ಆ್ಯಪ್ನಗರ

ಸಿಂಧೂ ಶುಭಾರಂಭ

ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಭಾರತೀಯ ಆಟಗಾರ್ತಿ ಪಿ.ವಿ.ಸಿಂಧೂ ಬುಧವಾರ ಇಲ್ಲಿ ಆರಂಭಗೊಂಡ ಪ್ರತಿಷ್ಠಿತ ವರ್ಲ್ಡ್‌ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ್ತಿ, ಕಳೆದ ಆವೃತ್ತಿಯ ಚಾಂಪಿಯನ್‌ ಅಕಾನೆ ಯಮಗುಚಿ ಅವರನ್ನು ಮಣಿಸಿ ಶುಭಾರಂಭ ಮಾಡಿದ್ದಾರೆ. ಸಿಂಧೂ ಕಳೆದ ಆವೃತ್ತಿಯಲ್ಲಿ ರನ್ನರ್‌ಅಪ್‌ ಸಾಧನೆ ಮಾಡಿದ್ದರು.

PTI 13 Dec 2018, 5:00 am
ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಫೈನಲ್ಸ್‌: ಸಮೀರ್‌ ವರ್ಮಾಗೆ ಆರಂಭದಲ್ಲೇ ಸೋಲು
Vijaya Karnataka Web pv sindhu beats akane yamaguchi
ಸಿಂಧೂ ಶುಭಾರಂಭ

ಗುವಾಂಗ್‌ಜೌ :
ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಭಾರತೀಯ ಆಟಗಾರ್ತಿ ಪಿ.ವಿ.ಸಿಂಧೂ ಬುಧವಾರ ಇಲ್ಲಿ ಆರಂಭಗೊಂಡ ಪ್ರತಿಷ್ಠಿತ ವರ್ಲ್ಡ್‌ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ್ತಿ, ಕಳೆದ ಆವೃತ್ತಿಯ ಚಾಂಪಿಯನ್‌ ಅಕಾನೆ ಯಮಗುಚಿ ಅವರನ್ನು ಮಣಿಸಿ ಶುಭಾರಂಭ ಮಾಡಿದ್ದಾರೆ. ಸಿಂಧೂ ಕಳೆದ ಆವೃತ್ತಿಯಲ್ಲಿ ರನ್ನರ್‌ಅಪ್‌ ಸಾಧನೆ ಮಾಡಿದ್ದರು.

ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತೀಯ ಆಟಗಾರ್ತಿ ತಾಳ್ಮೆ ಮತ್ತು ಆಕ್ರಮಣ ಮಿಶ್ರಿತ ಆಟವಾಡಿ 24-22, 21-15 ನೇರ ಗೇಮ್‌ಗಳಿಂದ ಗೆದ್ದರು.
ಸಮೀರ್‌ಗೆ ಆರಂಭದಲ್ಲೇ ಸೋಲು
ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್‌ ಜತೆ ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಗಿಟ್ಟಿಸಿದ್ದ ಸಮೀರ್‌ ವರ್ಮಾ ಮೊದಲ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ, ಜಪಾನ್‌ನ ಕೆಂಟೊ ಮೊಮೊಟಾ ಎದುರು ಮಂಡಿಯೂರಿದರು. ವಿಶ್ವ ಚಾಂಪಿಯನ್‌ ಮೊಮೊಟೊ ಅವರ ವೇಗಕ್ಕೆ ಸಾಟಿಯಾಗದ ಸಮೀರ್‌ 18-21, 6-21 ಗೇಮ್‌ಗಳಿಂದ ಸೋತರು.
ವರ್ಷಾಂತ್ಯದ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರತೀ ವಿಭಾಗದಿಂದ ಶ್ರೇಷ್ಠ 8 ಆಟಗಾರರಷ್ಟೇ ಆಡುವ ಅರ್ಹತೆ ಗಿಟ್ಟಿಸುತ್ತಾರೆ. ಮೊದಲಿಗೆ ತಲಾ 4 ಆಟಗಾರರ ಎರಡು ಗುಂಪುಗಳಲ್ಲಿ ಪರಸ್ಪರ ಸೆಣಸಾಟ ನಡೆಯುತ್ತದೆ. ನಂತರ ನಾಕ್‌ಔಟ್‌ ಹಂತ. ಪ್ರತಿ ಆಟಗಾರ ಗುಂಪಿನಲ್ಲಿ ತಲಾ 3 ಮೂರು ಪಂದ್ಯ ಆಡಬೇಕಾಗುತ್ತದೆ. ಗುಂಪಿನಲ್ಲಿ ಮೊದಲ 2 ಸ್ಥಾನ ಗಳಿಸುವ ಆಟಗಾರರು ಸೆಮಿಫೈನಲ್ಸ್‌ ಪ್ರವೇಶಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌