ಆ್ಯಪ್ನಗರ

ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌: ಒಲಿಂಪಿಕ್ಸ್‌ ಅರ್ಹತೆ ಬಳಿಕ ಕಂಚಿಗೆ ಕೊರಳೊಡ್ಡಿದ ವಿನೇಶ್‌ ಫೋಗಾಟ್‌

ಒಲಿಂಪಿಕ್ಸ್ ಕೋಟಾ ಗಳಿಸಿದ ಬಳಿಕ ಕಂಚಿನ ಪದಕಕ್ಕಾಗಿ ನಡೆದ ರೆಪೆಚೇಜ್‌ ವಿಭಾಗದ ಫೈನಲ್‌ನಲ್ಲಿ ಮಿಂಚಿದ ಭಾರತ ಚಾಂಪಿಯನ್‌ ಕುಸ್ತಿಪಟು ವಿನೇಶ್‌ ಫೋಗಾಟ್‌ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪದಕ ಗೆದ್ದುಕೊಂಡಿದ್ದಾರೆ.

Vijaya Karnataka Web 18 Sep 2019, 7:55 pm
ನೂರ್‌ ಸುಲ್ತಾನ್‌ (ಕಜಕಸ್ತಾನ್‌): ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಕುಸ್ತಿ ಪಟು ಎಂದೆನಿಸಿದ ಬಳಿಕ ಏಷ್ಯನ್‌ ಚಾಂಪಿಯನ್‌ ವಿನೇಶ್‌ ಫೋಗಾಟ್‌, ಇಲ್ಲಿ ನಡೆಯುತ್ತಿರುವ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ದಿದ್ದಾರೆ.
Vijaya Karnataka Web Vinesh Phogat 2019.


ಈ ಮೂಲಕ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕೊನೆಗೂ ಪದಕದ ಬರ ನೀಗಿಸಿಕೊಂಡಿರುವ 25 ವರ್ಷದ ಚಾಂಪಿಯನ್‌ ಕುಸ್ತಿಪಟು, ಇದೀಗ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದರ ಕಡೆಗೆ ಸಿದ್ದತೆ ನಡೆಸಲಿದ್ದಾರೆ.

ಹೆಬ್ಬೆರಳು ಮುರಿದಿದ್ದರೂ ಆ್ಯಷಸ್‌ ಸರಣಿಯ ಅಂತಿಮ ಟೆಸ್ಟ್‌ನಲ್ಲಿ ಆಡಿದ್ದ ಆಸೀಸ್‌ ನಾಯಕ!

ಕಳೆದ ಒಂದು ವರ್ಷದಿಂದ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ವಿನೇಶ್‌ ಫೋಗಾಟ್‌, ಬುಧವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತೆ ಗ್ರೀಸ್‌ನ ಮಾರಿಯಾ ಪ್ರೆವೊಲರಾಕಿ ವಿರುದ್ಧ ಫ್ರೀಸ್ಟೈಲ್‌ ಪಂದ್ಯದಲ್ಲಿ ಗೆದ್ದು ಚೊಚ್ಚಲ ವಿಶ್ವ ಚಾಂಪಿಯನ್‌ಷಿಪ್‌ ಪದಕ ಗೆದ್ದುಕೊಂಡರು.

ಇದಕ್ಕೂ ಮುನ್ನ ರೆಪಚೇಜ್‌ನ ಎರಡೂ ಪಂದ್ಯಗಳಲ್ಲಿ ಗೆಲ್ಲುವ ಮೂಲಕ 53 ಕೆಜಿ ವಿಭಾಗದ ಒಲಿಂಪಿಕ್‌ ಕೋಟಾ ತಮ್ಮದಾಗಿಸಿಕೊಂಡಿದ್ದರು. ವಿನೇಶ್‌ ಮೊದಲಿಗೆ ಮಾಜಿ ವಿಶ್ವ ಚಾಂಪಿಯನ್‌ ಕಂಚಿನ ಪದಕ ವಿಜೇತೆ ಉಕ್ರೇನ್‌ನ ಯೂಲಿಯಾ ಖಲಾವಾಡ್ಜೀ ಅವರನ್ನು 5-0ರಲ್ಲಿ ಮಣಿಸಿದರೆ, ಬಳಿಕ ಸಾರಾ ಹಿಲ್ದೆಬ್ರಾಂಟ್‌ ಅವರನ್ನು 8-2ರಲ್ಲಿ ಸೋಲಿಸಿ ರೆಪೆಚೇಜ್‌ ವಿಭಾಗದ ಕಂಚಿನ ಪದಕದ ಪಂದ್ಯಕ್ಕೆ ಮುನ್ನಡೆದಿದ್ದರು.

ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಅಕ್ರಮ, ಪಿಸಿಬಿಗೆ ಭಾರಿ ನಷ್ಟ!

ಬಳಿಕ ಕಂಚಿಗಾಗಿ ನಡೆದ ಕಾಳಗದಲ್ಲಿ ಗ್ರೀಸ್‌ನ ಮಾರಿಯಾ ಪ್ರೆವೊಲರಾಕಿ ಅವರನ್ನು ಸುಲಭವಾಗಿ ಮಣಿಸಿ ಪದಕ ಗೆದ್ದರು. ಇದಕ್ಕೂ ಮುನ್ನ ಚಿನ್ನ ಗೆಲ್ಲುವ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದ ವಿನೇಶ್‌, ಮೊದಲಿಗೆ ಸ್ವೀಡನ್‌ನ ಸೋಫಿಯಾ ಮ್ಯಾಟ್ಸನ್‌ ಅವರಿಗೆ 13-0 ಅಂತರದಲ್ಲಿ ಮಣ್ಣು ಮುಕ್ಕಿಸಿದ್ದರು. ಆದರೆ, ನಂತರದ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಜಪಾನ್‌ನ ಮಯು ಮುಕೈದಾ ಎದುರು 0-7 ಅಂತರದಲ್ಲಿ ಸೋಲನುಭವಿಸಿದರು. ಆದರೆ, ಜಪಾನ್‌ ಆಟಗಾರ್ತಿ ಫೈನಲ್‌ ತಲುಪಿದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿಪಟುವಿಗೆ ಕಂಚಿನ ಪದಕಕ್ಕಾಗಿ ರೆಪೆಚೇಜ್‌ನಲ್ಲಿ ಸ್ಪರ್ಧಿಸುವ ಅವಕಾಶ ಲಭ್ಯವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌