ಆ್ಯಪ್ನಗರ

ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಪೆನಾಲ್ಟಿ ಶಾಕ್‌

ಒತ್ತಡದ ಕ್ಷ ಣವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲಗೊಂಡ ಕರ್ನಾಟಕ ತಂಡ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯ ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಸರ್ವಿಸಸ್‌ ವಿರುದ್ಧ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಸೋಲನುಭವಿಸಿ ಹೋರಾಟ ಕೊನೆಗೊಳಿಸಿದೆ.

Agencies 20 Apr 2019, 5:00 am
ಲೂಧಿಯಾನ : ಒತ್ತಡದ ಕ್ಷ ಣವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲಗೊಂಡ ಕರ್ನಾಟಕ ತಂಡ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯ ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಸರ್ವಿಸಸ್‌ ವಿರುದ್ಧ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಸೋಲನುಭವಿಸಿ ಹೋರಾಟ ಕೊನೆಗೊಳಿಸಿದೆ.
Vijaya Karnataka Web services down 10 man karnataka in penalty shootout
ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಪೆನಾಲ್ಟಿ ಶಾಕ್‌

ಇಲ್ಲಿನ ಗುರುನಾನಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1 ಗೋಲ್‌ಗಳಿಂದ ಸಮಬಲ ಸಾಧಿಸಿದ ಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟ್‌ಔಟ್‌ ಮೊರೆ ಹೋಗಲಾಯಿತು. ಈ ವೇಳೆ, ಸರ್ವಿಸಸ್‌ ನಾಲ್ಕು ಗೋಲ್‌ ಗಳಿಸಿದರೆ, ಕರ್ನಾಟಕ ಕೇವಲ 3 ಗೋಲ್‌ ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ 3-4 ಗೋಲ್‌ಗಳ ಅಂತರದಿಂದ ಪರಾಭವಗೊಂಡ ಕರ್ನಾಟಕ ತಂಡದ ಹಲವು ವರ್ಷಗಳ ಬಳಿಕ ಪ್ರಶಸ್ತಿ ಎತ್ತಿಹಿಡಿಯುವ ಕನಸು ಭಗ್ನಗೊಂಡಿತು.
ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಎಂಟು ಬಾರಿಯ ಚಾಂಪಿಯನ್‌ ಪಂಜಾಬ್‌ ತಂಡ 2-1 ಗೋಲ್‌ಗಳಿಂದ ಐದು ಬಾರಿಯ ಚಾಂಪಿಯನ್‌ ಗೋವಾ ತಂಡವನ್ನು ಸೋಲಿಸಿ 15ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಪಂಬಾಜ್‌ ಪರ ಹರ್ಜಿಂದರ್‌ ಸಿಂಗ್‌ ಜಯದ ಗೋಲ್‌ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ಪ್ರಶಸ್ತಿಗಾಗಿ ಪಂಜಾಬ್‌ ಮತ್ತು ಸರ್ವಿಸಸ್‌ ತಂಡಗಳು ಮುಖಾಮುಖಿಯಾಗಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌