ಆ್ಯಪ್ನಗರ

ಫೈನಲ್‌ಗೆ ಭಾರತದ 6 ಬಾಕ್ಸರ್‌

ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತರಾದ ಮನೀಶ್‌ ಕೌಶಿಕ್‌ (60 ಕೆಜಿ) ಮತ್ತು ಸತೀಶ್‌ ಕುಮಾರ್‌ (91+ ಕೆಜಿ) ನೇತೃತ್ವದ ಭಾರತದ ಆರು ಬಾಕ್ಸರ್‌ಗಳು ಇರಾನ್‌ನ ಚಬಹರ್‌ನಲ್ಲಿ ನಡೆಯುತ್ತಿರುವ ಮಕ್ರನ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

PTI 27 Feb 2019, 5:00 am
ಹೊಸದಿಲ್ಲಿ : ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತರಾದ ಮನೀಶ್‌ ಕೌಶಿಕ್‌ (60 ಕೆಜಿ) ಮತ್ತು ಸತೀಶ್‌ ಕುಮಾರ್‌ (91+ ಕೆಜಿ) ನೇತೃತ್ವದ ಭಾರತದ ಆರು ಬಾಕ್ಸರ್‌ಗಳು ಇರಾನ್‌ನ ಚಬಹರ್‌ನಲ್ಲಿ ನಡೆಯುತ್ತಿರುವ ಮಕ್ರನ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.
Vijaya Karnataka Web six indians enter finals of makran cup boxing in iran
ಫೈನಲ್‌ಗೆ ಭಾರತದ 6 ಬಾಕ್ಸರ್‌


ಭಾರತದ ಮನೀಶ್‌, ಸತೀಶ್‌, ದೀಪಕ್‌ ಸಿಂಗ್‌ (49 ಕೆಜಿ), ಪಿ.ಲಲಿತಾ ಪ್ರಸಾದ್‌ (52 ಕೆಜಿ), ಸಂಜೀತ್‌ (91 ಕೆಜಿ) ಹಾಗೂ ದುರ್ಯೋಧನ ಸಿಂಗ್‌ ನೇಗಿ (69 ಕೆಜಿ) ಸೋಮವಾರ ಸಂಜೆ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಗೆದ್ದು ಪ್ರಶಸ್ತಿ ಸುತ್ತು ತಲುಪಿದರು. ಇನ್ನು, ಸೆಮಿಫೈನಲ್‌ನಲ್ಲಿ ಆಷ್ಕಾನ್‌ ರೀಝೈ ವಿರುದ್ಧ 4-1ರಲ್ಲಿ ಜಯ ಗಳಿಸಿದ ರಾಷ್ಟ್ರೀಯ ಚಾಂಪಿಯನ್‌ ಕೌಶಿಕ್‌, ಬುಧವಾರ ಪ್ರಶಸ್ತಿಗಾಗಿ ದನಿಯಲ್‌ ಬಕ್ಶ್‌ ಶಾ ವಿರುದ್ಧ ಸೆಣಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌