Please enable javascript.ಅರ್ಧ ಬೆಲೆಯಲ್ಲಿ ಔಷಧ ಮಾರಾಟ - ಅರ್ಧ ಬೆಲೆಯಲ್ಲಿ ಔಷಧ ಮಾರಾಟ - Vijay Karnataka

ಅರ್ಧ ಬೆಲೆಯಲ್ಲಿ ಔಷಧ ಮಾರಾಟ

ವಿಕ ಸುದ್ದಿಲೋಕ 20 Jun 2012, 12:10 pm
Subscribe

20 ಜಿಲ್ಲೆಗಳಲ್ಲಿ ಇನ್ನು ಮುಂದೆ ಮಾರುಕಟ್ಟೆ ದರದ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಜನರಿಕ್ ಔಷಧ ಲಭ್ಯ.

ಅರ್ಧ ಬೆಲೆಯಲ್ಲಿ ಔಷಧ ಮಾರಾಟ
ಬೆಂಗಳೂರು: 20 ಜಿಲ್ಲೆಗಳಲ್ಲಿ ಇನ್ನು ಮುಂದೆ ಮಾರುಕಟ್ಟೆ ದರದ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಜನರಿಕ್ ಔಷಧ ಲಭ್ಯ.

ಸುದೀರ್ಘ ಕಾಲದಿಂದ ಸರಕಾರ ನೀಡುತ್ತಾ ಬಂದಿದ್ದ ಭರವಸೆ ಅನುಷ್ಠಾನಕ್ಕೆ ಜೂ.21ರಂದು ಮುಹೂರ್ತ ನಿಗದಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ‘ಜನತಾ ಬಜಾರ್ ಜನರಿಕ್ ಔಷಧ ಮಳಿಗೆ’ಯನ್ನು ಮುಖ್ಯಮಂತ್ರಿ ಸದಾನಂದಗೌಡರು ಉದ್ಘಾಟಿಸಲಿದ್ದಾರೆ. ವೈದ್ಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಗೃಹ ಸಚಿವ ಆರ್. ಅಶೋಕ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಜುಲೈ ಅಂತ್ಯದೊಳಗೆ 20 ಜಿಲ್ಲೆಗಳಲ್ಲಿ ಈ ಮಳಿಗೆ ಆರಂಭವಾಗಲಿದೆ. ಮಾರುಕಟ್ಟೆ ಬೆಲೆಗಿಂತ ಶೇ.50ಕ್ಕಿಂತ ಕಡಿಮೆದರದಲ್ಲಿ ಜನರಿಕ್ ಔಷಧ ಪೂರೈಸಲಾಗುವುದು. ಬ್ರಾಂಡೆಡ್ ಔಷಧಿಗಳನ್ನು ಮುಖಬೆಲೆಗಿಂತ ಶೇ.50ರಷ್ಟು ಕಡಿಮೆ ದರದಲ್ಲಿ ಮಾರಲು ಅನುಮತಿ ನೀಡಲಾಗಿದೆ. ಖಾಸಗಿ ಆಸ್ಪತ್ರೆ ವೈದ್ಯರು ಜನರಿಕ್ ಔಷಧ ಬರೆದುಕೊಟ್ಟರೆ ಅಂತಹ ರೋಗಿಗಳಿಗೂ ಔಷಧವನ್ನು ವಿತರಿಸಲಾಗುವುದು ಎಂದರು.

ವೈದ್ಯಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಕರ್ನಾಟಕ ಸಹಕಾರ ಗ್ರಾಹಕ ಮಹಾಮಂಡಲದ ಸಹಕಾರದಲ್ಲಿ ಜನತಾ ಬಜಾರ್ ಜನರಿಕ್ ಔಷಧ ಮಳಿಗೆ ಆರಂಭಿಸಲಾಗುವುದು. ಜನರಿಕ್ ಔಷಧಗಳ ಸಲಹಾ ಚೀಟಿಯನ್ನೇ ರೋಗಿಗಳಿಗೆ ನೀಡುವಂತೆ ಆದೇಶಿಸಲಾಗಿದೆ ಎಂದು ವಿವರಿಸಿದರು.

ಕ್ಯಾನ್ಸರ್, ಕಿಡ್ನಿ, ಮಧುಮೇಹ, ಹೃದ್ರೋಗ ಸಂಬಂದಿ ಕಾಯಿಲೆಗಳವರಿಗೆ ಉತ್ತಮ ಗುಣಮಟ್ಟದ, ಕಡಿಮೆ ಬೆಲೆಯ ಔಷಧ ದೊರೆಯುವಂತೆ ಮಾಡುವುದು ಸರಕಾರದ ಸಂಕಲ್ಪ ಎಂದು ಹೇಳಿದ ರಾಮದಾಸ್, ಔಷಧ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಲು ಔಷಧ ನಿಯಂತ್ರಣ ಇಲಾಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ವೈದ್ಯಕಾಲೇಜು ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಹೋಲಿಸ್ಟಿಕ್ ಇಂಟಿಗ್ರೇಟೆಡ್ ಮೆಡಿಕಲ್ ಟ್ರೀಟ್‌ಮೆಂಟ್ ಅಳವಡಿಸಲಾಗುವುದು ಎಂದು ರಾಮದಾಸ್ ಹೇಳಿದರು. ಎಲ್ಲಾ ವೈದ್ಯಕಾಲೇಜುಗಳಲ್ಲಿ ಹೋಲಿಸ್ಟಿಕ್ ಟ್ರೀಟ್‌ಮೆಂಟ್ ಅಳವಡಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಎಸ್.ವ್ಯಾಸದ ಪ್ರಿನ್ಸಿಪಾಲ್ ಡಾ.ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಬಳಿಕ ಎಲ್ಲಾ ಕಾಲೇಜುಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ