ಆ್ಯಪ್ನಗರ

ಮೈದಾನದಲ್ಲೇ ಫುಟ್ಬಾಲ್ ಆಟಗಾರನ ದುರಂತ ಸಾವು

ಅತ್ಯಂತ ಆಘಾತಕಾರಿ ಸುದ್ದಿಯೊಂದರಲ್ಲಿ ಫುಟ್ಬಾಲ್ ಮೈದಾನದಲ್ಲೇ ಆಡುತ್ತಿರುವಾಗ ಆಟಗಾರನೋರ್ವ ದುರಂತ ಸಾವಿಗೀಡಾದ ಘಟನೆ ಇಂಡೋನೇಷ್ಯಾದಿಂದ ವರದಿಯಾಗಿದೆ.

Times Now 17 Oct 2017, 4:48 pm
ಹೊಸದಿಲ್ಲಿ: ಅತ್ಯಂತ ಆಘಾತಕಾರಿ ಸುದ್ದಿಯೊಂದರಲ್ಲಿ ಫುಟ್ಬಾಲ್ ಮೈದಾನದಲ್ಲೇ ಆಡುತ್ತಿರುವಾಗ ಆಟಗಾರನೋರ್ವ ದುರಂತ ಸಾವಿಗೀಡಾದ ಘಟನೆ ಇಂಡೋನೇಷ್ಯಾದಿಂದ ವರದಿಯಾಗಿದೆ.
Vijaya Karnataka Web watch footballer dies after mid game collision in indonesia
ಮೈದಾನದಲ್ಲೇ ಫುಟ್ಬಾಲ್ ಆಟಗಾರನ ದುರಂತ ಸಾವು


ಇಂಡೋನೇಷ್ಯಾ ಕ್ಲಬ್ ಗೋಲು ಕೀಪರ್ ಕೊಯಿರುಲ್ ಹುಡಾ (Choirul Huda) ಎಂಬವರೇ ಮೃತ ದುರ್ದೈವಿ. ಗೋಲು ತಡೆಯುವ ಯತ್ನದ ವೇಳೆ ಎದುರಾಳಿ ತಂಡದ ಆಕ್ರಮಣವನ್ನು ತಡೆಯುವ ಯತ್ನದಲ್ಲಿದ್ದ ತಮ್ಮದೇ ತಂಡದ ಆಟಗಾರ ರಮನ್ ರೊಡ್ರಿಗಸ್ ಜತೆ ಬಲವಾಗಿ ಢಿಕ್ಕಿ ಹೊಡೆದಿರುವುದೇ ಸಾವನ್ನಪ್ಪಲು ಕಾರಣವಾಗಿದೆ.

ಭಾನುವಾರ ಪೆರ್ಸೆಲಾ ಲಮಾಂಗನ್ ಮತ್ತು ಸೆಮೆನ್ ಪೆಡಾಂಗ್ ನಡುವಣ ಪಂದ್ಯದಲ್ಲಿ ಘಟನೆ ನಡೆದಿತ್ತು.

ತಲೆಗೆ ಢಿಕ್ಕಿ ಹೊಡೆದ ರಭಸಕ್ಕೆ 38ರ ಹರೆಯದ ಗೋಲು ಕೀಪರ್ ಕುಸಿದು ಬಿದ್ದಿದ್ದರು. ತಕ್ಷಣವೇ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಯಾಗುವಾಗ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌