ಆ್ಯಪ್ನಗರ

ಬಾಕ್ಸಿಂಗ್‌: ಉಪಾಂತ್ಯಕ್ಕೆ 6 ಭಾರತೀಯರು

ಮೂರು ಬಾರಿಯ ಏಷ್ಯನ್‌ ಪದಕ ವಿಜೇತ ಶಿವ ಥಾಪ (60 ಕೆಜಿ) ಮತ್ತು ಮಾಜಿ ಯೂತ್‌ ವಿಶ್ವ ಚಾಂಪಿಯನ್‌ ಸಚಿನ್‌ ಸಿವಾಚ್‌ (52 ಕೆಜಿ) ಸೇರಿದಂತೆ ಆರು ಭಾರತೀಯ ಬಾಕ್ಸರ್‌ಗಳು ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ ನಡೆಯುತ್ತಿರುವ 38ನೇ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವುದರೊಂದಿಗೆ ಪದಕ ಖಾತ್ರಿಪಡಿಸಿದ್ದಾರೆ.

PTI 10 Mar 2019, 5:00 am
ಹೊಸದಿಲ್ಲಿ: ಮೂರು ಬಾರಿಯ ಏಷ್ಯನ್‌ ಪದಕ ವಿಜೇತ ಶಿವ ಥಾಪ (60 ಕೆಜಿ) ಮತ್ತು ಮಾಜಿ ಯೂತ್‌ ವಿಶ್ವ ಚಾಂಪಿಯನ್‌ ಸಚಿನ್‌ ಸಿವಾಚ್‌ (52 ಕೆಜಿ) ಸೇರಿದಂತೆ ಆರು ಭಾರತೀಯ ಬಾಕ್ಸರ್‌ಗಳು ಫಿನ್ಲೆಂಡ್‌ನ ಹೆಲ್ಸಿಂಕಿಯಲ್ಲಿ ನಡೆಯುತ್ತಿರುವ 38ನೇ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವುದರೊಂದಿಗೆ ಪದಕ ಖಾತ್ರಿಪಡಿಸಿದ್ದಾರೆ.
Vijaya Karnataka Web shiva thapa sachin among 6 indians in semis of finland boxing tourney
ಬಾಕ್ಸಿಂಗ್‌: ಉಪಾಂತ್ಯಕ್ಕೆ 6 ಭಾರತೀಯರು


ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ಸ್‌ ಸೆಣಸಾಟಗಳಲ್ಲಿ ಮೊಹಮ್ಮದ್‌ ಹುಸಾಮುದ್ದೀನ್‌ (56 ಕೆಜಿ), ಕವೀಂದರ್‌ ಸಿಂಗ್‌ ಬಿಷ್ಟ್‌ (56 ಕೆಜಿ), ದಿನೇಶ್‌ ಡಾಗರ್‌ (69 ಕೆಜಿ), ನವೀನ್‌ ಕುಮಾರ್‌ (91+ಕೆಜಿ), ವಿಜೇತ ಸುಮಿತ್‌ ಸಾಂಗ್ವಾನ್‌ (91 ಕೆಜಿ) ಹಾಗೂ ಗೋವಿಂದ್‌ ಸಹಾನಿ (49 ಕೆಜಿ) ಕೂಡ ಸೆಮಿಫೈನಲ್ಸ್‌ ತಲುಪಿದ್ದಾರೆ.
15 ದೇಶಗಳ ಸುಮಾರು 100 ಬಾಕ್ಸರ್‌ಗಳು ಈ ಟೂರ್ನಿಯಲ್ಲಿ ಸ್ಪರ್ಧಿಸಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಥಾಪ 5-0 ಅಂತರದಲ್ಲಿ ಪೋಲೆಂಡ್‌ನ ಡಾಮಿನಿಕ್‌ ಪಲಾಕ್‌ ವಿರುದ್ಧ ಸುಲಭ ಜಯ ಗಳಿಸಿ ಉಪಾಂತ್ಯ ತಲುಪಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಥಾಪ, ಉಪಾಂತ್ಯದಲ್ಲಿ ರಷ್ಯಾದ ಮಿಖೈಲ್‌ ವಾರ್ಲಾಮೊವ್‌ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸಚಿನ್‌ 4-1 ಅಂತರದಿಂದ ರಷ್ಯಾದ ತಮಿರ್‌ ಗಲಾನೊವ್‌ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ದಾಪುಗಾಲಿಟ್ಟಿದ್ದಾರೆ. 20 ವರ್ಷದ ಸಚಿನ್‌ ಸೆಮಿಫೈನಲ್‌ ಪಂದ್ಯದಲ್ಲಿ ಕಿರ್ಗಿಸ್ತಾನದ ಅಝತ್‌ ಉಸೆನಾಲೀವ್‌ ಅವರನ್ನು ಎದುರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌