ಆ್ಯಪ್ನಗರ

e-ನ್ಯೂಸ್: ​ ಅವಸರಕ್ಕೆ ಗೂಗಲ್‌ ನೆರವು

ಗೂಗಲ್‌ ಮ್ಯಾಪ್‌ ಇದುವರೆಗೆ ಪೆಟ್ರೋಲ್‌ ಬಂಕ್‌, ಎಟಿಎಂ, ಅಂಗಡಿಗಳು, ಮಾಲ್‌ಗಳ ದಾರಿ ತೋರುತ್ತಿತ್ತು, ಇದೀಗ ಇದಕ್ಕೆ ಟಾಯ್ಲೆಟ್‌ ಕೂಡ ಸೇರ್ಪಡೆಯಾಗಿದೆ.

Vijaya Karnataka Web 2 Jan 2017, 4:16 pm
ಗೂಗಲ್‌ ಮ್ಯಾಪ್‌ ಇದುವರೆಗೆ ಪೆಟ್ರೋಲ್‌ ಬಂಕ್‌, ಎಟಿಎಂ, ಅಂಗಡಿಗಳು, ಮಾಲ್‌ಗಳ ದಾರಿ ತೋರುತ್ತಿತ್ತು, ಇದೀಗ ಇದಕ್ಕೆ ಟಾಯ್ಲೆಟ್‌ ಕೂಡ ಸೇರ್ಪಡೆಯಾಗಿದೆ.
Vijaya Karnataka Web e news
e-ನ್ಯೂಸ್: ​ ಅವಸರಕ್ಕೆ ಗೂಗಲ್‌ ನೆರವು


ಇದು ಉತ್ತರ ಪ್ರದೇಶದಲ್ಲಿ ಮಾತ್ರ.'ನಗರಾಭಿವೃದ್ಧಿ ಇಲಾಖೆಯ ಜತೆಗೆ ಕೈಜೋಡಿಸಿರುವ ಗೂಗಲ್‌, ಸುಮಾರು 4 ಸಾವಿರ ಸಾರ್ವಜನಿಕ ಶೌಚಾಲಯಗಳ ಸ್ಥಳ, ವಿಳಾಸ ಮತ್ತು ಕಾರ್ಯನಿರ್ವಹಿಸುವ ಅವಧಿಯ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಈ ಮೂಲಕ ದೇಶದ ಸ್ವಚ್ಚತೆಗೆ ಕೊಡುಗೆ ನೀಡುತ್ತಿದೆ,' ಎಂದು ಗೂಗಲ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 'ಗುರುಗ್ರಾಮ, ನೊಯ್ಡಾ, ಫರಿದಾಬಾದ್‌, ಭೂಪಾಲ್‌ ಮತ್ತು ಮಧ್ಯಪ್ರದೇಶದ ಇಂದೋರ್‌ನಲ್ಲಿಯ ನಾಲ್ಕು ಸಾವಿರ ಸಾರ್ವಜನಿಕ ಶೌಚಾಲಯಗಳ ಬಗ್ಗೆ ಮಾಹಿತಿ ದೊರೆಯಲಿದೆ. ಭಾರತೀಯರು ಮತ್ತು ವಿದೇಶಿ ಪ್ರವಾಸಿಗರು ಹತ್ತಿರದ ಶೌಚಾಲಯದ ಬಗ್ಗೆ ಮಾಹಿತಿ ಪಡೆಯಬಹುದು. ಈ ಸೇವೆ ಮೊಬೈಲ್‌ ಆ್ಯಪ್‌ ಮತ್ತು ಡೆಸ್ಕ್‌ಟಾಪ್‌ ಎರಡಲ್ಲೂ ಲಭ್ಯ. ಗೂಗಲ್‌ ಮ್ಯಾಪ್‌ನಲ್ಲಿ 'ಪಬ್ಲಿಕ್‌ ಟಾಯ್ಲೆಟ್‌' ಎಂದು ನಮೋದಿಸಿದರೆ ಸಾಕು. ಹತ್ತಿರದ ಶೌಚಾಲಯದ ಬಗ್ಗೆ ಸಮಗ್ರ ಮಾಹಿತಿ ದೊರೆಯುತ್ತದೆ.

ಅಗ್ನಿ -5 ಒಳಲೋಕ

5,000 ಕಿ.ಮೀ.ಗಿಂತಲೂ ಹೆಚ್ಚು ದೂರ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿ ಅಗ್ನಿ -5 ಅನ್ನು ಇದುವರೆಗೆ ನಾಲ್ಕು ಬಾರಿ ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದು, ಈ ವರ್ಷ ಇದನ್ನು ಸೇನೆಗೆ ಸೇರುವ ನಿರೀಕ್ಷೆ ಇದೆ.ಈ ಹೈಟೆಕ್‌ ಕ್ಷಿಪಣಿಯನ್ನು ಸುಲಭವಾಗಿ ಇತರ ಕ್ಷಿಪಣಿ ನಾಶಕಗಳು ಮತ್ತು ರೆಡಾರ್‌ಗಳು ಗುರುತಿಸುವುದು ಕಷ್ಟ.ಆರಂಭದಲ್ಲಿ ಮೇಲ್ಮುಖವಾಗಿ ಚಲಿಸುವ ಈ ಕ್ಷಿಪಣಿಯನ್ನು ಗರಿಷ್ಠ 600 ಕಿ.ಮೀ. ಎತ್ತರದವರೆಗೂ ತಲುಪಿದ ನಂತರ ಪಥ ಬದಲಿಸಿ ಕೆಳಮುಖವಾಗಿ ಗುರಿಯತ್ತ ಚಲಿಸುವಂತೆ ಪ್ರೋಗ್ರಾಂ ಮಾಡಲಾಗಿದೆ.ಗರಿಷ್ಟ 600 ಕಿ.ಮೀ. ಎತ್ತರಕ್ಕೆ ತಲುಪಿದ ಬಳಿಕ ಮತ್ತೆ ಭೂ ವಾತಾವರಣಕ್ಕೆ ವಾಪಸಾಗುವಾಗ, ಘರ್ಷಣೆಯಿಂದಾಗಿ ಕ್ಷಿಪಣಿ ಮೇಲ್ಮೈನ ಉಷ್ಣಾಂಶ ಸುಮಾರು 4000 ಡಿಗ್ರಿ ಸೆಲ್ಷಿಯಸ್‌ಗೆ ಏರುತ್ತದೆ. ಆದರೆ, ಈ ವೇಳೆ ಕ್ಷಿಪಣಿಯ ಮೇಲ್ಮೈ ಮೇಲೆ ಅಳವಡಿಸಲಾಗಿರುವ 'ಕಾರ್ಬನ್‌-ಕಾರ್ಬನ್‌' ಸಂಯುಕ್ತವು ತಾನು ಉರಿಯುತ್ತಾ, ಒಳಗಿನ ಉಷ್ಣಾಂಶ 50 ಡಿಗ್ರಿ ಸೆಲ್ಷಿಯಸ್‌ ದಾಟದಂತೆ ಕಾಪಾಡುತ್ತದೆ. ಆ ಮೂಲಕ ಒಳಗಿನ ಶಸ್ತ್ರಾಸ್ತ್ರಗಳನ್ನು ರಕ್ಷಿಸುತ್ತದೆ.

ಪುರಾತನ ವೃಕ್ಷ ರಕ್ಷಣೆ

ಉತ್ತರ ಅಮೆರಿಕದ Bristlecone pines, Methusaleh ಪ್ರಪಂಚದ ಹಳೇ ಮರಗಳು. ಕೈಗಾರಿಕೀಕರಣದಿಂದ ಭೂ ತಾಪಮಾನದಲ್ಲಿ ತೀವ್ರ ಏರುಪೇರಾಗಿರುವುದರ ಪರಿಣಾಮದಿಂದ ಈ ಪ್ರಾಚೀನ ವೃಕ್ಷಗಳು ಧರೆಗುರುಳುವ ಆತಂಕ ಎದುರಾಗಿದೆ ಎಂದು ಇಕಾಲಜಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆತಂಕಗೊಂಡವರು ಈ ಮರಗಳನ್ನು ಉಳಿಸಲು ಯಾವುದಾದರೂ ತಂತ್ರಜ್ಞಾನವಿದೆಯೇ ಎಂದು ತಡಕಾಡುತ್ತಿದ್ದಾರೆ. ಭೂ ಜ್ವರವನ್ನು ತಪ್ಪಿಸಬಹುದಲ್ಲ ಎನ್ನುವುದು ಸಾದಾ ಪ್ರಶ್ನೆಯಾದರೂ ಉತ್ತರ ಸರಳವಲ್ಲ. ಇದು ಆರ್ಥಿಕತೆ, ವಿಜ್ಞಾನ, ತಂತ್ರಜ್ಞಾನ, ಜನರ ಬದುಕನ್ನೇ ಬದಲಾಯಿಸುವ ವಿದ್ಯಮಾನ, ಹೀಗಾಗಿ ಸರಳ ತಾಂತ್ರಿಕ ಉಪಾಯಗಳತ್ತ ಈಗ ಎಲ್ಲರ ಚಿತ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌