ಆ್ಯಪ್ನಗರ

ಸೈನಾ ಸೋಲಿನೊಂದಿಗೆ ಭಾರತೀಯ ಮಹಿಳೆಯರ ಸವಾಲು ಅಂತ್ಯ

ಇಲ್ಲಿ ಸಾಗುತ್ತಿರುವ ಜಪಾನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಪದಕ ನಿರೀಕ್ಷೆಯಾಗಿದ್ದ ಸೈನಾ ನೆಹ್ವಾಲ್ ಪರಾಭವಗೊಳ್ಳುವುದರೊಂದಿಗೆ ಪ್ರತಿಷ್ಠಿತ ಕೂಟದಲ್ಲಿ ಭಾರತೀಯ ಮಹಿಳೆಯರ ಸವಾಲು ಅಂತ್ಯ ಕಂಡಿದೆ.

ಟೈಮ್ಸ್ ಆಫ್ ಇಂಡಿಯಾ 21 Sep 2017, 4:11 pm
ಟೊಕಿಯೋ: ಇಲ್ಲಿ ಸಾಗುತ್ತಿರುವ ಜಪಾನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಪದಕ ನಿರೀಕ್ಷೆಯಾಗಿದ್ದ ಸೈನಾ ನೆಹ್ವಾಲ್ ಪರಾಭವಗೊಳ್ಳುವುದರೊಂದಿಗೆ ಪ್ರತಿಷ್ಠಿತ ಕೂಟದಲ್ಲಿ ಭಾರತೀಯ ಮಹಿಳೆಯರ ಸವಾಲು ಅಂತ್ಯ ಕಂಡಿದೆ.
Vijaya Karnataka Web saina nehwal out of japan open losing to carolina marin
ಸೈನಾ ಸೋಲಿನೊಂದಿಗೆ ಭಾರತೀಯ ಮಹಿಳೆಯರ ಸವಾಲು ಅಂತ್ಯ


ಇದಕ್ಕೂ ಮೊದಲು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಜಪಾನ್ ಮೂಲದವರೇ ಆಗಿರುವ ನೊಝೊಮಿ ಓಕುಹಾರ ವಿರುದ್ಧ ಸೋಲು ಅನುಭವಿಸಿದ್ದ ಪಿವಿ ಸಿಂಧೂ ಕೂಟದಿಂದಲೇ ನಿರ್ಗಮಿಸಿದ್ದರು.

ಇದೀಗ ಮಗದೊಂದು ಸಿಂಗಲ್ಸ್ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಕರೊಲಿನಾ ಮರಿನ್ ವಿರುದ್ಧ ಮುಗ್ಗರಿಸಿರುವ ಸೈನಾ ನೆಹ್ವಾಲ್ ನಿರಾಸೆ ಅನುಭವಿಸಿದ್ದಾರೆ.

ಸೈನಾ ವಿರುದ್ಧ 16-21, 13-21ರ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿದ ಮರಿನ್ ಮುಂದಿನ ಸುತ್ತಿಗೆ ಮುನ್ನಡೆದರು.

ಇದರೊಂದಿಗೆ ಮಹಿಳಾ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಕಂಡಿದೆ. ಅತ್ತ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಮತ್ತು ಎಚ್‌ಎಸ್ ಪ್ರಣೋಯ್ ಮುಂದಿನ ಸುತ್ತಿಗೆ ಮುನ್ನಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌