ಆ್ಯಪ್ನಗರ

ರಿಯೊ ನನ್ನ ಕೊನೆಯ ಒಲಿಂಪಿಕ್ಸ್: ಬೋಲ್ಟ್

ಲೈಟ್ನಿಂಗ್ ಬೋಲ್ಟ್ ಖ್ಯಾತಿಯ ವಿಶ್ವದ ಅತ್ಯಂತ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್, ರಿಯೊ ತಮ್ಮ ವೃತ್ತಿ ಜೀವನದ ಕೊನೆಯ ಒಲಿಂಪಿಕ್ಸ್ ಎಂದು ಹೇಳಿದ್ದಾರೆ. ‘ಸ್ಪ್ರಿಂಟ್ ಕಿಂಗ್’ ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಏಜೆನ್ಸೀಸ್ 23 Mar 2016, 4:00 am
2017ರ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್ ಬಳಿಕ ನಿವೃತ್ತಿ
Vijaya Karnataka Web will usain bolt really make rio de janeiro his last olympics
ರಿಯೊ ನನ್ನ ಕೊನೆಯ ಒಲಿಂಪಿಕ್ಸ್: ಬೋಲ್ಟ್

ಕಿಂಗ್ಸ್‌ಟನ್: ಲೈಟ್ನಿಂಗ್ ಬೋಲ್ಟ್ ಖ್ಯಾತಿಯ ವಿಶ್ವದ ಅತ್ಯಂತ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್, ರಿಯೊ ತಮ್ಮ ವೃತ್ತಿ ಜೀವನದ ಕೊನೆಯ ಒಲಿಂಪಿಕ್ಸ್ ಎಂದು ಹೇಳಿದ್ದಾರೆ. ‘ಸ್ಪ್ರಿಂಟ್ ಕಿಂಗ್’ ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಜಮೈಕಾದ ಸ್ಪ್ರಿಂಟ್ ತಾರೆಗೆ ತರಬೇತುದಾರ ಗ್ಲೆನ್ ಮಿಲ್ಸ್ ಅವರು 2020ರ ಟೋಕಿಯೊ ಒಲಿಂಪಿಕ್ಸ್ ವರೆಗೂ ಫಿಟ್ನೆಸ್ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ ಎಂದು ಸಲಹೆ ನೀಡಿದ್ದರು. ಈ ವಿಚಾರ ಕಳೆದ ಜನವರಿಯಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಉನೇಸ್ ಬೋಲ್ಟ್ ನಿವೃತ್ತಿ ವದಂತಿಗಳು ವ್ಯಾಪಕವಾಗಿದ್ದವು.

ಈ ಎಲ್ಲಾ ಊಹಾಪೋಹಗಳಿಗೆ ಇದೀಗ ತೆರೆಬಿದ್ದಿದ್ದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ರಿಯೊ ತಮ್ಮ ಕಟ್ಟ ಕಡೆಯ ಒಲಿಂಪಿಕ್ಸ್ ಎಂದು ಬೋಲ್ಟ್ ಹೇಳಿಕೊಂಡಿದ್ದಾರೆ. ಅಲ್ಲದೆ ರಿಯೊ ಅಂಗಳದಲ್ಲಿ 3 ಚಿನ್ನ ಗೆಲ್ಲುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

‘‘ಇದು ಖಂಡಿತ ನನ್ನ ಕೊನೆಯ ಒಲಿಂಪಿಕ್ಸ್. ಇನ್ನೂ ನಾಲ್ಕು ವರ್ಷಗಳ ವರೆಗೂ ಇಷ್ಟೇ ಫಿಟ್ನೆಸ್ ಕಾಯ್ದುಕೊಳ್ಳುವುದು ಕಷ್ಟ. ಆದರೂ, ಆತ್ಮವಿಶ್ವಾಸ ಕಾಯ್ದುಕೊಳ್ಳಲು ರಿಯೊ ಒಲಿಂಪಿಕ್ಸ್‌ನಲ್ಲಿ ಅಂದುಕೊಂಡಿರುವುದನ್ನು ಸಾಧಿಸಬೇಕಾಗಿದೆ,’’ ಎಂದು ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್ ಬಳಿಕ ವಿದಾಯ

2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಒಟ್ಟಾರೆ 6 ಚಿನ್ನದ ಪದಕ ಗೆದ್ದಿರುವ ಉಸೇನ್ ಬೋಲ್ಟ್, 2017ರಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್ ನಂತರ ತಮ್ಮ ಅಮೋಘ ವೃತ್ತಿ ಜೀವನವನ್ನು ಅಂತ್ಯಗೊಳಿಸುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ರಿಯೊ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆದ್ದು ಒಟ್ಟಾರೆ 9 ಸ್ವರ್ಣ ಪದಕಗಳೊಂದಿಗೆ ವಿದಾಯ ಹೇಳುವ ಮಹದಾಸೆ ಹೊಂದಿರುವುದಾಗಿ ತಿಳಿಸಿದ್ದಾರೆ.

‘‘ರಿಯೊ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನ ಗೆಲ್ಲುವುದು ನನ್ನ ಅತಿ ದೊಡ ಕನಸಾಗಿದೆ. ಇದರತ್ತ ಸಂಪೂರ್ಣ ಗಮನ ಹರಿಸಿದ್ದೇನೆ,’’ ಎಂದಿದ್ದಾರೆ. ಇದೇ ವೇಳೆ ರಿಯೊ ಅಂಗಳದಲ್ಲಿ ಮತ್ತಷ್ಟು ದಾಖಲೆಗಳನ್ನು ಪುಡಿಗಟ್ಟುವ ವಿಶ್ವಾಸ ವ್ಯಕ್ತಪಡಿಸಿರುವ ಬೋಲ್ಟ್, 19 ಸೆಕೆಂಡ್ಸ್‌ಗಳ ಒಳಗಾಗಿ 200 ಮೀ. ಓಟ ಪೂರೈಸಿದ ವಿಶ್ವದ ಮೊದಲ ಅಥ್ಲೀಟ್ ಎಂಬ ಶ್ರೇಯ ಸಂಪಾದಿಸುವ ಕಡೆಗೂ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಬರ್ಲಿನ್‌ನಲ್ಲಿ 2009ರಲ್ಲಿ ನಡೆದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 19.19 ಸೆ.ಗಳಲ್ಲಿ 200 ಮೀಟರ್ ಓಟ ಪೂರೈಸಿದ ಬೋಲ್ಟ್ ನೂತನ ವಿಶ್ವ ದಾಖಲೆ ಬರೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌