ಆ್ಯಪ್ನಗರ

ವೋಜ್ನಿಯಾಕಿಗೆ ಆಸ್ಪ್ರೇಲಿಯನ್‌ ಗರಿ

ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಪ್ಯಾಮ್‌ | ಹ್ಯಾಲೆಪ್‌ಗೆ ರನ್ನರ್‌ಅಪ್‌ ಸ್ಥಾನ ಏಜೆನ್ಸೀಸ್‌ ಮೆಲ್ಬೋರ್ನ್‌ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸಿಮೊನಾ ಹ್ಯಾಲೆಪ್‌ ಅವರ ...

Agencies 28 Jan 2018, 4:00 am

ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಪ್ಯಾಮ್‌ | ಹ್ಯಾಲೆಪ್‌ಗೆ ರನ್ನರ್‌ಅಪ್‌ ಸ್ಥಾನ

ಮೆಲ್ಬೋರ್ನ್‌ : ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸಿಮೊನಾ ಹ್ಯಾಲೆಪ್‌ ಅವರ ಪ್ರಬಲ ಸವಾಲನ್ನು ಮೆಟ್ಟಿನಿಂತ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ ಚೊಚ್ಚಲ ಬಾರಿ ಆಸ್ಪ್ರೇಲಿಯಾ ಓಪನ್‌ ಗ್ರ್ಯಾನ್‌ ಸ್ಪ್ಯಾಮ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ರಾಡ್‌ ಲೇವರ್‌ ಅರೇನಾ ಅಂಗಳದಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ ಕದನದಲ್ಲಿ ಘರ್ಜಿಸಿದ ವೋಜ್ನಿಯಾಕಿ 7-6(7-2),3-6, 6-4 ಸೆಟ್‌ಗಳಿಂದ ಸಿಮೊನಾ ಹ್ಯಾಲೆಪ್‌ಗೆ ಸೋಲುಣಿಸಿ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದರು. 2 ಗಂಟೆ 49 ನಿಮಿಷ ನಡೆದ ಮ್ಯಾರಥಾನ್‌ ಹೋರಾಟದಲ್ಲಿ ಉಭಯ ಆಟಗಾರ್ತಿಯರು ಸಮಬಲದ ಹೋರಾಟ ಪ್ರದರ್ಶಿಸಿದರೂ ಅಂತಿಮ ಸೆಟ್‌ನ ಒತ್ತಡ ನಿರ್ವಹಿಸಿದ ವೋಜ್ನಿಯಾಕಿ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ವೋಜ್ನಿಯಾಕಿ ರಾರ‍ಯಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದರು.

2011ರ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದ 27 ವರ್ಷದ ವೋಜ್ನಿಯಾಕಿ, ಕಳೆದ ಬಾರಿ 3ನೇ ಸುತ್ತಿನಲ್ಲಿ ನಿರ್ಗಮಿಸಿದ್ದರು. ಆದರೆ ಈ ಬಾರಿ ಟೂರ್ನಿಯುದ್ದಕ್ಕೂ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಮೊದಲ ಸೆಟ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ ಎದುರಾದ ಕಾರಣ ಟೈಬ್ರೇಕರ್‌ನಲ್ಲಿ ಸೆಟ್‌ ವಶಪಡಿಸಿಕೊಂಡ ಡೆನ್ಮಾರ್ಕ್‌ ಆಟಗಾರ್ತಿ, ದ್ವಿತೀಯ ಸೆಟ್‌ನಲ್ಲಿ ಹ್ಯಾಲೆಪ್‌ ತಿರುಗೇಟಿಗೆ ಮಂಕಾದರು. ಆದರೆ ತೃತೀಯ ಸೆಟ್‌ನಲ್ಲಿ ಮತ್ತೆ ಲಯಕ್ಕೆ ಮರಳಿ ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳಿಂದ ಕಂಗೊಳಿಸಿದರು.

20ನೇ ಗ್ರ್ಯಾನ್‌ ಸ್ಪ್ಯಾಮ್‌ ಮೇಲೆ ಫೆಡರರ್‌ ಕಣ್ಣು

ಪ್ರಮುಖ ಆಟಗಾರರು ಆಸ್ಪ್ರೇಲಿಯನ್‌ ಓಪನ್‌ನಿಂದ ಹೊರಬಿದ್ದರೂ ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌ ಮಾತ್ರ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಹೊಸ್ತಿಲಲ್ಲಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಆರನೇ ಶ್ರೇಯಾಂಕಿತ ಹಾಗೂ 2014ರ ಅಮೆರಿಕ ಓಪನ್‌ ಚಾಂಪಿಯನ್‌ ಕ್ರೊಯೇಷ್ಯಾದ ಮರಿನ್‌ ಚಿಲಿಚ್‌ ವಿರುದ್ಧ ಕಣಕ್ಕಿಳಿಯುತ್ತಿರುವ 2ನೇ ರಾರ‍ಯಂಕಿನ ಸ್ವಿಸ್‌ ಮಾಸ್ಟರ್‌, ವೃತ್ತಿ ಬದುಕಿನಲ್ಲಿ 20ನೇ ಗ್ರ್ಯಾನ್‌ ಗೆದ್ದು ಅದ್ವಿತೀಯ ಸಾಧನೆಗೆ ಹಾತೊರೆಯುತ್ತಿದ್ದಾರೆ. ಪ್ರಶಸ್ತಿ ಗೆದ್ದಲ್ಲಿ ಫೆಡರರ್‌ ಮರಳಿ ವಿಶ್ವದ ನಂ.1 ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ.

ಪ್ರಶಸ್ತಿ ಮೊತ್ತ

20.62 ಕೋಟಿ. ರೂ.

ಸಿಂಗಲ್ಸ್‌ ಚಾಂಪಿಯನ್ಸ್‌

10.31 ಕೋಟಿ. ರೂ.

ಸಿಂಗಲ್ಸ್‌ ರನ್ನರ್‌ ಅಪ್‌

ಸೆಟ್‌ ವಿವರ

7-6(7-2), 3-6, 6-4

ಸಮಯ

2 ಗಂಟೆ 49 ನಿಮಿಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌