ಆ್ಯಪ್ನಗರ

ವೈದ್ಯರಿಂದ ಲೈಂಗಿಕ ಕಿರುಕುಳ

ಅಮೆರಿಕ ಜಿಮ್ನಾಸ್ಟಿಕ್‌ ತಂಡದ ವೈದ್ಯ ಲ್ಯಾರಿ ನಸ್ಸಾರ್‌ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿರುವ ಜಿಮ್ನಾಸ್ಟ್‌ ಗ್ಯಾಬ್ಬಿ ಡೌಗ್ಲಾಸ್‌ ಆರೋಪಿಸಿದ್ದಾರೆ.

Vijaya Karnataka 23 Nov 2017, 10:31 am

ವಾಷಿಂಗ್ಟನ್‌: ಅಮೆರಿಕ ಜಿಮ್ನಾಸ್ಟಿಕ್‌ ತಂಡದ ವೈದ್ಯ ಲ್ಯಾರಿ ನಸ್ಸಾರ್‌ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿರುವ ಜಿಮ್ನಾಸ್ಟ್‌ ಗ್ಯಾಬ್ಬಿ ಡೌಗ್ಲಾಸ್‌ ಆರೋಪಿಸಿದ್ದಾರೆ.

ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈಗಾಗಲೇ ತಪ್ಪಿತಸ್ಥರಾಗಿರುವ ನಸ್ಸಾರ್‌ ಅವರಿಂದ ತಾನು ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದು ಚಾಂಪಿಯನ್‌ಜಿಮ್ನಾಸ್ಟ್‌ ಹೇಳಿದ್ದಾರೆ.

'ಸ್ಪರ್ಧೆಯ ವೇಳೆ ನಾವು ಬಿಗಿ ಉಡುಪು ಧರಿಸುವುದರಿಂದ ಲ್ಯಾರಿ ನಸ್ಸಾರ್‌ ಲೈಂಗಿಕ ಕಿರುಕುಳಕ್ಕೆ ಬಲಿಯಾಗುತ್ತಿದ್ದೇವೆ, ಬಿಗಿ ಉಡುಪು ಧರಿಸಿದ್ದು ನಮ್ಮ ತಪ್ಪು,' ಎಂದು ಡೌಗ್ಲಾಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆ ನೀಡಿದ್ದಾರೆ.

Vijaya Karnataka Web team doctor abused me too says olympic champion gymnast douglas
ವೈದ್ಯರಿಂದ ಲೈಂಗಿಕ ಕಿರುಕುಳ


'ಕೆಲವೊಂದು ವಿಚಾರಗಳನ್ನು ನಾವು ಸಾರ್ವಜನಿಕವಾಗಿ ಹಂಚಿಕೊಳ್ಳಬಯಸುವುದಿಲ್ಲ, ಏಕೆಂದರೆ ಕೆಲವೊಂದು ವರ್ಷಗಳ ಕಾಲ ಮೌನವಾಗಿರಬೇಕಿತ್ತು. ಕೆಲ ವಿಷಯಗಳು ಅತೀವ ನೋವನ್ನುಂಟು ಮಾಡಿವೆ,' ಎಂದರು. ಡೌಗ್ಲಾಸ್‌ ಪರ ವಕೀಲ ಜೆಫ್‌ ರೇಮಾಂಡ್‌ ಕೂಡ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌