ಆ್ಯಪ್ನಗರ

ಸಂಜೀವಿನಿ, ಅವಿನಾಶ್‌ ಆಕರ್ಷಣೆ

ಹಾಲಿ ಚಾಂಪಿಯನ್‌ ಮತ್ತು ಕೂಟ ದಾಖಲೆ ಒಡತಿ ಸಂಜೀವಿನಿ ಜಾಧವ್‌ ಮತ್ತು ರಾಷ್ಟ್ರೀಯ ಸ್ಟೀಪಲ್‌ ಚೇಸ್‌ ದಾಖಲೆ ಒಡೆಯ ಅವಿನಾಶ್‌ ಸಾಬ್ಲೆ ಇದೇ ತಿಂಗಳ 19ರಂದು ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ 10ಕೆ 12ನೇ ಆವೃತ್ತಿಯ ಇಂಡಿಯನ್‌ ಎಲೈಟ್‌ ವಿಭಾಗದ ಪ್ರಮುಖ ಆಕರ್ಷಣೆಯಾಗಿದ್ದಾರೆ.

Vijaya Karnataka 10 May 2019, 5:00 am
ಬೆಂಗಳೂರು: ಹಾಲಿ ಚಾಂಪಿಯನ್‌ ಮತ್ತು ಕೂಟ ದಾಖಲೆ ಒಡತಿ ಸಂಜೀವಿನಿ ಜಾಧವ್‌ ಮತ್ತು ರಾಷ್ಟ್ರೀಯ ಸ್ಟೀಪಲ್‌ ಚೇಸ್‌ ದಾಖಲೆ ಒಡೆಯ ಅವಿನಾಶ್‌ ಸಾಬ್ಲೆ ಇದೇ ತಿಂಗಳ 19ರಂದು ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ 10ಕೆ 12ನೇ ಆವೃತ್ತಿಯ ಇಂಡಿಯನ್‌ ಎಲೈಟ್‌ ವಿಭಾಗದ ಪ್ರಮುಖ ಆಕರ್ಷಣೆಯಾಗಿದ್ದಾರೆ.
Vijaya Karnataka Web TCS World 10K 2019-Countdown PC pic


ಸಂಜೀವಿನಿ ಮತ್ತು ಅವಿನಾಶ್‌ ಇಂಡಿಯನ್‌ ಎಲೈಟ್‌ ವಿಭಾಗದಲ್ಲಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖರಾಗಿದ್ದಾರೆ. ಇವರ ಜತೆಗೆ ಸ್ವಾತಿ ಗಢವೆ ಮತ್ತು ಪಾರೂಲ್‌ ಚೌಧರಿ ಭಾರತೀಯರ ಪೈಕಿ ತುರುಸಿನ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ ಎಂದು ರೇಸ್‌ ಸಂಘಟಕರು ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.

ಈ ಬಾರಿ 24 ಸಾವಿರದ 570 ಉತ್ಸಾಹಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಓಪನ್‌ 10ಕೆ ವಿಭಾಗದಲ್ಲಿ 16 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ನೋಂದಾಯಿತ ಸ್ಪರ್ಧಿಗಳು ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಇದೇ ತಿಂಗಳ 16, 17 ಮತ್ತು 18ರಂದು ಆಯೋಜಿಸಲಾಗಿರುವ ಎಕ್ಸ್‌ಪೋದಲ್ಲಿ ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಖರೀದಿಸಬಹುದು ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌