ಆ್ಯಪ್ನಗರ

ಎಚ್ಚರ: ವಾಟ್ಸಾಪ್ ವೀಡಿಯೋ ಕರೆಗೆ ಫೇಕ್ ಲಿಂಕ್

ವಾಟ್ಸಾಪ್ ವೀಡಿಯೋ ಕರೆಯು ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಂಡಾಗಲಷ್ಟೇ ಲಭ್ಯವಾಗುತ್ತದೆಯೇ ಹೊರತು, ಇದಕ್ಕೆ ಯಾವುದೇ ನೋಂದಾವಣಿ, ವೆರಿಫಿಕೇಶನ್, ಲಿಂಕ್ ಕ್ಲಿಕ್ ಮಾಡುವ ಅಗತ್ಯವಿಲ್ಲ.

Gadgets Now 18 Nov 2016, 7:21 pm
ಹೊಸದಿಲ್ಲಿ: ಈ ವಾರಾರಂಭದಲ್ಲಿ ಬಹುನಿರೀಕ್ಷಿತ ವೀಡಿಯೋ ಕರೆ ವೈಶಿಷ್ಟ್ಯವನ್ನು ವಾಟ್ಸಾಪ್ ಪರಿಚಯಿಸಿತ್ತು. ಆದರೆ, ಸ್ಪ್ಯಾಮರ್‌ಗಳು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಕುಟಿಲ ಕಾರ್ಯಕ್ಕೆ ತೊಡಗಿದ್ದು, ಇದಕ್ಕಾಗಿಯೇ ಸ್ಪ್ಯಾಮ್ ವೆಬ್ ಸೈಟ್ ರೂಪಿಸಿ, ಜನರ ದಾರಿ ತಪ್ಪಿಸುತ್ತಿದ್ದಾರೆ.
Vijaya Karnataka Web beware of this whatsapp video calling invite
ಎಚ್ಚರ: ವಾಟ್ಸಾಪ್ ವೀಡಿಯೋ ಕರೆಗೆ ಫೇಕ್ ಲಿಂಕ್


ನವೆಂಬರ್ 15ರಂದು ವೀಡಿಯೋ ಕರೆ ಸೌಲಭ್ಯ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ, ವಾಟ್ಸಾಪ್‌ನಲ್ಲಿ ಬಳಕೆದಾರರು ವೀಡಿಯೋ ಕರೆ ಸೌಲಭ್ಯಕ್ಕೆ ಕ್ಲಿಕ್ ಮಾಡಿ ಎನ್ನುವ ನಕಲಿ ಸಂದೇಶಗಳು ಬರಲಾರಂಭಿಸಿದವು. ಎಲ್ಲರೂ ಶೇರ್ ಮಾಡಲಾರಂಭಿಸಿದರು. ಆ ಲಿಂಕ್ ಕ್ಲಿಕ್ ಮಾಡಿದರೆ, ಅದು ಹೊಸ ವೈಶಿಷ್ಟ್ಯವನ್ನು ಎನೇಬಲ್ ಮಾಡುವ ವೆಬ್ ಪುಟಕ್ಕೆ ಹೋಗುತ್ತಿತ್ತು ಎಂಬಂತೆ ಸಂದೇಶದಲ್ಲಿ ಬರೆಯಲಾಗಿತ್ತು.

ಇನ್ವಿಟೇಶನ್ ಇರುವವರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ ಎಂಬ ಎಚ್ಚರಿಕೆಯೂ ಜತೆಗಿತ್ತು. ಕ್ಲಿಕ್ ಮಾಡಿದರೆ, ವಾಟ್ಸಾಪ್‌ಗೆ ಸಂಬಂಧಪಟ್ಟಂತೆಯೇ ಗೋಚರಿಸುವ ವೆಬ್ ತಾಣ ತೆರೆದುಕೊಳ್ಳುತ್ತಿತ್ತು. ಯಾರನ್ನೂ ಸುಲಭವಾಗಿ ಮೋಸಗೊಳಿಸಬಲ್ಲ ತಾಣವಾಗಿತ್ತು ಇದು. ಕ್ಲಿಕ್ ಮಾಡಿದರೆ, ಮತ್ತೊಂದು ಪುಟ, ವೆರಿಫಿಕೇಶನ್ ಅಂತೆಲ್ಲ ಹೇಳಿಕೊಂಡು, ನಾಲ್ಕು ಮಂದಿಗೆ ಶೇರ್ ಮಾಡಿಕೊಳ್ಳುವಂತೆಯೂ ಸೂಚನೆ ನೀಡಲಾಗುತ್ತಿತ್ತು. ಲಿಂಕ್ ಕ್ಲಿಕ್ ಮಾಡುತ್ತಾ ಹೋದಂತೆ ಮತ್ತಷ್ಟು ಪುಟಗಳು ತೆರೆದುಕೊಂಡು, ಹ್ಯಾಕಿಂಗ್‌ಗೆ ಸಿದ್ಧವಾಗಿ ಕುಳಿತಿರುವ ಆನ್‌ಲೈನ್ ಕಿಡಿಗೇಡಿಗಳ ಬಲೆಗೆ ನೀವು ಬಿದ್ದಂತೆ. ತಂತ್ರಜ್ಞಾನ ಆಧಾರಿತವಾಗಿ ಮಾಹಿತಿ ಕದಿಯುವವರ ಈ ಸಂಚಿಗೆ ಬಲಿಯಾಗಬೇಡಿ ಮತ್ತು ಯಾರು ಕೂಡ ಸ್ಪ್ಯಾಮ್ ಸಂದೇಶವನ್ನು ಹಂಚಿಕೊಳ್ಳಬೇಡಿ.

ವಾಟ್ಸಾಪ್ ವೀಡಿಯೋ ಕರೆಯು ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಂಡಾಗಲಷ್ಟೇ ಲಭ್ಯವಾಗುತ್ತದೆಯೇ ಹೊರತು, ಇದಕ್ಕೆ ಯಾವುದೇ ನೋಂದಾವಣಿ, ವೆರಿಫಿಕೇಶನ್, ಲಿಂಕ್ ಕ್ಲಿಕ್ ಮಾಡುವ ಅಗತ್ಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌