ಆ್ಯಪ್ನಗರ

BWF World Tour Finals 2018: ಫೈನಲ್‌ಗೆ ಲಗ್ಗೆಯಿಟ್ಟ ಸಿಂಧೂ

ಭಾರತದ ಹೆಮ್ಮೆಯ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ 2018 ಟೂರ್ನಮೆಂಟ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ವರ್ಷಾಂತ್ಯದ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದ್ದಾರೆ.

Vijaya Karnataka Web 15 Dec 2018, 11:59 am
ಗುವಾಂಗ್‌ಜೌ: ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧೂ 2018ನೇ ಸಾಲಿನ ವರ್ಷಾಂತ್ಯದಲ್ಲಿ ಸಾಗುತ್ತಿರುವ ಬಿಡಬ್ಲ್ಯುಎಫ್‌ ವರ್ಲ್ಡ್ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದ್ದು, ಫೈನಲ್‌ಗೆ ಪ್ರವೇಶಿಸಿದ್ದಾರೆ.
Vijaya Karnataka Web pv-sindhu-24


ಸತತ 3ನೇ ಬಾರಿ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಆಡುತ್ತಿರುವ ಸಿಂಧೂ ಶನಿವಾರದಂದು ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ವಿಶ್ವ ನಂ.8 ಆಟಗಾರ್ತಿ ರಾಚ್ಟಾನೋಕ್ ಇಂಟನಾನ್‌ರನ್ನು 21-16, 25-23ರ ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.

ಕಳೆದ ಬಾರಿಯ ರನ್ನರ್ ಅಪ್ ಆಗಿರುವ ಸಿಂಧೂ, ಮೊದಲ ಸುತ್ತನ್ನು 21-16ರ ಅಂತರದಲ್ಲಿ ವಶಪಡಿಸಿಕೊಂಡರು. ಎದುರಾಳಿ ಮೇಲೆ ಪ್ರಹಾರ ಮಾಡಿದ ಸಿಂಧೂ ಅವಕಾಶ ಬಿಟ್ಟುಕೊಡಲೇ ಇಲ್ಲ.

ದ್ವಿತೀಯ ಸುತ್ತಿನಲ್ಲೂ ಸಿಂಧೂ ಅಧಿಪತ್ಯವನ್ನು ಮುಂದುವರಿಸಿದರು. ಈ ಹಂತದಲ್ಲಿ ಎದುರಾಳಿಯಿಂದ ತಿರುಗೇಟು ಎದುರಾಯಿತು. ಇದರಿಂದಾಗಿ ಮ್ಯಾಚ್ ಪಾಯಿಂಟ್ ಪಡೆಯಲು ಸಿಂಧೂಗೆ ಹರಸಾಹಸ ಪಡಬೇಕಾಯಿತು. ತೀವ್ರ ಜಿದ್ದಾಜಿದ್ದಿನಿಂದ ಸಾಗಿದ ಎರಡನೇ ಸುತ್ತನ್ನು ವಶಪಡಿಸಿಕೊಂಡು ಕೊನೆಗೂ ವಿಜಯಶಾಲಿಯಾದರು.

ಇದೀಗ ಭಾನುವಾರ ನಡೆಯಲಿರುವ ಪ್ರಶಸ್ತಿ ಮುಖಾಮುಖಿಯಲ್ಲಿ ವಿಶ್ವ ನಂ.5 ಆಟಗಾರ್ತಿ ಜಪಾನ್‌ನ ನೊಝೊಮಿ ಓಕುಹಾರ ಸವಾಲನ್ನು ಎದುರಿಸಲಿದ್ದಾರೆ.

ಎ ಗುಂಪಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸಿಂಧೂ ಅಜೇಯವಾಗಿ ಸೆಮಿಫೈನಲ್‌ಗೆ ಮುನ್ನಡೆದಿದ್ದರು. ಸಿಂಧೂ ಅವರು ಜಪಾನ್‌ನ ಅಕಾನೆ ಯಮಗುಚಿ, ವಿಶ್ವ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಹಾಗೂ ಅಮೆರಿಕದ ಬೈವೆನ್‌ ಝಾಂಗ್‌ ವಿರುದ್ಧ ಗೆಲುವುಗಳನ್ನು ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌