ಆ್ಯಪ್ನಗರ

ಭಾರತದ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿದ ಐದು ಬಾರಿಯ ಒಲಿಂಪಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್!

ಭಾರತದ ಜಿಮ್ನಾಸ್ಟಿಕ್ಸ್ ಪ್ರತಿಭೆಯನ್ನು ಗುರುತಿಸುವ ಮೂಲಕ ಐದು ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತೆ ರೊಮನಿಯಾದ ಮಾಜಿ ಚಾಂಪಿಯನ್ ನಾದಿಯಾ ಕೊಮನೆಸಿ ಎಲ್ಲರ ಗಮನ ಸೆಳೆದಿದ್ದಾರೆ.

Vijaya Karnataka Web 31 Aug 2019, 4:57 pm
ಹೊಸದಿಲ್ಲಿ: ಭಾರತದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಗಳಿಲ್ಲ. ಆದರೆ ದುರದೃಷ್ಟವಶಾತ್ ಚಿಕ್ಕದಿನಿಂದಲೇ ಬೇಕಾದಷ್ಟು ಪ್ರೋತ್ಸಾಹ ದೊರಕುತ್ತಿಲ್ಲ. ಇನ್ನು ಮೂಲ ಸೌಕರ್ಯಗಳ ಅಭಾವದಿಂದಾಗಿ ಪ್ರತಿಭೆಗಳು ಮೂಲೆ ಗುಂಪಾಗುತ್ತಿದ್ದಾರೆ.
Vijaya Karnataka Web gymnastics-girl


ಈ ನಡುವೆ ಭಾರತೀಯ ಗ್ರಾಮೀಣ ಪ್ರತಿಭೆಯನ್ನು ಗುರುತಿಸಿರುವ ರೊಮಾನಿಯಾದ ಮಾಜಿ ಐದು ಬಾರಿದ ಒಲಿಂಪಿಕ್ ಜಿಮ್ನಾಸ್ಟಿಕ್ಸ್ ಚಿನ್ನದ ಪದಕ ವಿಜೇತೆ ನಾದಿಯಾ ಕೊಮನೆಸಿ ಗಮನ ಸೆಳೆದಿದ್ದಾರೆ.

ಭಾರತೀಯ ಬಾಲೆಯ ಅಭೂತಪೂರ್ವ ಜಿಮ್ನಾಸ್ಟಿಕ್ಸ್ ಕಲೆಗೆ ಮಾರು ಹೋಗಿರುವ ನಾದಿಯಾ, ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ತಕ್ಷಣವೇ ಇದಕ್ಕೆ ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯೆ ನೀಡಿದ್ದಾರೆ. 1979ರ ಮಾಂಟ್ರೆಯಲ್ ಒಲಿಂಪಿಕ್ಸ್‌ನಲ್ಲಿ ಫರ್ಫೆಕ್ಟ್ 10 ಅಂಕಗಳನ್ನು ಪಡೆದ ನಾದಿಯಾ ಕೊಮನೆಸಿ ಟ್ವೀಟ್ ಮಾಡಿರುವುದು ಅತ್ಯಂತ ಖುಷಿಯನ್ನು ತಂದಿದೆ ಎಂದಿದ್ದಾರೆ. ಹಾಗೆಯೇ ಈ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಲು ಪಣತೊಟ್ಟಿದ್ದಾರೆ.

ಅಷ್ಟಕ್ಕೂ ಈ ಬಾಲೆಯ ಬಗ್ಗೆ ನಿಖರ ಮಾಹಿತಿಗಳು ಇನ್ನಷ್ಟೇ ಸಿಗಬೇಕಿದೆ. ಸೂಕ್ತ ಬೆಂಬಲ ದೊರಕಿದರೆ ದೇಶಕ್ಕಾಗಿ ಉಜ್ವಲ ಭವಿಷ್ಯ ರೂಪಿಸಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌