ಆ್ಯಪ್ನಗರ

ಏಷ್ಯಾ ಚಾಂಪಿಯನ್‌ಶಿಪ್: ಸಿಂಧೂ ಮುನ್ನಡೆ, ಸೈನಾ ಹಿನ್ನಡೆ

ಭಾರತದ ತಾರೆ ಪಿ.ವಿ ಸಿಂಧೂ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇನ್ನೊಂದೆಡೆ ಸೈನಾ ನೆಹ್ವಾಲ್ ಸೋಲಿಗೆ ಶರಣಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 26 Apr 2017, 4:30 pm
ಹೊಸದಿಲ್ಲಿ: ಭಾರತದ ತಾರೆ ಪಿ.ವಿ ಸಿಂಧೂ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇನ್ನೊಂದೆಡೆ ಸೈನಾ ನೆಹ್ವಾಲ್ ಸೋಲಿಗೆ ಶರಣಾಗಿದ್ದಾರೆ.
Vijaya Karnataka Web pv sindhu advances saina nehwal loses in badminton asia championships
ಏಷ್ಯಾ ಚಾಂಪಿಯನ್‌ಶಿಪ್: ಸಿಂಧೂ ಮುನ್ನಡೆ, ಸೈನಾ ಹಿನ್ನಡೆ


ಇಂಡೋನೇಷ್ಯಾದ ದಿನಾರ್ ದೈಯಾ ಆಸ್ಟಿನ್ ವಿರುದ್ಧದ ಹೋರಾಟದಲ್ಲಿ ಸಿಂಧೂ ಗೆಲುವು ದಾಖಲಿಸಿದರೆ ಸೈನಾ ಜಪಾನ್ ಮೂಲದ ಸಕಯ ಸ್ಯಾಟೋ ವಿರುದ್ಧ ಸೋಲೊಪ್ಪಿಕೊಂಡರು.

31 ನಿಮಿಷಗಳ ಹೋರಾಟದಲ್ಲಿ ಸಿಂಧೂ 21-8, 21-18ರ ಅಂತರದಲ್ಲಿ ಗೆಲುವು ದಾಖಲಿಸಿದರು. ಇನ್ನೊಂದೆಡೆ ಸೈನಾ 21-19, 16-21, 18-21ರ ಅಂತರದಲ್ಲಿ ಹಿನ್ನಡೆ ಅನುಭವಿಸಿದರು.

ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧೂ, ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದು, ಅತ್ಯುತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಅತ್ತ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಭಾಗವಹಿಸುತ್ತಿರುವ ಭಾರತದ ಅಜಯ್ ಜಯರಾಂ 21-18, 18-21, 21-19ರ ಅಂತರದಲ್ಲಿ ಚೀನಾದ ಐದನೇ ಶ್ರೇಯಾಂಕಿತ ತೈಯನ್ ಹುವಾಯ್ ವಿರುದ್ದ ಗೆಲುವು ದಾಖಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌