ಆ್ಯಪ್ನಗರ

ಕೊರಿಯಾ ಓಪನ್: ಸೈನಾ ನೆಹ್ವಾಲ್ ಶುಭಾರಂಭ

ಕೊರಿಯಾ ಓಪನ್: ಭಾರತದ ಪ್ರಶಸ್ತಿ ನಿರೀಕ್ಷೆಯಾಗಿರುವ ಸೈನಾ ನೆಹ್ವಾಲ್

Vijaya Karnataka Web 26 Sep 2018, 2:58 pm
ಹೊಸದಿಲ್ಲಿ: ಪ್ರತಿಷ್ಠಿತ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಶುಭಾರಂಭ ಮಾಡಿಕೊಂಡಿದ್ದಾರೆ.
Vijaya Karnataka Web saina-nehwal-08


ಬುಧವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ 32ರ ಹಂತದ ಸುತ್ತಿನ ಹೋರಾಟದಲ್ಲಿ ಸ್ಥಳೀಯ ಆಟಗಾರ್ತಿ ಕಿಮ್ ಹ್ಯೊ ಮಿನ್ ವಿರುದ್ಧ ಗೆಲುವು ದಾಖಲಿಸಿ ಮುನ್ನಡೆದರು.

ಅತ್ಯುತ್ತಮ ಪ್ರದರ್ಶನ ನೀಡಿದ ಸೈನಾ, 21-12, 21-11ರ ಸುಲಭ ಅಂತರದಲ್ಲಿ ಪಂದ್ಯ ವಶಪಡಿಸಿಕೊಂಡರು.

ಇದೀಗಷ್ಟೇ ಸೈನಾ ವಿವಾಹ ಸುದ್ದಿಯು ಹೊರಬಿದ್ದಿತ್ತು. ಬ್ಯಾಡ್ಮಿಂಟನ್ ತಾರೆ ಪರುಪಳ್ಳಿ ಕಶ್ಯಪ್ ಅವರನ್ನು 28ರ ಹರೆಯದ ಸೈನಾ ವರಿಸಲಿದ್ದಾರೆ.

ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಹುಟ್ಟಿಕೊಂಡಿರುವ ಸೈನಾ ಹಾಗೂ ಕಶ್ಯಪ್ ಪ್ರೇಮವು ಇದೀಗ ಜೀವನದಲ್ಲಿ ಒಂದಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌