ಆ್ಯಪ್ನಗರ

ಐಟಿಟಿಎಫ್‌: ಪ್ರಿಕ್ವಾರ್ಟರ್‌ಗೆ ಸತಿಯನ್‌

ವಿಶ್ವದ 16ನೇ ರಾರ‍ಯಂಕಿನ ಮಾರ್ಕೊಸ್‌ ಫ್ರೇಟಾಸ್‌ಗೆ ಆಘಾತ ನೀಡಿದ ಭಾರತದ ಸ್ಟಾರ್‌ ಆಟಗಾರ ಜಿ. ಸತಿಯನ್‌ ಲಿನ್ಜ್‌ನಲ್ಲಿ ನಡೆಯುತ್ತಿರುವ ಐಟಿಟಿಎಫ್‌ ಆಸ್ಟ್ರಿಯನ್‌ ಓಪನ್‌ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್ಸ್‌ಗೆ ಮುನ್ನಡೆದಿದ್ದಾರೆ.

PTI 10 Nov 2018, 5:00 am
ಹೊಸದಿಲ್ಲಿ : ವಿಶ್ವದ 16ನೇ ರಾರ‍ಯಂಕಿನ ಮಾರ್ಕೊಸ್‌ ಫ್ರೇಟಾಸ್‌ಗೆ ಆಘಾತ ನೀಡಿದ ಭಾರತದ ಸ್ಟಾರ್‌ ಆಟಗಾರ ಜಿ. ಸತಿಯನ್‌ ಲಿನ್ಜ್‌ನಲ್ಲಿ ನಡೆಯುತ್ತಿರುವ ಐಟಿಟಿಎಫ್‌ ಆಸ್ಟ್ರಿಯನ್‌ ಓಪನ್‌ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್ಸ್‌ಗೆ ಮುನ್ನಡೆದಿದ್ದಾರೆ.
Vijaya Karnataka Web sathiyan g upsets world no 16 freitas
ಐಟಿಟಿಎಫ್‌: ಪ್ರಿಕ್ವಾರ್ಟರ್‌ಗೆ ಸತಿಯನ್‌


ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಸುತ್ತಿಗೆ ತೇರ್ಗಡೆಗೊಂಡಿದ್ದ ವಿಶ್ವದ 35ನೇ ರಾರ‍ಯಂಕಿನ ಆಟಗಾರ ಭಾರತದ ಸತಿಯನ್‌ 4-3 ಗೇಮ್‌ಗಳಿಂದ ಫ್ರೇಟಾಸ್‌ ಸವಾಲು ಹತ್ತಿಕ್ಕಿದರು. ಮೊದಲ ಗೇಮ್‌ನಲ್ಲಿ ಭಾರತೀಯ ಆಟಗಾರ 4-11ರಲ್ಲಿ ಸೋಲನುಭವಿಸಿದರು. ಆದರೆ, ದ್ವಿತೀಯ ಮತ್ತು ತೃತೀಯ ಗೇಮ್‌ಗಳಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ 11-9, 11-9ರಲ್ಲಿ ಜಯ ಗಳಿಸಿ ಮುನ್ನಡೆ ಕಂಡುಕೊಂಡರು. ಆದರೆ, ನಂತರದ 2 ಗೇಮ್‌ಗಳಲ್ಲಿ ದಿಟ್ಟ ಪ್ರತಿರೋಧವೊಡ್ಡಿದ ಫ್ರೇಟಾಸ್‌ 11-6, 11-6ರಲ್ಲಿ ಗೆದ್ದು ತಿರುಗೇಟು ನೀಡಿದರು.

ಬಳಿಕ 6ನೇ ಗೇಮ್‌ ಗೆದ್ದು 3-3ರ ಸಮಬಲ ಸ್ಥಾಪಿಸಿದ ಸತಿಯನ್‌, ನಿರ್ಣಾಯಕ ಅಂತಿಮ ಗೇಮ್‌ನಲ್ಲೂ ಮೇಲುಗೈ ಸಾಧಿಸಿ ಮುಂದಿನ ಸುತ್ತಿಗೆ ತೇರ್ಗಡೆಗೊಂಡರು. ಸತಿಯನ್‌ ಕ್ವಾರ್ಟರ್‌ಫೈನಲ್ಸ್‌ ಪ್ರವೇಶಕ್ಕಾಗಿ ವಿಶ್ವದ 2ನೇ ರಾರ‍ಯಂಕ್‌ನ ಚೀನಾದ ಕ್ಸು ಕ್ಸಿನ್‌ ಅವರನ್ನು ಎದುರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌