ಆ್ಯಪ್ನಗರ

ಇ-ನ್ಯೂಸ್: ಇವುಗಳಿಗೆ WhatsApp ಬೆಂಬಲ ಇಲ್ಲ

ಹಳೆಯ ಎಂದರೆ ಐದಾರು ವರ್ಷಗಳ ಹಿಂದಿನ ಸ್ಮಾರ್ಟ್‌ಫೋನ್ ಈಗಲೂ ಬಳಸುತ್ತಿದ್ದೀರಾ? ಗಮನಿಸಿ, ಅವುಗಳಲ್ಲಿ ವಾಟ್ಸಾಪ್ ಡಿಸೆಂಬರ್ 31ರ ಬಳಿಕ ಕೆಲಸ ಮಾಡುವುದಿಲ್ಲ.

Vijaya Karnataka Web 7 Nov 2016, 4:02 am
ಹಳೆಯ ಎಂದರೆ ಐದಾರು ವರ್ಷಗಳ ಹಿಂದಿನ ಸ್ಮಾರ್ಟ್‌ಫೋನ್ ಈಗಲೂ ಬಳಸುತ್ತಿದ್ದೀರಾ? ಗಮನಿಸಿ, ಅವುಗಳಲ್ಲಿ ವಾಟ್ಸಾಪ್ ಡಿಸೆಂಬರ್ 31ರ ಬಳಿಕ ಕೆಲಸ ಮಾಡುವುದಿಲ್ಲ. ವಾಟ್ಸಾಪ್ ಈ ಹಿಂದೆಯೇ ಈ ವಿಷಯ ಹೇಳಿತ್ತಾದರೂ, ಇದರ ಡೆಡ್‌ಲೈನ್ ಸಮೀಪಿಸುತ್ತಿರುವುದರಿಂದ ಈ ಫೋನುಗಳ ಬಳಕೆದಾರರಿಗೆ ಒಂದು ಎಚ್ಚರಿಕೆಯ ಸೂಚನೆಯಿದು. ಸಿಂಬಿಯಾನ್ (ನೋಕಿಯಾ ಫೋನುಗಳಲ್ಲಿದ್ದ), ಆಂಡ್ರಾಯ್ಡ್ 2.1 ಮತ್ತು ಆಂಡ್ರಾಯ್ಡ್ 2.2, ಬ್ಲ್ಯಾಕ್‌ಬೆರಿ, ವಿಂಡೋಸ್ ಫೋನ್ 7.1 ಆವೃತ್ತಿ, ಆ್ಯಪಲ್ ಐಫೋನ್ 3ಜಿಎಸ್ ಹಾಗೂ ಐಒಎಸ್ 6 ಬಳಸುವ ಆ್ಯಪಲ್ ಫೋನುಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬಲ್ಲ ಸಾಮರ್ಥ್ಯ ಈ ಹಳೆಯ ಫೋನುಗಳಲ್ಲಿ ಇಲ್ಲದಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
Vijaya Karnataka Web e news
ಇ-ನ್ಯೂಸ್: ಇವುಗಳಿಗೆ WhatsApp ಬೆಂಬಲ ಇಲ್ಲ


ಆಂಡ್ರಾಯ್ಡ್ ಬಲ ವರ್ಧನೆ

ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಬಲ ವರ್ಧನೆಯಾಗಿದ್ದು, 2016ರ ಮೂರನೇ ತ್ರೈಮಾಸಿಕದಲ್ಲಿ ಶೇ.87.5 ಸಾಧನಗಳಲ್ಲಿ ಆಂಡ್ರಾಯ್ಡ್ ಇದೆ. ಸ್ಟ್ರಾಟಜಿ ಅನಲಿಟಿಕ್ಸ್ ನಡೆಸಿದ ಸಮೀಕ್ಷಾ ವರದಿಯ ಪ್ರಕಾರ, ವರ್ಷದ ಹಿಂದೆ ಇದೇ ಅವಧಿಯಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಪ್ರಮಾಣವು ಶೇ.84.1 ಇತ್ತು. ಆ್ಯಪಲ್‌ನ ಐಒಎಸ್ ಪಾಲು ಶೇ.13.6 ಇದ್ದದ್ದು ಈ ವರ್ಷ ಶೇ.12.1 ಕ್ಕೆ ಇಳಿದಿದೆ. ಪ್ರಸ್ತುತ ಅಂಕಿ ಅಂಶಗಳನ್ನು ನೋಡಿದರೆ, ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮೀರಿಸುವುದು ಸಾಧ್ಯವೇ ಇಲ್ಲ ಎಂದು ಸ್ಟ್ರಾಟಜಿ ಅನಲಿಟಿಕ್ಸ್‌ನ ಸಮೀಕ್ಷಕ ವೂಡಿ ಓಹ್ ಹೇಳಿದ್ದಾರೆ. ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು ಮೊಬೈಲ್ ತಯಾರಕರಿಗೆ ಗೂಗಲ್ ಉಚಿತವಾಗಿ ನೀಡುತ್ತಿದೆ.

ವಿಂಡೋಸ್ 7, 8 ಮಾರಾಟ ಸ್ಥಗಿತ

ವಿಂಡೋಸ್‌ 7 ಹಾಗೂ ವಿಂಡೋಸ್‌ 8 ಆಪರೇಟಿಂಗ್ ಸಿಸ್ಟಮ್‌ಗಳ ಮಾರಾಟವನ್ನು ಅಮೆರಿಕದ ಟೆಕ್‌ ದಿಗ್ಗಜ ಮೈಕ್ರೋಸಾಫ್ಟ್‌ ಸ್ಥಗಿತಗೊಳಿಸಿದೆ. ಇದರೊಂದಿಗೆ ಯಾವುದೇ ಹೊಸ ಮೈಕ್ರೋಸಾಫ್ಟ್ ಸಾಧನಗಳಲ್ಲಿ ವಿಂಡೋಸ್ 10 ಕಾರ್ಯಾಚರಣಾ ವ್ಯವಸ್ಥೆಯ ಬಳಕೆ ಕಡ್ಡಾಯವಾಗಲಿದೆ. ಡೆಲ್‌, ತೋಶಿಬಾ ಮುಂತಾದ ಕಂಪನಿಗಳು ಇನ್ನು ಮುಂದೆ ಹೊರತರಲಿರುವ ವಿಂಡೋಸ್ ಸಾಧನಗಳಲ್ಲಿ ಇನ್ನು ಮುಂದೆ ವಿಂಡೋಸ್ ಹಳೆಯ ಆವೃತ್ತಿಗಳು ಲಭ್ಯವಾಗಲಾರವು. 2009ರಲ್ಲಿ ಪರಿಚಯಿಸಲಾದ ವಿಂಡೋಸ್‌ 7, ಏಳು ವರ್ಷಗಳ ಕಾಲ ಮಾರಾಟಕ್ಕೆ ಲಭ್ಯವಿತ್ತು. ವಿಂಡೋಸ್‌ 8/8.1 ಕೇವಲ 4 ವರ್ಷಗಳ ಕಾಲ ಮಾರಾಟವಾಯಿತು. ವಿಂಡೋಸ್‌ 7 ಹಾಗೂ ವಿಂಡೋಸ್‌ 8.1ರ ಅಪ್‌ಡೇಟ್‌ ಬೆಂಬಲ 2020 ಹಾಗೂ 2023ವರೆಗೆ ಮುಂದುವರಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌