ಆ್ಯಪ್ನಗರ

ಏರ್‌ಟೆಲ್ ನಿಂದ ಎರಡು ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಪೇಡ್ ಪ್ಲ್ಯಾನ್ಸ್ ಲಾಂಚ್!

ಏರ್‌ಟೆಲ್ ತನ್ನ ಹೊಸ 399 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 2.5GB ದೈನಂದಿನ ಡೇಟಾ ಜೊತೆಗೆ 100 SMS/ದಿನ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಬಳಕೆದಾರರು ಮೂರು ತಿಂಗಳ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇಷ್ಟೇ ಅಲ್ಲದೇ,

Vijaya Karnataka Web 5 May 2022, 10:27 am
ಭಾರತದ ಜನಪ್ರಿಯ ಟೆಲಿಕಾಂ ಕಂಪೆನಿ ಏರ್‌ಟೆಲ್ ಇದೀಗ ತನ್ನ ಬಳಕೆದಾರರಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಎರಡು ಹೊಸ ಪ್ರೀಪೇಡ್ ಯೋಜನೆಗಳು ಮೂರು ತಿಂಗಳ ವ್ಯಾಲಿಡಿಟಿಯಲ್ಲಿ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಹೊಂದಿದ್ದು, 399 ರೂ. ಮತ್ತು 839 ರೂ. ಬೆಲೆಗಳಲ್ಲಿ ವಿಭಿನ್ನ ಪ್ರಯೋಜನಗಳೊಂದಿಗೆ ಬಿಡುಗಡೆಗೊಂಡಿವೆ. ಹಾಗಾದರೆ, ಏರ್‌ಟೆಲ್ ಪ್ರಕಟಿಸಿರುವ ಹೊಸ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಹೊಂದಿರುವ ಎರಡು ಪ್ರಿಪೇಯ್ಡ್ ಯೋಜನೆಗಳು ಏನೆಲ್ಲಾ ಪ್ರಯೋಜನಗಳನ್ನು ಹೊಂದಿವೆ ಎಂಬುದನ್ನು ತಿಳಿಯೋಣ ಬನ್ನಿ.
Vijaya Karnataka Web ಏರ್‌ಟೆಲ್ ನಿಂದ ಎರಡು ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಪೇಡ್ ಪ್ಲ್ಯಾನ್ಸ್ ಲಾಂಚ್!


ಏರ್‌ಟೆಲ್ ನಿಂದ ಹೊಸ 399 ರೂ. ಪ್ರಿಪೇಯ್ಡ್ ಯೋಜನೆ
ಏರ್‌ಟೆಲ್ ತನ್ನ ಹೊಸ 399 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 2.5GB ದೈನಂದಿನ ಡೇಟಾ ಜೊತೆಗೆ 100 SMS/ದಿನ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಬಳಕೆದಾರರು ಮೂರು ತಿಂಗಳ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇಷ್ಟೇ ಅಲ್ಲದೇ, ಒಂದು ತಿಂಗಳ ಉಚಿತ Amazon Prime Video Mobile Edition, Apollo 24|7 Circle ಮತ್ತು ಏರ್‌ಟೆಲ್ ಥ್ಯಾಂಕ್ಸ್ ನಂತಹ ಪ್ರಯೋಜನಗಳನ್ನು ಈ ಪ್ರಿಪೇಡ್ ಯೋಜನೆಯು ಒಳಗೊಂಡಿದೆ. ಆದರೆ, ಈ ಯೋಜನೆಯು ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎಂಬುದನ್ನು ಗ್ರಾಹಕರು ಗಮನಿಸಬೇಕು.

ಏರ್‌ಟೆಲ್ ನಿಂದ ಹೊಸ 839 ರೂ. ಪ್ರಿಪೇಯ್ಡ್ ಯೋಜನೆ

ಏರ್‌ಟೆಲ್ ತನ್ನ ಹೊಸ 839 ರೂ.ಪ್ರಿಪೇಯ್ಡ್ ಯೋಜನೆಯನ್ನು 84 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಪರಿಚಯಿಸಿದೆ. ಈ ಯೋಜನೆಯಲ್ಲಿಯೂ ಸಹ ಬಳಕೆದಾರರು ಮೂರು ತಿಂಗಳವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯಲಿದ್ದಾರೆ. ಈ ಯೋಜನೆಯೊಂದಿಗೆ ಪ್ರತಿದಿನ 2GB ದೈನಂದಿಕ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 SMS ಗಳನ್ನು ನೀಡಲಾಗುತ್ತಿದೆ. ಒಂದು ತಿಂಗಳ ಉಚಿತ Amazon Prime Video Mobile Edition, Apollo 24|7 Circle ಮತ್ತು ಏರ್‌ಟೆಲ್ ಥ್ಯಾಂಕ್ಸ್ ನಂತಹ ಪ್ರಯೋಜನಗಳ ಜೊತೆ ಇದುಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್ ಅನ್ನು ಸಹ ಒಳಗೊಂಡಿದೆ.
ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್‌ಗೆ ಗೇಟ್‌ಪಾಸ್!..ಹೊಸ ಸಿಇಒ ನೇಮಕ?
ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಏರ್‌ಟೆಲ್‌ನಿಂದ ಹೊಸದಾಗಿ ಬಿಡುಗಡೆಯಾದ ಈ ಎರಡು ಯೋಜನೆಗಳು ಗ್ರಾಹಕರಿಗೆ ತೃಪ್ತಿ ತರುವಂತಿವೆ. ಗ್ರಾಹಕರು ನೇರವಾಗಿ ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಕೇವಲ 499 ರೂಪಾಯಿಗಳನ್ನು ಪಾವತಿಸಿ ಪಡೆಯಬಹುದು. ಆದರೆ, ಈ ಎರಡು ಯೋಜನೆಗಳು ದೈನಂದಿಕ ಡೇಟಾ ಹಾಗೂ ಕರೆಗಳ ಜೊತೆಗೆ ಇನ್ನಿತರ ಲಾಭಗಳನ್ನು ಹೊಂದಿರುವುದು ಗ್ರಾಹಕರಿಗೆ ಮುಖ್ಯ ಪ್ರಯೋಜನಗಳಾಗಿವೆ. ಇನ್ನು ಇದೇ ಬುಧವಾರವಷ್ಟೇ ರಿಲಯನ್ಸ್ ಜಿಯೋ ಮೂರು ತಿಂಗಳ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದ್ದನ್ನು ನಾವಿಲ್ಲಿ ಗಮನಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌