ಆ್ಯಪ್ನಗರ

ಟೆನಿಸ್‌: ನಿಕ್ಷೆಪ್‌ ಚಾಂಪಿಯನ್‌

ಮಿಂಚಿನ ಆಟವಾಡಿದ ಮೂರಣೇ ಶ್ರೇಯಾಂಕಿತ ಆಟಗಾರ ಬಿ.ಆರ್‌ ನಿಕ್ಷೇಪ್‌ ದಾವಣಗೆರೆಯಲ್ಲಿ ನಡೆದ ಎಐಟಿಎ 50ಕೆ ಟೆನಿಸ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Vijaya Karnataka 2 Mar 2019, 5:00 am
ಬೆಂಗಳೂರು: ಮಿಂಚಿನ ಆಟವಾಡಿದ ಮೂರಣೇ ಶ್ರೇಯಾಂಕಿತ ಆಟಗಾರ ಬಿ.ಆರ್‌ ನಿಕ್ಷೇಪ್‌ ದಾವಣಗೆರೆಯಲ್ಲಿ ನಡೆದ ಎಐಟಿಎ 50ಕೆ ಟೆನಿಸ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.
Vijaya Karnataka Web tennis bengaluru boy nikshep wins singles title aita 50k tournament held in davanagere
ಟೆನಿಸ್‌: ನಿಕ್ಷೆಪ್‌ ಚಾಂಪಿಯನ್‌


ಬೆಂಗಳೂರಿನ ಸುರಾನ ಕಾಲೇಜು ವಿದ್ಯಾರ್ಥಿ ಆಗಿರುವ ನಿಕ್ಷೇಪ್‌, ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 6-0, 6-1 ಅಂತರದ ನೇರ ಸೆಟ್‌ಗಳಿಂದ ತೆಲಂಗಾಣದ ಎದುರಾಳಿ ತಾಹ ಕಪಾಡಿಯ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಎರಡೂ ಸೆಟ್‌ಗಳಲ್ಲಿ ತಲಾ ಮೂರು ಬಾರಿ ಎದುರಾಳಿ ಸರ್ವ್‌ ಮುರಿದ ನಿಕ್ಷೇಪ್‌ ಸುಲಭವಾಗಿ ಜಯ ದಾಖಲಿಸಿದರು.

ಡಬಲ್ಸ್‌ ಫೈನಲ್‌ನಲ್ಲಿ ಕರ್ನಾಟಕದ ಜೋಡಿ ಅಲೋಕ್‌ ಆರಾಧ್ಯ ಮತ್ತು ರಿಭಾವ್‌ ರವಿಕಿರಣ್‌ 6-3, 6-0 ಅಂತರದಲ್ಲಿ ತೆಲಂಗಾಣದ ತಾಹ ಕಪಾಡಿಯ ಮತ್ತು ಫೈಝಾನ್‌ ಖಾದ್ರಿ ಜೋಡಿಗೆ ಸೋಲುಣಿಸಿ ಚಾಂಪಿಯನ್ಸ್‌ ಪಟ್ಟ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌