Please enable javascript.ಮೂರನೇ ಸುತ್ತಿಗೆ ಸಾಯಿ ಪ್ರಣೀತ್ - third round , Sai Praneeth - Vijay Karnataka

ಮೂರನೇ ಸುತ್ತಿಗೆ ಸಾಯಿ ಪ್ರಣೀತ್

ಏಜೆನ್ಸೀಸ್ 30 Oct 2015, 4:03 am
Subscribe

ಭಾರತದ ಬಿ.ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿರುವ ಬಿಟ್‌ಬರ್ಗರ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ.

third round sai praneeth
ಮೂರನೇ ಸುತ್ತಿಗೆ ಸಾಯಿ ಪ್ರಣೀತ್
ಸಾರ್ಬ್ರೂಕೆನ್( ಜರ್ಮನಿ): ಭಾರತದ ಬಿ.ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿರುವ ಬಿಟ್‌ಬರ್ಗರ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ.

ಬುಧವಾರ ತಡರಾತ್ರಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 16ನೇ ಶ್ರೇಯಾಂಕಿತ ಸಾಯಿ ಪ್ರಣೀತ್ 24-22, 21-17 ನೇರ ಸೆಟ್‌ಗಳಿಂದ ಇಂಡೋನೇಷ್ಯಾದ ಆ್ಯಂಡ್ರೆ ಕುರ್ನಿವಾನ್ ತೆಡ್ಜೊನೊ ವಿರುದ್ಧ ಪ್ರಯಾಸದ ಜಯ ಸಾಧಿಸಿದರು. ಈ ಜಯದೊಂದಿಗೆ ಪ್ರಣೀತ್ ಆ್ಯಂಡ್ರೆ ವಿರುದ್ಧ ಮುಖಾಮುಖಿ ದಾಖಲೆಯನ್ನು 1-1ರಲ್ಲಿ ಸಮಗೊಳಿಸಿದರು.

ಹೈದರಬಾದ್‌ನ ಆಟಗಾರ ಪ್ರಣೀತ್, ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್‌ನ ಐದನೇ ಶ್ರೇಯಾಂಕಿತ ರಾಜೀವ್ ಔಸೆಫ್ ಅವರನ್ನು ಕ್ವಾರ್ಟರ್ ಫೈನಲ್ ಪ್ರವೇಶಕ್ಕಾಗಿ ಎದುರಿಸಲಿದ್ದಾರೆ. ಇದು ಭಾರತೀಯ ಆಟಗಾರನಿಗೆ ಇಂಗ್ಲೆಂಡ್ ಆಟಗಾರನ್ನೊಟ್ಟಿಗಿನ ಮೊದಲ ಪಂದ್ಯವಾಗಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ