ಹಾಂಕಾಂಗ್: ಪ್ರತಿಷ್ಠಿತ ಹಾಂಕಾಂಗ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಭಾರತದ ಹೆಮ್ಮೆಯ ಪಿವಿ ಸಿಂಧೂ, ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಜಪಾನ್ನ ಅಕೇನ್ ಯಮಗುಚಿ ಅವರನ್ನು 21-12, 21-19ರ ಅಂತರದಲ್ಲಿ ಮಣಿಸಿದ ಸಿಂಧೂ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.
ಟೂರ್ನಿಯಲ್ಲಿ ಎರಡನೇ ಶ್ರೇಯಾಂಕಿತೆಯಾಗಿರುವ ಸಿಂಧೂಗೆ ಎದುರಾಳಿ ಐದನೇ ಶ್ರೇಯಾಂಕಿತೆ ಯಮಗುಚಿ ಸವಾಲಾಗಲಿಲ್ಲ. ಇದರಿಂದಾಗಿ 37 ನಿಮಿಷಗಳಲ್ಲೇ ಪಂದ್ಯ ವಶಪಡಿಸಿಕೊಂಡರು.
ಮೊದಲ ಸುತ್ತು 21-12ರ ಅಂತರದಲ್ಲಿ ವಶಪಡಿಸಿಕೊಂಡ ಸಿಂಧೂ, ದ್ವಿತೀಯ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿತ್ತು. ಇದು ಕಳೆದ ಆರು ಸ್ಪರ್ಧೆಗಳಲ್ಲಿ ಯಮಗುಚಿ ವಿರುದ್ಧ ಸಿಂಧೂ ಅವರ ನಾಲ್ಕನೇ ಗೆಲುವಾಗಿದೆ.
ಈ ನಡುವೆ ಸಿಂಧೂ ವಿಶ್ವ ಮಹಿಳಾ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ಎರಡರಿಂದ ಮೂರನೇ ಸ್ಥಾನಕ್ಕೆ ಕುಸಿತ ಅನುಭವಿಸಿದ್ದಾರೆ.