ಆ್ಯಪ್ನಗರ

ಸೆನೆಗಲ್‌ಗೆ ಶರಣಾದ ಪೋಲೆಂಡ್‌

ಅಮೋಘ ಪ್ರದರ್ಶನ ನೀಡಿದ ಅಫ್ರಿಕಾದ ರಾಷ್ಟ್ರ ಸೆನೆಗಲ್‌, ವಿಶ್ವಕಪ್‌ ಟೂರ್ನಿಯ 'ಎಚ್‌' ಗುಂಪಿನ ಪಂದ್ಯದಲ್ಲಿ ಬಲಿಷ್ಠ ಪೋಲೆಂಡ್‌ ವಿರುದ್ಧ 2-1 ಗೋಲ್‌ಗಳ ಅಚ್ಚರಿಯ ಜಯ ದಾಖಲಿಸಿತು.

Vijaya Karnataka Web 20 Jun 2018, 9:30 am
ಮಾಸ್ಕೊ: ಅಮೋಘ ಪ್ರದರ್ಶನ ನೀಡಿದ ಅಫ್ರಿಕಾದ ರಾಷ್ಟ್ರ ಸೆನೆಗಲ್‌, ವಿಶ್ವಕಪ್‌ ಟೂರ್ನಿಯ 'ಎಚ್‌' ಗುಂಪಿನ ಪಂದ್ಯದಲ್ಲಿ ಬಲಿಷ್ಠ ಪೋಲೆಂಡ್‌ ವಿರುದ್ಧ 2-1 ಗೋಲ್‌ಗಳ ಅಚ್ಚರಿಯ ಜಯ ದಾಖಲಿಸಿತು.
Vijaya Karnataka Web senegal


ಮಿಂಚಿನ ಆಟವಾಡಿದ ವಿಶ್ವದ 27ನೇ ರಾರ‍ಯಂಕ್‌ನ ಸೆನೆಗಲ್‌ ಪರ ಫಾರ್ವರ್ಡ್‌ ಆಟಗಾರ ಎಮ್‌ಬಾಯೆ ನಿಯಾಂಗ್‌ (60ನೇ ನಿ.) ಅಮೋಘ ಗೋಲ್‌ ದಾಖಲಿಸಿ ಜಯದ ರೂವಾರಿ ಎನಿಸಿದರೆ, ಇದಕ್ಕೂ ಮೊದಲು ಪ್ರಥಮಾರ್ಧದಲ್ಲಿ (30ನೇ ನಿ) ಪೋಲೆಂಡ್‌ನ ಡಿಫೆಂಡರ್‌ ತಿಯಾಗೊ ಸಿಯೋನೆಕ್‌ ಉಡುಗೊರೆಯ ಗೋಲ್‌ ನೀಡಿಬಿಟ್ಟರು.

ಪಂದ್ಯ ಮುಕ್ತಾಯಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ಪೋಲೆಂಡ್‌ ತಂಡದ ಅನುಭವಿ ಆಟಗಾರ ಗ್ರಿಜೆಗೊಸ್‌ ಕ್ರಿಚೊವಿಯಾಕ್‌ (86ನೇ ನಿ.) ಚೆಂಡನ್ನು ಗುರಿ ಮುಟ್ಟಿಸುವ ಮೂಲಕ ಸೋಲಿನ ಅಂತರವನ್ನು ತಗ್ಗಿಸಲಷ್ಟೇ ಶಕ್ತರಾದರು. ಜಯದೊಂದಿಗೆ ಸೆನೆಗೆಲ್‌ ತಂಡ 'ಎಚ್‌' ಗುಂಪಿನಲ್ಲಿ ಸಂಪೂರ್ಣ 3 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಪೋಲೆಂಡ್‌ ತನ್ನ ಮುಂದಿನ ಪಂದ್ಯದಲ್ಲಿ ಈಗಾಗಲೆ ಗೆಲುವಿನ ಲಯದಲ್ಲಿರುವ ಜಪಾನ್‌ ವಿರುದ್ಧ ಸೆಣಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌