ಆ್ಯಪ್ನಗರ

ಫ್ರೆಂಚ್ ಓಪನ್ ಸೆಮಿಯಲ್ಲಿ ಕಿಡಂಬಿ-ಪ್ರಣೋಯ್ ಮುಖಾಮುಖಿ

ಪ್ರತಿಷ್ಠಿತ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಮತ್ತು ಎಚ್‌ಎಸ್ ಪ್ರಣೋಯ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 28 Oct 2017, 2:43 pm
ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಮತ್ತು ಎಚ್‌ಎಸ್ ಪ್ರಣೋಯ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
Vijaya Karnataka Web sindhu kidambi prannoy reach semis of french open super series
ಫ್ರೆಂಚ್ ಓಪನ್ ಸೆಮಿಯಲ್ಲಿ ಕಿಡಂಬಿ-ಪ್ರಣೋಯ್ ಮುಖಾಮುಖಿ


ಇದಕ್ಕೂ ಮೊದಲು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪದಕ ನಿರೀಕ್ಷೆಯಾಗಿದ್ದ ಪಿವಿ ಸಿಂಧೂ ಸಹ ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶಿಸಿದ್ದರು.

ಇಲ್ಲಿನ ಕುತೂಹಲಕಾರಿ ಅಂಶವೆಂದರೆ ಸೆಮಿ ಹೋರಾಟದಲ್ಲಿ ಶ್ರೀಕಾಂತ್ ತಮ್ಮದೇ ದೇಶದ ಪ್ರಣೋಯ್ ಸವಾಲನ್ನು ಎದುರಿಸಲಿದ್ದಾರೆ. ಇದರಿಂದಾಗಿ ಓರ್ವ ಆಟಗಾರ ಫೈನಲ್ ತಲುಪುವ ಮುನ್ನವೇ ನಿರ್ಗಮಿಸಲಿದ್ದಾರೆ. ಆದರೆ ಭಾರತೀಯನೊಬ್ಬ ಫೈನಲ್ ಪ್ರವೇಶಿಸುವುದು ಖಚಿತವೆನಿಸಿದೆ.

ಚೀನಾದ ಶಿ ಯೂಕಿ ಅವರನ್ನು 8-21, 21-19, 21-9ರ ಕಠಿಣ ಅಂತರದಲ್ಲಿ ಮಣಿಸಿದ ಶ್ರೀಕಾಂತ್ ಮುನ್ನುಗ್ಗಿದರು.

ಅತ್ತ ದಕ್ಷಿಣ ಕೊರಿಯಾದ ಜಿಯಾನ್ ಹೈಯಾಕ್ ಜಿನ್ ವಿರುದ್ದ 21-16, 21-16ರ ಅಂತರದಲ್ಲಿ ಸವಾರಿ ಮಾಡಿರುವ ಪ್ರಣೋಯ್ ಅಂತಿಮ ನಾಲ್ಕರ ಸುತ್ತಿಗೆ ಪ್ರವೇಶಿಸಿದರು.

ಅತ್ತ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಕದನದ್ಲಲಿ ಜಪಾನ್‌ನ ಅಕೇನ್ ಯಮಗುಚಿ ಅವರ ಸವಾಲನ್ನು ಸಿಂಧೂ ಎದುರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌