ಆ್ಯಪ್ನಗರ

ಡೆಲ್ಲಿ ಎದುರು ಪರದಾಡಿದ ಪ್ಯಾಂಥರ್ಸ್‌

ಇರಾನ್‌ ಆಟಗಾರ ಮೇರಾಜ್‌ ಶೇಖ್‌ ಮತ್ತು ನವೀನ್‌ ಕುಮಾರ್‌ ಹಾಗೂ ಚಂದ್ರನ್‌ ರಂಜಿತ್‌ ಅವರ ಅದ್ಭುತ ರೇಡಿಂಗ್‌ನಿಂದ ಮಿಂಚಿದ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ನ 6ನೇ ಆವೃತ್ತಿಯ 89ನೇ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಅಧಿಕಾರಯುತ ಜಯ ದಾಖಲಿಸಿದೆ.

Agencies 1 Dec 2018, 9:00 pm
ಹೊಸದಿಲ್ಲಿ : ಇರಾನ್‌ ಆಟಗಾರ ಮೇರಾಜ್‌ ಶೇಖ್‌ ಮತ್ತು ನವೀನ್‌ ಕುಮಾರ್‌ ಹಾಗೂ ಚಂದ್ರನ್‌ ರಂಜಿತ್‌ ಅವರ ಅದ್ಭುತ ರೇಡಿಂಗ್‌ನಿಂದ ಮಿಂಚಿದ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ನ 6ನೇ ಆವೃತ್ತಿಯ 89ನೇ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಅಧಿಕಾರಯುತ ಜಯ ದಾಖಲಿಸಿದೆ.
Vijaya Karnataka Web sheykh guides dabang delhi to 48 35 win over jaipur pink panther
ಡೆಲ್ಲಿ ಎದುರು ಪರದಾಡಿದ ಪ್ಯಾಂಥರ್ಸ್‌


ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಡೆಲ್ಲಿ 48-35 ಅಂಕಗಳಿಂದ ಜೈಪುರ ತಂಡವನ್ನು ಪರಾಭವಗೊಳಿಸಿ ತವರಿನ ಚರಣದಲ್ಲಿ ಗೆಲುವಿನ ಅಭಿಯಾನ ಕಂಡಿದೆ. ಪ್ರಥಮಾರ್ಧಕ್ಕೆ 29-10ರಲ್ಲಿ ಮುನ್ನಡೆ ಪಡೆದ ಡೆಲ್ಲಿ, ದ್ವಿತೀಯಾರ್ಧದಲ್ಲಿ ಎದುರಾಳಿಗೆ 25 ಅಂಕ ಬಿಟ್ಟುಕೊಟ್ಟರೂ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ರೇಡರ್‌ಗಳಾದ ಮೇರಾಜ್‌ (15), ಚಂದ್ರನ್‌ ರಂಜಿತ್‌ (9) ಮತ್ತು ನವೀನ್‌ ಕುಮಾರ್‌ (9) ಡೆಲ್ಲಿ ತಂಡದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರೆ, ದೀಪಕ್‌ ಹೂಡಾ 20 ಅಂಕ ಗಳಿಸಿದರೂ ಇತರ ಸದಸ್ಯರ ವೈಫಲ್ಯದಿಂದ ಜೈಪುರ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌