ಆ್ಯಪ್ನಗರ

ರೋಜರ್‌ ಫೆಡರರ್‌ ಶುಭಾರಂಭ

ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಪ್ಯಾಮ್‌ ಟೆನಿಸ್‌ ಟೂರ್ನಿಯಲ್ಲಿ 2015ರ ನಂತರ ಮೊದಲ ಸಲ ಕಾಣಿಸಿಕೊಂಡಿರುವ ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಬ್ಬರೆನಿಸಿರುವ ರೋಜರ್‌ ಫೆಡರರ್‌ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ.

Agencies 27 May 2019, 5:00 am
ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಪ್ಯಾಮ್‌
Vijaya Karnataka Web roger federer produces immaculate display in opening match
ರೋಜರ್‌ ಫೆಡರರ್‌ ಶುಭಾರಂಭ

ಕೆರ್ಬರ್‌ಗೆ ಆಘಾತ
ಪ್ಯಾರಿಸ್‌ : ಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಪ್ಯಾಮ್‌ ಟೆನಿಸ್‌ ಟೂರ್ನಿಯಲ್ಲಿ 2015ರ ನಂತರ ಮೊದಲ ಸಲ ಕಾಣಿಸಿಕೊಂಡಿರುವ ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಬ್ಬರೆನಿಸಿರುವ ರೋಜರ್‌ ಫೆಡರರ್‌ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಮಾಜಿ ನಂ.1 ಆಟಗಾರ ಸ್ವಿಜರ್ಲೆಂಡ್‌ನ ಫೆಡರರ್‌ 6-2, 6-4, 6-4 ನೇರ ಸೆಟ್‌ಗಳಿಂದ ಇಟಲಿಯ ಲಾರೆನ್ಜೊ ಸೊನೆಗೊ ವಿರುದ್ಧ ಜಯ ಗಳಿಸಿದರು. ಪಂದ್ಯದಲ್ಲಿ ಐದು ಏಸ್‌ ಸಿಡಿಸಿದ ವಿಶ್ವದ ಮೂರನೇ ರಾರ‍ಯಂಕಿನ ಫೆಡರರ್‌, ಎರಡು ಬಾರಿ 'ಡಬಲ್‌ ಪಾಲ್ಟ್‌ 'ಮಾಡಿದರೂ ಐದು ಬ್ರೇಕ್‌ ಪಾಯಿಂಟ್‌ ಗೆಲ್ಲುವ ಮೂಲಕ ಸುಲಭ ಜಯ ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ವಿಶ್ವದ 7ನೇ ರಾರ‍ಯಂಕಿನ ಜಪಾನಿನ ಕೀ ನಿಶಿಕೋರಿ 6-2, 6-3, 6-4ರಲ್ಲಿ ಫ್ರಾನ್ಸ್‌ನ ಕ್ವೆಂಟಿನ್‌ ಹ್ಯಾಲಿಸ್‌ಗೆ ಸೋಲುಣಿಸಿ ಎರಡನೇ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.

ಗುಣೇಶ್ವರನ್‌ಗೆ ಸೋಲು: ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಏಕೈಕ ಆಶಾಕಿರಣವಾಗಿದ್ದ ಪ್ರಜ್ನೇಶ್‌ ಗುಣೇಶ್ವರನ್‌ 1-6, 3-6, 1-6 ನೇರ ಸೆಟ್‌ಗಳಿಂದ ಬೊಲ್ವಿಯಾದ ಹುಗೊ ಡೆಲಿಯನ್‌ ವಿರುದ್ಧ ಸೋತು ಹೋರಾಟ ಕೊನೆಗೊಳಿಸಿದರು. ಮೊದಲ ಸುತ್ತಿನಲ್ಲಿ ಸುಲಭವಾಗಿ ಶರಣಾದ ಭಾರತೀಯ ಆಟಗಾರ ದ್ವಿತೀಯ ಸೆಟ್‌ನಲ್ಲಿ ತಿರುಗೇಟು ನೀಡಲು ಯತ್ನಿದರೂ ಎದುರಾಳಿಯ ಚಾಕಚಕ್ಯತೆ ಮುಂದೆ ಮಂಕಾದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಮಾಜಿ ಅಗ್ರಮಾನ್ಯ ಆಟಗಾರ್ತಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ 4-6, 2-6 ನೇರ ಸೆಟ್‌ಗಳಿಂದ ರಷ್ಯಾದ ಅನಾಸ್ತಾಸಿಯಾ ಪಟಾಪೊವಾ ವಿರುದ್ಧ ಆಘಾತ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌