ಹೊಸದಿಲ್ಲಿ : ಎಚ್.ಎಸ್. ಪ್ರಣೋಯ್ ಅವರ ಟ್ರಂಪ್ ಮ್ಯಾಚ್ ಸೇರಿದಂತೆ ಮೂರು ಪಂದ್ಯದಲ್ಲಿ ಸುಲಭ ಜಯ ಗಳಿಸಿದ ಅಹಮದಾಬಾದ್ ಸ್ಮ್ಯಾಷ್ ಮಾಸ್ಟರ್ಸ್ ತಂಡ ಇಲ್ಲಿ ನಡೆಯುತ್ತಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನ ಮೂರನೇ ಆವೃತ್ತಿಯಲ್ಲಿ ಹೈದರಾಬಾದ್ ಹಂಟರ್ಸ್ ವಿರುದ್ಧ 4-3 ರಲ್ಲಿ ಸಲುಭ ಜಯ ಗಳಿಸಿದೆ.
ಸಿರಿ ಫೋರ್ಟ್ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಮಿಶ್ರ ಡಬಲ್ಸ್, ಮಹಿಳಾ ಸಿಂಗಲ್ಸ್ ಮತ್ತು ಪುರುಷರ ಸಿಂಗಲ್ಸ್ (ಟ್ರಂಪ್ ಮ್ಯಾಚ್)ನಲ್ಲಿ ಜಯ ಗಳಿಸಿದ ಸ್ಮ್ಯಾಷ್ ಮಾಸ್ಟರ್ಸ್ 4-1 ಅಂಕಗಳ ಅಂತರದಿಂದ ವಿಶ್ವದ ನಾಲ್ಕನೇ ರಾರಯಂಕಿನ ಕ್ಯಾರೊಲಿನಾ ಮರಿನ್ ಸಾರಥ್ಯದ ಹೈದರಾಬಾದ್ ಹಂಟರ್ಸ್ ತಂಡವನ್ನು ಹತ್ತಿಕ್ಕಿತು.
ಮಿಶ್ರ ಡಬಲ್ಸ್ನಲ್ಲಿ ಕಣಕ್ಕಿಳಿದ ಕೆ.ಆರ್. ಜುಹ್ಲ್ ಮತ್ತು ಲೀ ಚುನ್ ರೆಗಿನಾಲ್ಡ್ ಜೋಡಿ 4-15, 15-12, 15-8 ಗೇಮ್ಗಳಿಂದ ಬೆರ್ನಾಡೆತ್, ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಜೋಡಿ ವಿರುದ್ಧ ಪ್ರಯಾಸದ ಜಯ ಗಳಿಸಿದರು.
ನಂತರ ನಡೆದ ಪುರುಷರ ಸಿಂಗಲ್ಸ್ನಲ್ಲಿ ಸಮೀರ್ ವರ್ಮಾ ಸೋಲುಂಡರೂ, ಮಹಿಳಾ ಸಿಂಗಲ್ಸ್ನಲ್ಲಿ ಟಿ.ಟಿ.ಯಿಂಗ್ ಜಯ ತಂದಿಟ್ಟರು. ಹೀಗಾಗಿ 2-1ರಲ್ಲಿ ಮುನ್ನಡೆ ಕಂಡ ಸ್ಮ್ಯಾಷ್ ಮಾಸ್ಟರ್ಸ್, ಪ್ರಣೋಯ್(ಟ್ರಂಪ್ ಮ್ಯಾಚ್) ಆಡಿದ ಪುರುಷರ ಸಿಂಗಲ್ಸ್ನಲ್ಲಿ 2-0 ಜಯ ಸಾಧಿಸಿದ ಕಾರಣ 4-1ರಲ್ಲಿ ಮೇಲುಗೈ ಸಾಧಿಸಿತು. ಹೀಗಾಗಿ ಅಂತಿಮ ಹಾಗೂ ಪುರುಷರ ಡಬಲ್ಸ್ ಪಂದ್ಯ ಅಹಮದಾಬಾದ್ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಗುರುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ 5-2 ಅಂಕಗಳ ಅಂತರದಿಂದ ಡೆಲ್ಲಿ ಡ್ಯಾಷರ್ಸ್ ವಿರುದ್ಧ ಗೆದ್ದು ಲೀಗ್ನಲ್ಲಿ ಶುಭಾರಂಭ ಮಾಡಿತು.
ಇಂದಿನ ಪಂದ್ಯ
ನಾರ್ತ್ ಈಸ್ಟರ್ನ್ ವಾರಿಯರ್ಸ್-ಅವಧ್ ವಾರಿಯರ್ಸ್
ಪಂದ್ಯ ಆರಂಭ: ಸಂಜೆ 7ಕ್ಕೆ
ಸ್ಥಳ: ಸಿರಿ ಫೋರ್ಟ್ ಕ್ರೀಡಾ ಸಂಕೀರ್ಣ, ಹೊಸದಿಲ್ಲಿ