ಆ್ಯಪ್ನಗರ

ಸಿಂಧೂ, ಶ್ರೀಕಾಂತ್‌ ಭಾರತದ ಭರವಸೆ

ಇಂದಿನಿಂದ ಡೆನ್ಮಾರ್ಕ್‌ ಓಪನ್‌ ಸೂಪರ್‌ ಸೀರೀಸ್‌ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ ಪಿಟಿಐ ಒಡೆನ್ಸ್‌ ಪ್ರಶಸ್ತಿ ಫೇವರಿಟ್‌ಗಳಾದ ಪಿ...

PTI 17 Oct 2017, 4:00 am

ಇಂದಿನಿಂದ ಡೆನ್ಮಾರ್ಕ್‌ ಓಪನ್‌ ಸೂಪರ್‌ ಸೀರೀಸ್‌ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ

ಒಡೆನ್ಸ್‌: ಪ್ರಶಸ್ತಿ ಫೇವರಿಟ್‌ಗಳಾದ ಪಿ.ವಿ ಸಿಂಧೂ ಮತ್ತು ಕಿಡಂಬಿ ಶ್ರೀಕಾಂತ್‌, ಮಂಗಳವಾರ ಇಲ್ಲಿ ಆರಂಭವಾಗಲಿರುವ ಡೆನ್ಮಾರ್ಕ್‌ ಓಪನ್‌ ಸೂಪರ್‌ ಸೀರೀಸ್‌ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

ಒಟ್ಟು 4.85 ರೂ. ಬಹುಮಾನ ಮೊತ್ತದ ಟೂರ್ನಿಯಲ್ಲಿ 2ನೇ ಶ್ರೇಯಾಂಕ ಪಡೆದಿರುವ ಸಿಂಧೂ, ಮಹಿಳಾ ಸಿಂಗಲ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ ವಿಶ್ವದ 10ನೇ ರಾರ‍ಯಂಕ್‌ನ ಆಟಗಾರ್ತಿ ಚೀನಾದ ಚೆನ್‌ ಯುಫೇ ಅವರನ್ನು ಎದುರಿಸಲಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಯುಫೇ ವಿರುದ್ಧ ಸಿಂಧೂ ಗೆಲುವು ದಾಖಲಿಸಿದ್ದರು.

ಜಪಾನ್‌ ಓಪನ್‌ ಟೂರ್ನಿಯಲ್ಲಿ ವೈಫಲ್ಯ ಎದುರಿಸಿದ ಹೊರತಾಗಿಯೂ ಸಿಂಧೂ ಪ್ರಸಕ್ತ ಸಾಲಿನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧೂ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಮತ್ತು ಕೊರಿಯಾ ಓಪನ್‌ನಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ.

ಭಾರತದ ಮತ್ತೊಬ್ಬ ಸ್ಟಾರ್‌ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ಮೊದಲ ಸುತ್ತಿನಲ್ಲೇ ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ಅವರ ಕಠಿಣ ಸವಾಲು ಎದುರಾಗಿದೆ. ತಮ್ಮ ದೀರ್ಘಕಾಲ ಎದುರಾಳಿ ಕ್ಯಾರೊಲಿನಾ ವಿರುದ್ಧ ವಿಶ್ವದ 12ನೇ ರಾರ‍ಯಂಕ್‌ನ ಸೈನಾ, 4-4ರ ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಕಳೆದ ಜಪಾನ್‌ ಓಪನ್‌ ಟೂರ್ನಿಯ 2ನೇ ಸುತ್ತಿನಲ್ಲಿ ಸ್ಪೇನ್‌ ಆಟಗಾರ್ತಿಯ ವಿರುದ್ಧ ಸೈನಾ ಸೋಲು ಕಂಡಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್‌ ಭಾರತದ ಪ್ರಶಸ್ತಿಯ ಭರವಸೆಯಾಗಿದ್ದಾರೆ. ಪ್ರಸಕ್ತ ವರ್ಷ ಇಂಡೋನೇಷ್ಯಾ ಹಾಗೂ ಆಸ್ಪ್ರೇಲಿಯಾ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಪಟ್ಟಕ್ಕೇರಿರುವ ವಿಶ್ವದ 8ನೇ ರಾರ‍ಯಂಕ್‌ನ ಶ್ರೀಕಾಂತ್‌, ಮೊದಲ ಪಂದ್ಯದಲ್ಲಿ ಅರ್ಹತಾ ಸುತ್ತಿನ ಪಂದ್ಯದ ವಿಜೇತ ಆಟಗಾರನನ್ನು ಎದುರಿಸಲಿದ್ದು, ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ ಮತ್ತು ಸ್ಥಳೀಯ ಫೇವರಿಟ್‌ ವಿಕ್ಟರ್‌ ಅಕ್ಸೆಲ್ಸನ್‌ ಎದುರಾಗುವ ಸಾಧ್ಯತೆಯಿದೆ. ಉಳಿದಂತೆ ಸಿಂಗಾಪುರ ಓಪನ್‌ ಚಾಂಪಿಯನ್‌ ಬಿ.ಸಾಯಿ ಪ್ರಮೀತ್‌ ಮತ್ತು ಯು.ಎಸ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಚಾಂಪಿಯನ್‌ ಎಚ್‌.ಎಸ್‌ ಪ್ರಣೋಯ್‌ ಕೂಡ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಸೈಯದ್‌ ಮೋದಿ ಗ್ರ್ಯಾನ್‌ ಪ್ರಿ ಗೋಲ್ಡ್‌ ವಿಜೇತ ಸಮೀರ್‌ ವರ್ಮಾ ಕೂಡ ಶುಭಾರಂಭವನ್ನು ಎದುರು ನೋಡುತ್ತಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ, ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಜೋಡಿಯಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌