ಆ್ಯಪ್ನಗರ

​ ಫೇವರಿಟ್ ಆಪ್: Rio 2016

ಈಗ ಎಲ್ಲೆಡೆ ಒಲಿಂಪಿಕ್ಸ್ ಜ್ವರ. ಇದಕ್ಕಾಗಿಯೇ ಸಾಕಷ್ಟು ಆ್ಯಪ್‌ಗಳು ಬಂದಿವೆ. ರಿಯಲ್ ಟೈಮ್ ಚಿತ್ರಗಳು ಮತ್ತು ವೀಡಿಯೋಗಳನ್ನು ನಾವು Rio 2016 ಎಂಬ ಅಧಿಕೃತ ಆ್ಯಪ್ ಮೂಲಕ ನೋಡಬಹುದು.

Vijaya Karnataka Web 8 Aug 2016, 4:00 am
ಈಗ ಎಲ್ಲೆಡೆ ಒಲಿಂಪಿಕ್ಸ್ ಜ್ವರ. ಇದಕ್ಕಾಗಿಯೇ ಸಾಕಷ್ಟು ಆ್ಯಪ್‌ಗಳು ಬಂದಿವೆ. ರಿಯಲ್ ಟೈಮ್ ಚಿತ್ರಗಳು ಮತ್ತು ವೀಡಿಯೋಗಳನ್ನು ನಾವು Rio 2016 ಎಂಬ ಅಧಿಕೃತ ಆ್ಯಪ್ ಮೂಲಕ ನೋಡಬಹುದು. ಅಲ್ಲದೆ ಎಲ್ಲೆಲ್ಲಿ, ಯಾವ್ಯಾವ ಕ್ರೀಡಾಸ್ಫರ್ಧೆಗಳು ನಡೆಯಲಿವೆ ಎಂಬುದರ ವಿವರಗಳೂ ಇದರಲ್ಲಿವೆ. ಆ್ಯಪಲ್ ಹಾಗೂ ಆಂಡ್ರಾಯ್ಡ್ ಸಾಧನಗಳಿಗೆ ಉಚಿತವಾಗಿ ಲಭ್ಯವಿದೆ.
Vijaya Karnataka Web favorite app rio 2016
​ ಫೇವರಿಟ್ ಆಪ್: Rio 2016


Hotstar

ಆಂಡ್ರಾಯ್ಡ್ ಹಾಗೂ ಆ್ಯಪಲ್ ಸಾಧನಗಳಿಗೆ ಲಭ್ಯವಿರುವ ಹಾಟ್‌ಸ್ಟಾರ್ ಎಂಬ ಮೊಬೈಲ್ ಆ್ಯಪ್ ಅಳವಡಿಸಿಕೊಂಡರೆ, ಉಚಿತವಾಗಿ ಒಲಿಂಪಿಕ್ ಕ್ರೀಡೆಗಳ ನೇರ ಪ್ರಸಾರ ನೋಡಬಹುದು. ಇದಕ್ಕೆ ಯಾವುದೇ ಚಂದಾದಾರಿಕೆ ಶುಲ್ಕವೂ ಇಲ್ಲ. ಇದಲ್ಲದೆ, ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತೀಯ ಅಥ್ಲೀಟ್‌ಗಳ ಬಗ್ಗೆ ಕ್ಲಿಪ್ಪಿಂಗ್ಸ್ ಕೂಡ ಇದರಲ್ಲಿದೆ. ಮೂಲತಃ ಕ್ರಿಕೆಟಿಗೆ ಆದ್ಯತೆ ನೀಡುತ್ತಿದ್ದ ಈ ಆ್ಯಪ್, ಇದೀಗ ಒಲಿಂಪಿಕ್ಸ್ ಪ್ರಸಾರವನ್ನೂ ನೀಡುತ್ತಿದೆ.

ಉಳಿದಂತೆ ESPN ಕೂಡ ಒಲಿಂಪಿಕ್ಸ್ ಸರಣಿಯ ಕ್ರೀಡೆಗಳನ್ನು ತೋರಿಸಲಿದೆ. ಇದರಲ್ಲಿ ಬ್ರೇಕಿಂಗ್ ನ್ಯೂಸ್, ಲೈವ್ ವೀಡಿಯೋ, ಆಡಿಯೋ ಸ್ಟ್ರೀಮಿಂಗ್ ಕೂಡ ಇರುತ್ತದೆ. ಇದರೊಂದಿಗೆ ಮತ್ತೊಂದು ಆ್ಯಪ್ NBC Olympics ಕೂಡ ರಿಯೋ ಒಲಿಂಪಿಕ್ಸ್ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ.

-ಅಭಿಜಾತ, ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌