Please enable javascript.ಉಡಾಫೆ ಆಡಳಿತ ನಿಲ್ಲಿಸಲು ಸಿಎಂಗೆ ಸಲಹೆ ಕೊಡಿ - Please advise, administration, stop,unprovable, CM - Vijay Karnataka

ಉಡಾಫೆ ಆಡಳಿತ ನಿಲ್ಲಿಸಲು ಸಿಎಂಗೆ ಸಲಹೆ ಕೊಡಿ

ವಿಕ ಸುದ್ದಿಲೋಕ 13 Apr 2016, 4:21 am
Subscribe

ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ನೀಡುವುದಕ್ಕಿಂತ ನಿರುತ್ಸಾಹ ಮತ್ತು ಉಡಾಫೆಯನ್ನು ಬಿಟ್ಟು ಬಾಕಿ ಉಳಿದಿರುವ ಎರಡು ವರ್ಷ ಹೇಗೆ ಆಡಳಿತ ನಡೆಸಬೇಕೆಂದು ವಿ.ಎಸ್‌.ಉಗ್ರಪ್ಪ ಅವರು ಸಿಎಂಗೆ ಸಲಹೆ ನೀಡಲಿ ಎಂದು ಬಿಜೆಪಿ ಶಾಸಕ ಸುರೇಶಕುಮಾರ್‌ ವ್ಯಂಗ್ಯವಾಡಿದ್ದಾರೆ.

please advise administration stopunprovable cm
ಉಡಾಫೆ ಆಡಳಿತ ನಿಲ್ಲಿಸಲು ಸಿಎಂಗೆ ಸಲಹೆ ಕೊಡಿ
ಉಗ್ರಪ್ಪಗೆ ಬಿಜೆಪಿಯ ಸುರೇಶಕುಮಾರ್‌ ಸಲಹೆ

ಬೆಂಗಳೂರು: ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ನೀಡುವುದಕ್ಕಿಂತ ನಿರುತ್ಸಾಹ ಮತ್ತು ಉಡಾಫೆಯನ್ನು ಬಿಟ್ಟು ಬಾಕಿ ಉಳಿದಿರುವ ಎರಡು ವರ್ಷ ಹೇಗೆ ಆಡಳಿತ ನಡೆಸಬೇಕೆಂದು ವಿ.ಎಸ್‌.ಉಗ್ರಪ್ಪ ಅವರು ಸಿಎಂಗೆ ಸಲಹೆ ನೀಡಲಿ ಎಂದು ಬಿಜೆಪಿ ಶಾಸಕ ಸುರೇಶಕುಮಾರ್‌ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಪಕ್ಷದ ಶಾಸಕಾಂಗ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ,‘‘ಹೇಗೂ ಉಗ್ರಪ್ಪ ಅವರು ಎಲ್ಲ ವಿಷಯಗಳಲ್ಲೂ ಸಿಎಂಗೆ ಸಲಹೆ ನೀಡುತ್ತಿರುತ್ತಾರೆ. ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡುವಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರನ್ನು ಅವರವರ ಜಿಲ್ಲೆಗೆ ಕಳಿಸುವಂತೆಯೂ ಸಲಹೆ ನೀಡಲಿ,’’ ಎಂದರು.

‘‘ಯಡಿಯೂರಪ್ಪ ನಮ್ಮ ಪಕ್ಷಕ್ಕೆ ರಾಜ್ಯ ಅಧ್ಯಕ್ಷರಾದ ನಂತರ ಕಾರ‍್ಯಕರ್ತರು ಮತ್ತು ಪಕ್ಷದ ಹಿತೈಷಿಗಳಲ್ಲಿ ಯಾವ ಪ್ರಮಾಣದಲ್ಲಿ ಸಂಚಲನ ಉಂಟಾಗಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ ನಾಯಕರಲ್ಲಿ ಭಯ, ನಡುಕ ಶುರುವಾಗಿದೆ. ಅವರ ಎದೆಯಲ್ಲಿಯೇ ಅವಲಕ್ಕಿ ಕುಟ್ಟಿದಂತಾಗುತ್ತಿದೆ,’’ಎಂದರು.

ಹೋರಾಟದ ಪರ್ವ:

‘‘ಬಾಕಿ ಉಳಿದಿರುವ ಎರಡು ವರ್ಷಗಳ ಕಾಲ ಹೋರಾಟದ ಪರ್ವ ಎಂದು ಪಕ್ಷ ನಿರ್ಧಾರ ಮಾಡಿದೆ. ಅದೇ ಕಾರಣಕ್ಕೆ ಬಿಎಸ್‌ವೈ ಆಯ್ಕೆ ಮಾಡಲಾಗಿದೆ,’’ ಎಂದೂ ಅವರು ಹೇಳಿದರು.

‘‘ಬಿಎಸ್‌ವೈ ವಿರುದ್ಧದ ಪ್ರಕರಣಗಳ ಪರಿಸ್ಥಿತಿ ಏನು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಲೋಕಾಯುಕ್ತದಲ್ಲಿದ್ದ ಕೇಸ್‌ಗಳು ವಜಾ ಆಗಿದೆ. ಇನ್ನೂ 23 ಪ್ರಕರಣಗಳಲ್ಲೂ ಮುಕ್ತರಾಗುವ ವಿಶ್ವಾಸ ಇದೆ,’’ ಎಂದರು.

ಮೇಲ್ಮನೆ ಸದಸ್ಯ ಅಶ್ವತ್ಥನಾರಾಯಣ್‌ ಮಾತನಾಡಿ, ‘‘ಬರ ಪರಿಸ್ಥಿತಿಯ ಬಗ್ಗೆ ವಾಸ್ತವಿಕ ಚಿತ್ರಣ ಅರಿಯಲು ಪಕ್ಷ ರಚಿಸಿರುವ 12 ತಂಡಗಳಲ್ಲಿ ಎಂಟು ತಂಡಗಳು ಈಗಾಗಲೇ ಬರ ಪೀಡಿತ ಜಿಲ್ಲೆಗಳ ಪ್ರವಾಸ ನಡೆಸುತ್ತಿವೆ. ಏ.14ರ ನಂತರ ಉಳಿದ 4 ತಂಡಗಳೂ ಪ್ರವಾಸ ಆರಂಭಿಸಲಿವೆ,’’ಎಂದರು.

----

ನಮ್ಮ ಪಕ್ಷಕ್ಕೆ ಬಿಎಸ್‌ವೈ ಅಧ್ಯಕ್ಷರಾದ ನಂತರ ಭಯಗೊಂಡಿರುವ ಕಾಂಗ್ರೆಸ್‌ ಪಕ್ಷವೇ ಜಾತಿ ಗಣತಿಯ ಮಾಹಿತಿಯನ್ನು ಸೋರಿಕೆ ಮಾಡಿದೆ ಎಂಬ ಅನುಮಾನಗಳಿವೆ. ವರದಿ ಬಿಡುಗಡೆಯಾಗುವ ಮುನ್ನವೇ ಮಾಧ್ಯಮಗಳಿಗೆ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ಸರಕಾರ ಸ್ಪಷ್ಟನೆ ನೀಡಲಿ.

-ಅಶ್ವತ್ಥನಾರಾಯಣ್‌, ಮೇಲ್ಮನೆ ಬಿಜೆಪಿ ಸದಸ್ಯ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ