ಆ್ಯಪ್ನಗರ

ರಣರಂಗವಾಯ್ತು ಹಾಕಿ ಕ್ರೀಡಾಂಗಣ, ನೆಹರೂ ಕಪ್‌ ಫೈನಲ್‌ನಲ್ಲಿ ಮಾರಾಮಾರಿ: ವೈರಲ್‌ ವಿಡಿಯೋ

ದಿಲ್ಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣ ಸೋಮವಾರ ಅಕ್ಷರಶಃ ರಣರಂಗವಾಗಿತ್ತು. ಪಂಜಾಬ್‌ ಪೊಲೀಸ್‌ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನಡುವೆ ನಡೆದ ನೆಹರೂ ಕಪ್ ಫೈನಲ್‌ ಪಂದ್ಯದಲ್ಲಿ ಆಟಗಾರರು ಆಟದ ನಡುವೆಯೇ ಮಾರಾಮಾರಿ ನಡೆಸಿ ಬಡಿದಾಡಿಕೊಂಡ ಅಚ್ಚರಿಯ ಘಟನೆ ನಡೆದಿದೆ.

Vijaya Karnataka Web 25 Nov 2019, 9:16 pm
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣ ಸೋಮವಾರ ಅಕ್ಷರಶಃ ರಣರಂಗವಾಗಿತ್ತು. ಪಂಜಾಬ್‌ ಪೊಲೀಸ್‌ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನಡುವೆ ನಡೆದ ನೆಹರೂ ಕಪ್ ಫೈನಲ್‌ ಪಂದ್ಯದಲ್ಲಿ ಆಟಗಾರರು ಆಟದ ನಡುವೆಯೇ ಮಾರಾಮಾರಿ ನಡೆಸಿ ಬಡಿದಾಡಿಕೊಂಡ ಅಚ್ಚರಿಯ ಘಟನೆ ನಡೆದಿದೆ.
Vijaya Karnataka Web nehru cup hockey 2019


ಎರಡೂ ತಂಡದ ಆಟಗಾರರು ಹಾಕಿ ಸ್ಟಿಕ್‌ಗಳೊಂದಿಗೆ ಬಡಿದಾಡಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಸೋಮವಾರ ವೈರಲ್‌ ಆಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆಟದ ಮಧ್ಯೆ ನಡೆದ ಒಂದು ಸಣ್ಣ ವಾಗ್ವಾದ ವಿಕೋಪಕ್ಕೆ ತಿರುಗಿ ಎರಡೂ ತಂಡಗಳ ನಡುವೆ ಭಾರಿ ಹೊಡೆದಾಟವೇ ನಡೆದುಬಿಟ್ಟಿದೆ.

ವಿಡಿಯೋದಲ್ಲಿ ಕೆಂಪು ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವುದು ಪಂಜಾಬ್‌ ಪೊಲೀಸ್‌ ತಂಡವಾಗಿದ್ದು, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ತಂಡ ಬಿಳಿಯ ಸಮವಸ್ತ್ರದಲ್ಲಿದೆ. ಲಭ್ಯವಾಗಿರುವ ವಿಡಿಯೋ ವೀಕ್ಷಿಸಿ ಮಾತ್ರ ಹೇಳುವುದಾದರೆ, ಪಂಜಾಬ್‌ ಪೊಲೀಸ್‌ ತಂಡದ ಆಟಗಾರರು ಹೆಚ್ಚು ಆಕ್ರಮಣಕಾರಿಯಾಗಿದ್ದು ಹಾಕಿ ಸ್ಟಿಕ್‌ಗಳಿಂದ ನ್ಯಾಷನಲ್‌ ಬ್ಯಾಂಕ್‌ ಆಟಗಾರರನ್ನು ಥಳಿಸುತ್ತಿದ್ದಾರೆ. ಅದರಲ್ಲಿ ಪಿಎನ್‌ಬಿ ತಂಡದ ಆಟಗಾರನೊಬ್ಬ ಹೊಡೆತಗಳಿಂದಾಗಿ ನೆಲಕ್ಕುರುಳಿ ಒದ್ದಾಡುತ್ತಿರುವುದಕ್ಕೂ ಕಾಣಬಹುದಾಗಿದೆ.


ಕೊನೆಗೂ ಪಿಎನ್‌ಬಿ ತಂಡಕ್ಕೆ ಗೆಲುವು
ಇಷ್ಟು ದೊಡ್ಡ ರಂಪಾಟವಾದರೂ ಕೂಡ ಪಂದ್ಯವನ್ನು ನಡೆಸಲಾಗಿದ್ದು, ತಲಾ 8 ಆಟಗಾರರೊಂದಿಗೆ ಪಂದ್ಯ ಮುಂದುವರಿದು ಅಂತಿಮವಾಗಿ 6-3 ಗೋಲ್‌ಗಳಿಂದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ತಂಡ ಪಂಜಾಬ್‌ ಪೊಲೀಸ್‌ ತಂಡದ ಎದುರು ಭರ್ಜರಿ ಜಯ ದಾಖಲಿಸಿದೆ. ಇನ್ನು ಪಂದ್ಯದಲ್ಲಿ ತಂಡಗಳ ಈ ಅತಿರೇಕದ ವರ್ತನೆಗೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ನರಿಂದರ್‌ ಬಾತ್ರ, ತಂಡಗಳು ಮತ್ತು ಆ ತಂಡಗಳ ಮ್ಯಾನೇಜ್ಮೆಂಟ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌: ಇಂಗ್ಲೆಂಡ್‌ ವಿಶ್ವಕಪ್‌ ಹೀರೊ ಜೋಫ್ರಾ ಆರ್ಚರ್‌ಗೆ ಜನಾಂಗೀಯ ನಿಂದನೆ!

ಕಠಿಣ ಕ್ರಮಕ್ಕೆ ಆಗ್ರಹ
"ಬೇಜವಾಬ್ದಾರಿಯುತ ಮ್ಯಾನೇಜ್ಮೆಂಟ್‌, ಆಟಗಾರರು ಮತ್ತು ಹುರುಳಿಲ್ಲದ ಸಮಿತಿಯಿಂದಾಗಿ ಆಟಕ್ಕೆ ಕಳಂಕ ಬಂದಿದೆ. ಇದರಿಂದ ಹಾಕಿ ಕ್ರೀಡೆಗೆ ಕೆಟ್ಟ ಹೆಸರು. ಹಾಕಿ ಇಂಡಿಯಾ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ," ಎಂದು ನರಿಂದರ್‌ ಬಾತ್ರಾ ಹೇಳಿದ್ದಾರೆ.

"ಟೂರ್ನಿಯ ಅಧಿಕಾರಿಗಳಿಂದ ಅಧಿಕೃತ ವರದಿ ಸಲುವಾಗಿ ಕಾಯುತ್ತಿದ್ದೇವೆ. ಈ ಮೂಲಕ ಯಾವ ತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ," ಎಂದು ಹಾಕಿ ಇಂಡಿಯಾದ ಸಿಇಒ ಎಲೆನಾ ನೊರ್ಮನ್‌ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌