ಆ್ಯಪ್ನಗರ

ಬೆಂಗಳೂರಿನಲ್ಲಿ ಶೂಟಿಂಗ್‌ ಕೇಂದ್ರ ಉದ್ಘಾಟನೆ

ಸ್ಪೋರ್ಟ್ಸ್ ಎಕ್ಸೆಲೆನ್ಸ್‌ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)-ಅಭಿನವ್‌ ಬಿಂದ್ರಾ ಟಾರ್ಗೆಟಿಂಗ್‌ ...

Vijaya Karnataka 17 Dec 2017, 9:22 pm

ಬೆಂಗಳೂರು : ಸ್ಪೋರ್ಟ್ಸ್ ಎಕ್ಸೆಲೆನ್ಸ್‌ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)-ಅಭಿನವ್‌ ಬಿಂದ್ರಾ ಟಾರ್ಗೆಟಿಂಗ್‌ ಪರ್ಫಾಮೆನ್ಸ್‌ ಸೆಂಟರ್‌ ಅನ್ನು ಬ್ಯಾಡ್ಮಿಂಟನ್‌ ದಿಗ್ಗಜ ಪ್ರಕಾಶ್‌ ಪಡುಕೋಣೆ ಮತ್ತು ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಉದ್ಘಾಟಿಸಿದರು.

Vijaya Karnataka Web shooteing center inaugurated
ಬೆಂಗಳೂರಿನಲ್ಲಿ ಶೂಟಿಂಗ್‌ ಕೇಂದ್ರ ಉದ್ಘಾಟನೆ


ಮಾಜಿ ಶೂಟರ್‌, ಒಲಿಂಪಿಕ್‌ ಚಾಂಪಿಯನ್‌ ಬಿಂದ್ರಾ ಈ ಕೇಂದ್ರವನ್ನು ವಿನ್ಯಾಸಗೊಳಿಸಿದ್ದಾರೆ. ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿಯ ಮೂಲಕ ಸಾಯ್‌ ನೇತೃತ್ವದಲ್ಲಿ ಅತ್ಯಾಧುನಿಕ ನೂತನ ತಂತ್ರಜ್ಞಾನ ಒಳಗೊಂಡ ಶೂಟಿಂಗ್‌ ಉಪಕರಣಗಳನ್ನು ಈ ಕೇಂದ್ರದಲ್ಲಿ ನಿಯೋಜಿಸಲಾಗಿದೆ.

''ಪಡುಕೋಣೆ-ದ್ರಾವಿಡ್‌ ಕ್ರೀಡಾ ಸಂಕೀರ್ಣದಲ್ಲಿ ಟಾರ್ಗೆಟಿಂಗ್‌ ಪರ್ಫಾಮೆನ್ಸ್‌ ಸೆಂಟರ್‌ ಸ್ಥಾಪಿಸಿರುವುದಕ್ಕೆ ಸಂತೋಷಗೊಂಡಿದ್ದೇನೆ. ಚಂಢೀಗಡ ಮತ್ತು ಹೊಸದಿಲ್ಲಿಯ ಕೇಂದ್ರಗಳಂತೆ ಇದು ಒಂದಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಪ್ರಮುಖ ಕೇಂದ್ರದಲ್ಲಿ ಇದು ಮೊದಲೆನಿಸಿದೆ. ಇಂತಹ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸುವುದನ್ನು ಎದುರು ನೋಡುತ್ತಿದ್ದೇನೆ,'' ಎಂದು ಬಿಂದ್ರಾ ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಕ್ರೀಡಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ಅಭಿನವ್‌ ಬಿಂದ್ರಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌