ಆ್ಯಪ್ನಗರ

ಸಾಯ್‌ ಕೋಚ್‌ಗಳಿಗೆ ಮೌಲ್ಯಮಾಪನ

ಪಿಟಿಐ ಹೊಸದಿಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದ ನಲ್ವತ್ತು ವರ್ಷ ಮೇಲ್ಪಟ್ಟ ಸುಮಾರು ಒಂದು ಸಾವಿರ ಕೋಚ್‌ಗಳು ಸಾಮರ್ಥ್ಯ ದೃಢಪಡಿಸುವ ನಿಟ್ಟಿನಲ್ಲಿ ವೈದ್ಯಕೀಯ ಮತ್ತು ...

Vijaya Karnataka Web 18 Jul 2017, 4:00 am

ಹೊಸದಿಲ್ಲಿ : ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದ ನಲ್ವತ್ತು ವರ್ಷ ಮೇಲ್ಪಟ್ಟ ಸುಮಾರು ಒಂದು ಸಾವಿರ ಕೋಚ್‌ಗಳು ಸಾಮರ್ಥ್ಯ ದೃಢಪಡಿಸುವ ನಿಟ್ಟಿನಲ್ಲಿ ವೈದ್ಯಕೀಯ ಮತ್ತು ದೈಹಿಕ ಪರೀಕ್ಷೆ ಮೂಲಕ ಮೌಲ್ಯಮಾಪನಕ್ಕೆ ಒಳಪಡಲಿದ್ದಾರೆ. ಆದರೆ ಸಾಮರ್ಥ್ಯ‌ ಉಳಿಸಿಕೊಳ್ಳದವರು ಕ್ರೀಡಾ ಸಚಿವಾಲಯದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಈ ಮೌಲ್ಯಮಾಪನ ದೇಶಾದ್ಯಂತ ಮೂರು ಹಂತಗಳಲ್ಲಿ ನಡೆಯಲಿದೆ. ಉತ್ತರ ವಲಯದಿಂದ ಆರಂಭವಾಗಲಿರುವ ಮೌಲ್ಯಮಾಪನ ಸೆಪ್ಟೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ದೈಹಿಕ ಶಕ್ತಿ ಸಾಬೀತು ಪಡಿಸಲು ಕೋಚ್‌ಗಳು 800ಮೀ. ಓಟ ಓಡಬೇಕಿದೆ. ರಕ್ತದೊತ್ತಡ ಮತ್ತು ಏರೋಬಿಕ್‌ ಫಿಟ್ನೆಸ್‌ ಅಲ್ಲದೆ ಹೃದಯ ಬಡಿತ ವ್ಯಾಯಾಮಕ್ಕೆ ಸ್ಪಂದಿಸುವ ಬಗ್ಗೆಯೂ ಕೋಚ್‌ಗಳು ಮೌಲ್ಯಮಾಪನಕ್ಕೆ ಒಳಪಡಲಿದ್ದಾರೆ. ಇದಲ್ಲದೆ ಕೋಚ್‌ಗಳ ಎತ್ತರ, ತೂಕ, ಬಾಡಿ ಮಾಸ್‌ ಇಂಡೆಕ್ಸ್‌ ಪರೀಕ್ಷೆ ಸಹ ನಡೆಯಲಿದೆ.

ಸಾಮಾನ್ಯ ಸಿದ್ಧಾಂತ ಮತ್ತು ಕ್ರೀಡಾ ತರಬೇತಿ ವಿಜ್ಞಾನ(ಜಿಟಿಎಂಟಿ), ಶರೀರಶಾಸ್ತ್ರ, ಅಂಥ್ರೋಪೊಮೆಟ್ರಿ ಒಳಗೊಂಡಂತೆ ವೈಜ್ಞಾನಿಕ ಇಲಾಖೆಯ ತಜ್ಞರನ್ನೊಳಗೊಂಡ ಸಮಿತಿ ಮೌಲ್ಯಮಾಪನ ನಡೆಸಲಿದೆ.

ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ರಾಯ್ಪುರಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಅಥ್ಲೀಟ್‌ಗಳು ಮತ್ತು ತರಬೇತಿಯನ್ನು ಗಮನಿಸಿದ ನಂತರ ಸಾಯ್‌ ಕೋಚ್‌ಗಳ ಮೌಲ್ಯಮಾಪನಕ್ಕೆ ಸಲಹೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌