರೆ. ಮೂರು ಪತ್ನಿಯರುದ್ದರೂ ಅನ್ಯ ಸ್ತ್ರೀಗಳ ಜತೆಗೆ ಸಂಬಂಧ ಇತ್ತು ಎಂದಿದ್ದಾರೆ.

Vijaya Karnataka Web 24 Feb 2021, 3:05 pm

ಹೈಲೈಟ್ಸ್‌:

  • ಮೂರು ಹೆಂಡತಿಯರ ಹೊರೆತಾಗಿಯೂ ಇತರೆ ಅಫೇರ್‌ಗಳಿದ್ದವು
  • ಎಷ್ಟು ಮಕ್ಕಳಿದ್ದಾವೆ ಎನ್ನುವುದು ಪ್ರಾಮಾಣಿಕವಾಗಿಯೂ ಗೊತ್ತಿಲ್ಲ
  • ಹೊಸ ಡಾಕ್ಯುಮೆಂಟರಿಯಲ್ಲಿ ವೈಯಕ್ತಿಕ ಜೀವನ ಬಿಚ್ಚಿಟ್ಟ ಪೀಲೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಪೀಲೆ
ಪೀಲೆ
ಬ್ರೆಜಿಲ್‌: ಬ್ರೆಜಿಲ್‌ನ ಫುಟ್ಬಾಲ್‌ ದಂತಕತೆ, ಮೂರು ಬಾರಿ ವಿಶ್ವ ಕಪ್‌ ವಿಜೇತ ಪೀಲೆ ತಮ್ಮ ವೈಯಕ್ತಿಕ ಜೀವನದ ರಹಸ್ಯಗಳನ್ನೆಲ್ಲಾ ಬಿಚ್ಚಿಟ್ಟಿದ್ದಾರೆ. ಮೂರು ಮದುವೆಯಾದ ಬಳಿಕವೂ ಹಲವು ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.
ಪೀಲೆ ಅವರ ಹೊಸ ಡಾಕ್ಯುಮೆಂಟರಿ ಬಿಡುಗಡೆಯಾಗಿದ್ದು, ಇದರಲ್ಲಿ ಪೀಲೆ ತಮ್ಮ ಬದುಕನ್ನು ಬಿಚ್ಚಿಟ್ಟಿದ್ದಾರೆ. ಕೌಟುಂಬಿಕ, ಕ್ರೀಡಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.

ಇದರಲ್ಲಿ ಪೀಲೆ, 'ಪ್ರಮಾಣಿಕವಾಗಿ ಹೇಳಬೇಕು ಎಂದರೆ ನನಗೆ ಹಲವು ಅಫೇರ್‌ಗಳಿದ್ದವು. ಕೆಲವು ಅಫೇರ್‌ಗಳಲ್ಲಿ ಮಕ್ಕಳು ಕೂಡ ಆಗಿದೆ. ಆದರೆ ಅದರ ಬಗ್ಗೆ ನನಗೆ ಗೊತ್ತಾಗಿದ್ದೆ ಸುಮಾರು ದಿನಗಳ ಬಳಿಕ' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ ಎಂಬತ್ತು ವರ್ಷದ ಪೀಲೆ ಈ ವರೆಗೆ ಮೂರು ಮದುವೆ ಆಗಿದ್ದು, ಅಧಿಕೃತವಾಗಿ ಏಳು ಮಕ್ಕಳಿದ್ದಾರೆ. ಈ ಪೈಕಿ ಸಾಂದ್ರಾ ಮಚಾಡೋ ಎನ್ನುವ ಪುತ್ರಿಯನ್ನು ಪೀಲೆ ಇಂದಿಗೂ ತಮ್ಮ ಪುತ್ರಿ ಎಂದು ಪರಿಗಣಿಸುತ್ತಿಲ್ಲ.

ಮಚಾಡೋ ಪೀಲೆ ಅವರ ಪುತ್ರಿಯೇ ಎಂದು 1996ರಲ್ಲಿ ಕೋರ್ಟ್‌ ತೀರ್ಪು ನೀಡಿತ್ತು. ಇದರ ಹೊರೆತಾಗಿಯೂ ಅವರನ್ನು ಪುತ್ರಿ ಎಂದು ಒಪ್ಪಿಕೊಳ್ಳಲು ಪೀಲೆ ತಯಾರಿಲ್ಲ.

ಅಲ್ಲದೇ ತನ್ನ ಎಲ್ಲಾ ಹೆಂಡತಿಯರು ಹಾಗೂ ಗರ್ಲ್‌ ಫ್ರೆಂಡ್ಸ್‌ಗಳಿಗೆ ತಾನು ಯಾರು ಎಂದು ಗೊತ್ತಿತ್ತು ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌