ಆ್ಯಪ್ನಗರ

ಪುನೀತ್‌ ಕೊರಳಿಗೆ ಚಿನ್ನ ಸೇರಿ 6 ಪದಕ

ಕರ್ನಾಟಕದ ಉದಯೋನ್ಮುಖ ಪ್ಯಾರಾ ಈಜುಪಟು ಪುನೀತ್‌ ನಂದಕುಮಾರ್‌ ಯುಎಇನ ಶಾರ್ಜಾದಲ್ಲಿ ನಡೆದ ಐವಾಸ್‌ ವಿಶ್ವ ಗೇಮ್ಸ್‌ನಲ್ಲಿ ಎರಡು ಚಿನ್ನ ಸೇರಿ ಒಟ್ಟು 6 ಪದಕ ಗೆದ್ದ ಸಾಧನೆ ಮಾಡಿದ್ದಾರೆ.

Vijaya Karnataka 20 Feb 2019, 5:00 am
ಬೆಂಗಳೂರು : ಕರ್ನಾಟಕದ ಉದಯೋನ್ಮುಖ ಪ್ಯಾರಾ ಈಜುಪಟು ಪುನೀತ್‌ ನಂದಕುಮಾರ್‌ ಯುಎಇನ ಶಾರ್ಜಾದಲ್ಲಿ ನಡೆದ ಐವಾಸ್‌ ವಿಶ್ವ ಗೇಮ್ಸ್‌ನಲ್ಲಿ ಎರಡು ಚಿನ್ನ ಸೇರಿ ಒಟ್ಟು 6 ಪದಕ ಗೆದ್ದ ಸಾಧನೆ ಮಾಡಿದ್ದಾರೆ.
Vijaya Karnataka Web punith won six gold
ಪುನೀತ್‌ ಕೊರಳಿಗೆ ಚಿನ್ನ ಸೇರಿ 6 ಪದಕ


ಫೆ.13ರಿಂದ 16ರವರೆಗೆ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪುನೀತ್‌, 200 ಮೀ. ಫ್ರೀಸ್ಟೈಲ್‌ (2:46.28 ಸೆ.) ಮತ್ತು 50 ಮೀ. ಬಟರ್‌ಫ್ಲೈ (37.57 ಸೆ.) ವಿಭಾಗಗಳಲ್ಲಿ ಸ್ವರ್ಣಕ್ಕೆ ಮುತ್ತಿಟ್ಟರೆ, 200 ಮೀ. ವೈಯಕ್ತಿಕ ಮೆಡ್ಲೆ (3:8.51 ಸೆ.) ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದಲ್ಲದೆ 100 ಮೀ. ಫ್ರೀಸ್ಟೈಲ್‌, 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಮತ್ತು 400 ಮೀ. ಫ್ರೀಸ್ಟೈಲ್‌ ವಿಭಾಗಗಳಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ.

ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿರುವ ಪುನೀತ್‌, ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಎರಡನೇ ವರ್ಷದ ಸಿವಿಲ್‌ ಎಂಜಿನಿಯರಿಂಗ್‌ ಓದುತ್ತಿದ್ದಾರೆ. ಪೂಜಾ ಈಜು ಕೇಂದ್ರದಲ್ಲಿ ಕೋಚ್‌ ಶರತ್‌ ಎಂ.ಗಾಯಕ್ವಾಡ್‌ ಬಳಿ ತರಬೇತಿ ಪಡೆಯುತ್ತಿರುವ ಪುನೀತ್‌ ಆರು ರಾಷ್ಟ್ರೀಯ ಚಾಂಪಿಯನ್‌ಷಿಷ್‌ಗಳಲ್ಲಿ ಒಟ್ಟು 24 ಪದಕಗಳನ್ನು ಗೆದ್ದಿದ್ದಾರೆ. 2018ರಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ನಂದಕುಮಾರ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌