ಆ್ಯಪ್ನಗರ

ಸೆಮೀಸ್‌ಗೆ ಲಗ್ಗೆಯಿಟ್ಟ ಸಿಂಧೂ, ಸಮೀರ್

ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ 2018 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿರುವ ಭಾರತದ ಹೆಮ್ಮೆಯ ಪಿವಿ ಸಿಂಧೂ, ಅಜೇಯವಾಗಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ.

Vijaya Karnataka Web 15 Dec 2018, 9:49 am
ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಸಿಂಧೂ, ಸಮೀರ್‌ ಭರ್ಜರಿ ಪ್ರದರ್ಶನ
Vijaya Karnataka Web pv-sindhu-11


ಗುವಾಂಗ್‌ಜೌ: ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧೂ 2018ನೇ ಸಾಲಿನ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಅಜೇಯ ಓಟ ಮುಂದುವರಿಸಿ ಸೆಮಿಫೈನಲ್ಸ್‌ ಪ್ರವೇಶಿಸಿದ್ದಾರೆ. ಅಂತೆಯೇ ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ ಕೂಡ ನಾಕ್‌ಔಟ್‌ ಹಂತಕ್ಕೆ ಲಗ್ಗೆ ಹಾಕಿದ್ದಾರೆ.

ಸತತ 3ನೇ ಬಾರಿ ವರ್ಷಾಂತ್ಯದ ಫೈನಲ್ಸ್‌ನಲ್ಲಿ ಆಡುತ್ತಿರುವ ಸಿಂಧೂ ಶುಕ್ರವಾರ ವಿಶ್ವದ 12ನೇ ಶ್ರೇಯಾಂಕದ ಆಟಗಾರ್ತಿ ಅಮೆರಿಕದ ಬೈವೆನ್‌ ಝಾಂಗ್‌ ಅವರನ್ನು 21-9, 21-15 ಗೇಮ್‌ಗಳಿಂದ ಮಣಿಸಿ ಸತತ 3 ಜಯಗಳೊಂದಿಗೆ ಎ ಗುಂಪಿನ ಅಗ್ರ ಸ್ಥಾನಿಯಾಗಿ 4ರ ಘಟ್ಟ ಪ್ರವೇಶಿಸಿದರು.

ಸಮೀರ್‌ಗೆ ಸತತ 2ನೇ ಜಯ

ಬಿ ಗುಂಪಿನ ಆರಂಭಿಕ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಜಪಾನ್‌ನ ಕೆಂಟೊ ಮೊಮೊಟೊ ವಿರುದ್ಧ ಸೋತಿದ್ದ ಸಮೀರ್‌ ವರ್ಮಾ ಆ ಬಳಿಕ ಆಡಿದ ಎರಡೂ ಪಂದ್ಯ ಗೆದ್ದು ಸೆಮಿಫೈನಲ್ಸ್‌ ಪ್ರವೇಶಿಸಿದರು. ಭಾರತೀಯ ಆಟಗಾರ ಶುಕ್ರವಾರ ಗುಂಪಿನ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್‌ನ ಕಾಂತಾಫನ್‌ ವಾಂಗ್‌ಚರೋನ್‌ ಅವರನ್ನು 21-9, 21-18 ಗೇಮ್‌ಗಳಿಂದ ಸೋಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌