ಆ್ಯಪ್ನಗರ

PKL 2019: ಬೆಂಗಳೂರು-ಗುಜರಾತ್ ನಡುವೆ ಸೆಣಸಾಟ

ಬೆಂಗಳೂರು ಮೊದಲ ದಿನ ಪಟನಾ ವಿರುದ್ಧ ಗೆಲುವು ದಾಖಲಿಸಿದ ಹುಮ್ಮಸ್ಸಿನಲ್ಲಿದ್ದು, ಭಾನುಬಾಋದ ಪಂದ್ಯದಲ್ಲೂ ಗುಜರಾತ್ ವಿರುದ್ಧ ಗೆಲುವು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ.

Vijaya Karnataka Web 21 Jul 2019, 2:29 pm
ಬೆಂಗಳೂರು: ಪ್ರಸಕ್ತ ಸಾಲಿನ ವಿವೋ ಪ್ರೊ ಕಬಡ್ಡಿಯಲ್ಲಿ ಶನಿವಾರ ಉದ್ಘಾಟನಾ ದಿನದಂದು ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಬೆಂಗಳೂರು ಬುಲ್ಸ್, ಭಾನುವಾರ ಗುಜರಾತ್ ಫಾರ್ಚೂನ್‌ಜೈಂಟ್ಸ್‌ ವಿರುದ್ಧ ಆಡಲಿದೆ.
Vijaya Karnataka Web KPL


ಶನಿವಾರ ಹೈದರಾಬಾದ್‌ನ ಗಾಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪಟನಾ ಪೈರೇಟ್ಸ್ ಅನ್ನು 34 - 32 ಅಂತರದಲ್ಲಿ ಸೋಲಿಸಿತ್ತು.

ಭಾನುವಾರ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗುಜರಾತ್ ಫಾರ್ಚೂನ್‌ಜೈಂಟ್ಸ್‌ ವಿರುದ್ಧ ಆಡುತ್ತಿದ್ದು, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

ಭಾನುವಾರದ ಎರಡನೇ ಮತ್ತು ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್, ತಮಿಳು ತಲೈವಾಸ್‌ ವಿರುದ್ಧ ಆಡುತ್ತಿದೆ.

ಬೆಂಗಳೂರು-ಗುಜರಾತ್ ಪಂದ್ಯ ಸಂಜೆ 7:30ಕ್ಕೆ ಆರಂಭವಾದರೆ, ತೆಲುಗು ಟೈಟಾನ್ಸ್-ತಮಿಳು ತಲೈವಾಸ್ ಪಂದ್ಯ ರಾತ್ರಿ 8:30ಕ್ಕೆ ನಡೆಯಲಿದೆ.
ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ತೆಲುಗು ಟೈಟಾನ್ಸ್ ವಿರುದ್ಧ 31-25 ಅಂತರದ ಗೆಲುವು ಸಾಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌